ಪ್ರತಿಭಾ ಕುಳಾಯಿ 
ರಾಜ್ಯ

ಮಂಗಳೂರು: ಹಸಿರು ಸೀರೆ ಹಾಕೊಂಡು ಆಫೀಸ್​​ಗೆ ಬಾ ಎಂದ ಅಧಿಕಾರಿ; ಮಹಿಳಾ ಸಿಬ್ಬಂದಿ ಹಿಂದೆ ಬಿದ್ದವನಿಗೆ ಚಳಿ ಬಿಡಿಸಿದ ಗ್ರೀನ್​ ಗ್ಯಾಂಗ್!

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿಎಚ್ ಮೋಹನ್ ಅವರು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಮಂಗಳೂರು: ಮಂಗಳೂರಿನ ಎಪಿಎಂಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆ ಸಿಬ್ಬಂದಿಗೆ ಅಧಿಕಾರಿಯೊಬ್ಬರು ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಗ್ರೂಪ್ ‘ಡಿ’ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ಸೋಮವಾರ ಹಸಿರು ಸೀರೆ ಹಾಕೊಂಡು ಆಫೀಸ್​​ಗೆ ಬಾ ಎಂದಿದ್ದ ಅಧಿಕಾರಿಗೆ ಚಳಿ ಬಿಡಿಸಲು ಗ್ರೀನ್​ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಹಸಿರು ಸೀರೆಯುಟ್ಟು ಬಂದ ಹೆಣ್ಮಕ್ಕಳ ದಂಡು ನೋಡಿ ಅಧಿಕಾರಿ ಶಾಕ್ ಆಗಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿಎಚ್ ಮೋಹನ್ ಅವರು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ನಿಯೋಗ ಬೈಕಂಪಾಡಿಯಲ್ಲಿರುವ ಎಪಿಎಂಸಿ ಕಚೇರಿಗೆ ಇಂದು (ಸೋಮವಾರ) ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡಿದೆ.

ಮೋಹನ್ ಅವರು ಮಹಿಳೆಗೆ ಹಸಿರು ಸೀರೆ ಹಾಕೊಂಡು ಬಾ ಎಂದು ಹೇಳಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದಲ್ಲಿ, ಮಹಿಳೆಯರು ಗ್ರೀನ್​ ಸೀರೆಯುಟ್ಟು ಕಚೇರಿಗೆ ಎಂಟ್ರಿ ಕೊಟ್ಟಿದ್ದರು. ಈ ಗ್ರೀನ್​ ಗ್ಯಾಂಗ್ ಕಂಡು ಅಧಿಕಾರಿ ಶೇಕ್ ಆಗಿದ್ದು, ಮಾತಾಡಲು ಆಗದೆ ತಡವರಿಸಿದ್ದಾರೆ.

ಸಂತ್ರಸ್ತ ಮಹಿಳೆಯು ಕಳೆದ ಎರಡೂವರೆ ವರ್ಷಗಳಿಂದ ಎಪಿಎಂಸಿ ಕಚೇರಿಯಲ್ಲಿ ಗ್ರೂಪ್ 'ಡಿ' ನೌಕರರಾಗಿ ಕೆಲಸ ಮಾಡುತ್ತಿದ್ದು, ಇಬ್ಬರು ಮಕ್ಕಳನ್ನು ಹೊಂದಿರುವ ಪೋಷಕಿಯಾಗಿದ್ದಾರೆ. ಎಪಿಎಂಸಿ ಅಧಿಕಾರಿ ಸುದೀರ್ಘ ಅವಧಿಯಿಂದ ಮಹಿಳಾ ಸಿಬ್ಬಂದಿಗೆ ಮೈಕೈ ಮುಟ್ಟುವುದು, ಅಸಹ್ಯವಾಗಿ ವರ್ತಿಸುವುದು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.

ಸಂತ್ರಸ್ತೆಯು ತಿಂಗಳಿಗೆ 15,000 ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದು, ತನ್ನ ಬೇಡಿಕೆಗೆ ಸಮ್ಮತಿಸಿದರೆ ವೇತನವನ್ನು 25,000 ರೂಪಾಯಿಗೆ ಏರಿಸುವುದಾಗಿ ಆರೋಪಿ ಆಮಿಷ ಒಡ್ಡಿದ್ದರು. ಆತನ ಅಸಭ್ಯ ಬೇಡಿಕೆಗೆ ಒಪ್ಪದಿದ್ದಾಗ, ಕಚೇರಿಯ ಒಳಗಿನ ಕೆಲಸದಿಂದ ತೆಗೆದು ಶೌಚಾಲಯ ಶುಚಿಗೊಳಿಸುವ ಹಾಗೂ ಗುಡಿಸುವ ಕೆಲಸಕ್ಕೆ ಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಕಳೆದ ಶನಿವಾರ ಆರೋಪಿಯು ಸಂತ್ರಸ್ತೆಗೆ ಕರೆ ಮಾಡಿ, ತನ್ನೊಂದಿಗೆ ಸಹಕರಿಸಲು ಸಮ್ಮತಿ ಇದ್ದರೆ ಸೋಮವಾರ ಹಸಿರು ಬಣ್ಣದ ಸೀರೆ ಅಥವಾ ಉಡುಪು ಧರಿಸಿ ಬರಬೇಕು. ಹಸಿರು ಉಡುಪು ಧರಿಸಿದರೆ ಸಮ್ಮತಿ ಎಂದು ತಿಳಿಯುವುದಾಗಿ ಷರತ್ತು ವಿಧಿಸಿದ್ದನೆಂದು ಕುಳಾಯಿ ಆರೋಪಿಸಿದ್ದಾರೆ.

ಆರೋಪಿಯ ಈ ವರ್ತನೆಯ ವಿರುದ್ಧ ಪ್ರತಿಭಟಿಸುವ ಸಲುವಾಗಿ, ಸೋಮವಾರ ಪ್ರತಿಭಾ ಕುಳಾಯಿ ಹಾಗೂ ಹಲವು ಮಹಿಳಾ ಮುಖಂಡರು ಮುನ್ನೆಚ್ಚರಿಕೆಯಾಗಿ ಹಸಿರು ಬಣ್ಣದ ಸೀರೆ ಧರಿಸಿ ಎಪಿಎಂಸಿ ಕಚೇರಿಗೆ ಆಗಮಿಸಿದರು. ಕಚೇರಿಯಲ್ಲಿದ್ದ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತಾನೇನು ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ ಅಧಿಕಾರಿಗೆ ಮಹಿಳೆಯರು ತಪರಾಕಿ ನೀಡಿ, "ನಿನ್ನ ಜೇಬಿನಿಂದ ಸಂಬಳ ನೀಡುತ್ತಿದ್ದೀಯಾ?" ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪಣಂಬೂರು ಠಾಣಾ ಉಪನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸಂತ್ರಸ್ತೆ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ಆಕೆಗೆ ರಕ್ಷಣೆ ಸಿಗಬೇಕು. ಕಂಪ್ಲೇಂಟ್ ನೀಡಿದ ಕಾರಣಕ್ಕೆ ಆಕೆಯನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಪ್ರತಿಭಾ ಕುಳಾಯಿ ಎಪಿಎಂಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪಣಂಬೂರು ಪೊಲೀಸ್ ಇನ್ಸ್​ಪೆಕ್ಟರ್, ಸಂತ್ರಸ್ತೆಯಿಂದ ದೂರು ಪಡೆದು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ವಿಜಯ್‌ಗೆ ತೀವ್ರ ಹಿನ್ನಡೆ: ಕರೂರ್ ಕಾಲ್ತುಳಿತದ ಸಂತ್ರಸ್ತರಿಗೆ ಉದ್ಯೋಗ ನೀಡುವ TVK ಸರ್ಕಾರದ ಆದೇಶ ರದ್ದು!

ಒಪ್ಪಂದ ಮುರಿದು ನಮ್ ಮೇಲೆ ಕೇಸ್ ಹಾಕ್ತಿದ್ದೀರಾ, ಮತ್ತೆ ಪ್ರತಿಭಟನೆ ಮಾಡ್ಬೇಕಾ? ಕೇಂದ್ರಕ್ಕೆ CJP ಎಚ್ಚರಿಕೆ

ನನ್ನನ್ನು ನೆಮ್ಮದಿಯಾಗಿರಲು ಬಿಡಿ: ಅಶ್ಲೀಲ ಟ್ರೋಲಿಗರ ವಿರುದ್ಧ ದೂರು ದಾಖಲಿಸಿದ ನಟ ಧ್ರುವಂತ್

ಸ್ಪೀಕರ್ ಮಧ್ಯಸ್ಥಿಕೆ ಬಳಿಕ ಪಕ್ಷಗಳ ಒಪ್ಪಿಗೆ: 'ಪ್ರಶ್ನೆ ಪತ್ರಿಕೆ ಸೋರಿಕೆ ತಡೆ' ಮಸೂದೆ ಕುರಿತು ನಾಳೆ ಲೋಕಸಭೆಯಲ್ಲಿ ಚರ್ಚೆ ಸಾಧ್ಯತೆ!

ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: ಸಿಬಿಐ, ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಒತ್ತಾಯ