ಚಿತ್ರದುರ್ಗದಲ್ಲಿ ಸಿಎಂ ಬೆಳೆ ಪರಿಶೀಲನೆ 
ರಾಜ್ಯ

ಚಿತ್ರದುರ್ಗ: ಆಲಮಟ್ಟಿ ಹೊರತಾಗಿ ರಾಜ್ಯದ ಬೇರೆ ಯಾವ ಭಾಗದಲ್ಲೂ ಉತ್ತಮ ಮಳೆ ಇಲ್ಲ- ಸಿಎಂ ಡಿ.ಕೆ ಶಿವಕುಮಾರ್

ಅತ್ಯುತ್ತಮ ಶಾಲೆಗಳು ಗ್ರಾಮೀಣ ಭಾಗದ ಶಾಲೆಗಳನ್ನು ತಮ್ಮ ಶಾಲೆಗಳ ಮಟ್ಟಕ್ಕೆ ಕೊಂಡೊಯ್ಯಲು ದತ್ತು ತೆಗೆದುಕೊಳ್ಳುವುದು. ಸಿಎಸ್ ಆರ್ ಹಣವನ್ನು ಹೀಗೆ ಖರ್ಚು ಮಾಡಿದರೆ ಪ್ರಾಥಮಿಕ ಶಿಕ್ಷಣ ಬಲಗೊಳ್ಳುತ್ತದೆ.

ಚಿತ್ರದುರ್ಗ: ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಅತ್ಯುತ್ತಮ ಖಾಸಗಿ ಶಾಲೆಗಳು ದತ್ತು ಪಡೆದು ಶಿಕ್ಷಕರನ್ನು ನಿಯೋಜಿಸಿ, ತಮ್ಮ ಶಾಲೆಗಳ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ನೀಡಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಹಿರಿಯೂರಿನ ವೇದಾವತಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.

ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳು ದತ್ತು ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಕೇಳಿದಾಗ, "ಖಾಸಗಿ ಶಾಲೆಗಳು ಇದರ ಬಗ್ಗೆ ನನ್ನ ಬಳಿ ಹೇಳಲಿ ಆ ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ. ಇದು ನನಗೂ ಅವರಿಗೂ ಇರುವ ಒಪ್ಪಂದ. ಖಾಸಗಿ ಶಾಲೆಗಳು ಎಂದರೆ ಎಲ್ಲಾ ಶಾಲೆಗಳು ದತ್ತು ತೆಗೆದುಕೊಳ್ಳುವುದಲ್ಲ. ಇದಕ್ಕೆ ಕೆಲವು ಮಾನದಂಡಗಳಿವೆ ಎಂದರು.

ಅತ್ಯುತ್ತಮ ಶಾಲೆಗಳು ಗ್ರಾಮೀಣ ಭಾಗದ ಶಾಲೆಗಳನ್ನು ತಮ್ಮ ಶಾಲೆಗಳ ಮಟ್ಟಕ್ಕೆ ಕೊಂಡೊಯ್ಯಲು ದತ್ತು ತೆಗೆದುಕೊಳ್ಳುವುದು. ಸಿಎಸ್ ಆರ್ ಹಣವನ್ನು ಹೀಗೆ ಖರ್ಚು ಮಾಡಿದರೆ ಪ್ರಾಥಮಿಕ ಶಿಕ್ಷಣ ಬಲಗೊಳ್ಳುತ್ತದೆ. ಹಳ್ಳಿ ಮಕ್ಕಳು ನಗರಗಳಿಗೆ ಶಿಕ್ಷಣಕ್ಕಾಗಿ ವಲಸೆ ಬರುವುದು ತಪ್ಪಬೇಕು ಎಂದು ಹೇಳಿದರು.

ಅವರಿಗೂ ಬೆಂಗಳೂರು ಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ನನ್ನ ಅಭಿಲಾಷೆ. ಸರ್ಕಾರ 1.40 ಲಕ್ಷ ರೂಪಾಯಿಯನ್ನು ಒಂದು ಮಗುವಿನ ಮೇಲೆ ಖರ್ಚು ಮಾಡುತ್ತಿದೆ. ಆದರೂ ಸಹ ಗುಣಮಟ್ಟದ ಶಿಕ್ಷಣ ನೀಡಲು ತೊಡಕಾಗುತ್ತಿದೆ‌. ಅದಕ್ಕಾಗಿ ನಾನು ಖಾಸಗಿ ಅವರ ಬಳಿ ಮಾತುಕತೆ ನಡೆಸಿದ್ದೇನೆ” ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಬರ ಪರಿಸ್ಥಿತಿ ಹಾಗೂ ಪ್ರಗತಿ ಪರಿಶೀಲನೆ ಮಾಡುವ ಬದಲು, ಚಿತ್ರದುರ್ಗದಲ್ಲಿ ನಡೆಸೋಣ ಎಂದು ಬಂದಿದ್ದೇನೆ. ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳ ಸಭೆಯನ್ನು ಈಗಾಗಲೇ ನಡೆಸಿದ್ದೇನೆ. ಈಗ ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಭಾಗಗಳಿಗೆ ಅನುಕೂಲವಾಗಲಿದೆ. ಆದ ಕಾರಣ ಸಭೆ ನಡೆಸುತ್ತಿದ್ದೇ‌ನೆ. ಇಂದು ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತೇನೆ” ಎಂದು ತಿಳಿಸಿದರು.

“ಬೆಳಗಾವಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆ ವೇಳೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ತೀರ್ಮಾನ ಮಾಡಿದ್ದೇವೆ. ಆಲಮಟ್ಟಿ ಅಣೆಕಟ್ಟು ಹೊರತಾಗಿ ರಾಜ್ಯದ ಬೇರೆ ಯಾವ ಭಾಗದಲ್ಲೂ ಉತ್ತಮ ಮಳೆ ಇಲ್ಲ.

ರಾಜ್ಯದಲ್ಲಿ ಬರ ಇನ್ನೂ ಹೆಚ್ಚಾಗುತ್ತಲೇ ಇದೆ. ಬರ ಪರಿಸ್ಥಿತಿ ಬಗ್ಗೆ ಅಧಿಕಾರಿಗಳು ಈಗಾಗಲೇ ಮಾಹಿತಿ ಪಡೆದುಕೊಂಡಿದ್ದು, ಅವರ ಜೊತೆ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಭಾನುವಾರ ದಿವಂಗತ ಸುಧಾಕರ್ ಅವರ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ನಾಳೆಯೂ ಚಿತ್ರದುರ್ಗಕ್ಕೆ ಆಗಮಿಸಲಿದ್ದೇನೆ” ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಾರ್ದಿಕ್, ಪಂತ್'ಗೆ ಬಿಗ್ ಶಾಕ್; ವಿರಾಟ್, ರೋಹಿತ್​ ಶರ್ಮಾಗೆ ಚಾನ್ಸ್

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ