ಸಂಗ್ರಹ ಚಿತ್ರ 
ರಾಜ್ಯ

ಹಿಮಾಲಯದಲ್ಲಿ ಕರಗುತ್ತಿರುವ ಮಂಜುಗಡ್ಡೆ, ನೀರಿನ ಮಟ್ಟ ಇಳಿಕೆ ಆತಂಕಕಾರಿ: ತಜ್ಞರ ಗಂಭೀರ ಕಳವಳ

ಸ್ಥಳೀಯ ಸಮುದಾಯಗಳು ಮತ್ತು ಕೆಳಭಾಗದಲ್ಲಿ ವಾಸಿಸುವವರ ನೀರಿನ ಅಗತ್ಯತೆಯ ಮೇಲೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಗಡಿಗಳಲ್ಲಿಯೂ ಸಹ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಬೆಂಗಳೂರು: ನಿರಂತರವಾಗಿ ಹಿಮದಿಂದ ಕೂಡಿದ, ಅದ್ಭುತ ಹಾಗೂ ಎತ್ತರದ ಪರ್ವತ ಶ್ರೇಣಿಗಳ ಹಿಮಾಲಯದಲ್ಲಿ ಪರಿಸರ ಬಿಕ್ಕಟ್ಟು ಎದುರಾಗಿದೆ.

ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಹಿಮನದಿಶಾಸ್ತ್ರಜ್ಞರು ಮತ್ತು ತಜ್ಞರು ಸಿಂಧೂ ನದಿ ಸೇರಿದಂತೆ ನದಿಗಳು ಮತ್ತು ಹೊಳೆಗಳಲ್ಲಿನ ನೀರಿನ ಮಟ್ಟ ಕುಸಿಯುತ್ತಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಇದರಿಂದ ಸ್ಥಳೀಯ ಸಮುದಾಯಗಳು ಮತ್ತು ಕೆಳಭಾಗದಲ್ಲಿ ವಾಸಿಸುವವರ ನೀರಿನ ಅಗತ್ಯತೆಯ ಮೇಲೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಗಡಿಗಳಲ್ಲಿಯೂ ಸಹ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಕಳೆದ ದಶಕದಿಂದ ನೀರಿನ ಮಟ್ಟ ಕಡಿಮೆಯಾಗುತ್ತಿವೆ, ಆದರೆ ಈ ವರ್ಷ ಅದು ಗಮನಾರ್ಹವಾಗಿ ಸ್ಪಷ್ಟವಾಗಿದೆ ಎಂದು ಹೇಳಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ದಿವೇಚಾ ಕೇಂದ್ರದ ಹವಾಮಾನ ಬದಲಾವಣೆ ಕೇಂದ್ರದ ಪ್ರಸಿದ್ಧ ಹಿಮನದಿಶಾಸ್ತ್ರಜ್ಞ ಮತ್ತು ವಿಶೇಷ ವಿಜ್ಞಾನಿ ಪ್ರೊಫೆಸರ್ ಅನಿಲ್ ಕುಲಕರ್ಣಿ, ಹಿಮಾಲಯದಲ್ಲಿ ಕ್ಷೀಣಿಸುತ್ತಿರುವ ನೀರಿನ ಮಟ್ಟಗಳು ಮತ್ತು ಹಿಮದ ಹೊದಿಕೆ ಕಡಿಮೆಯಾಗುವುದಕ್ಕೆ ವಿವಿಧ ಆಯಾಮಗಳಿವೆ ಎಂದು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಮಾನವ ಚಟುವಟಿಕೆ ಹಿಮದ ದ್ರವ್ಯರಾಶಿಯ ಸಂಗ್ರಹ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು. ಈವರ್ಷ, ಹಿಮದ ದ್ರವ್ಯರಾಶಿಯಲ್ಲಿ ಇಳಿಕೆ ಕಂಡುಬಂದಿದೆ. ಹೆಚ್ಚಿನ ಎತ್ತರದಲ್ಲಿ ನಿರೀಕ್ಷೆಗಿಂತ ಹೆಚ್ಚು ಮಟ್ಟದಲ್ಲಿ ಉಷ್ಣತೆ ಹೆಚ್ಚುತ್ತಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಬಯಲು ಪ್ರದೇಶಗಳಿಗಿಂತ ತಾಪಮಾನ ಹೆಚ್ಚಾಗಿದೆ.

ಇದನ್ನು ಪರಿಹರಿಸಲು, ಐಸ್ ಸ್ತೂಪಗಳ ಪರಿಕಲ್ಪನೆಯನ್ನು (ಚಳಿಗಾಲ ಮತ್ತು ಕಠಿಣ ಸಮಯಗಳಿಗೆ ನೀರನ್ನು ಸಂಗ್ರಹಿಸಲು ಕೃತಕ ಹಿಮನದಿಗಳನ್ನು ರಚಿಸಲು ಕಸಿ ಮಾಡುವ ತಂತ್ರ) ಜನಪ್ರಿಯಗೊಳಿಸಲಾಗುತ್ತಿದೆ, ”ಎಂದು ಅವರು ಹೇಳಿದರು.

ಹಿಮಾಲಯ ಪರ್ವತಗಳಲ್ಲಿನ ಸಮಸ್ಯೆಗಳು ಇತರ ಪ್ರದೇಶಗಳಿಗೆ ಹೋಲಿಸಿದರೆ ವಿಭಿನ್ನ ಮತ್ತು ಹೆಚ್ಚು ಸಂಕೀರ್ಣವಾಗಿವೆ. ಅವು ಸ್ಥಳೀಯವಾಗಿ, ಗಡಿಗಳಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಿನ್ನವಾಗಿವೆ. ಕ್ರಮೇಣ ಸಿಂಧೂ ನದಿಯ ಮೇಲೆ ಪರಿಣಾಮ ಬೀರಲಿದೆ. .

ಡೆಹ್ರಾಡೂನ್‌ನ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ನಿರ್ದೇಶಕ ಪ್ರೊ. ಕಲಾಚಂದ್ ಸೈನ್, ಈ ವರ್ಷ ಮತ್ತು ವಿಶೇಷವಾಗಿ ಈ ಋತುವಿನಲ್ಲಿ ಹಿಮ ಕಡಿಮೆಯಾಗಿದೆ ಮತ್ತು ಹಿಮದ ಹೊದಿಕೆಯು ಹಿಮನದಿಗಳಿಗೆ ಒದಗಿಸುವ ರಕ್ಷಣೆಯೂ ಕಡಿಮೆಯಾಗಿದೆ ಎಂದು ಹೇಳಿದರು.

ಇದು ಹಿಮನದಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ, ಸ್ಥಳೀಯ ಪ್ರದೇಶಗಳಲ್ಲಿ ಮತ್ತು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳಲ್ಲಿ ನೀರಿನ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಹಿಮನದಿಗಳು ಕರಗುತ್ತಿರುವ ಪ್ರಮಾಣವು ಬದಲಾಗಿದೆ. ಪರಿಸರ ಮತ್ತು ಸ್ಥಳೀಯ ಅಂಶಗಳು ಸಹ ಈ ಬದಲಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು.2,800 ಮೀಟರ್‌ಗಳಿಂದ 3,000-3,500 ಮೀಟರ್‌ಗಳವರೆಗಿನ ಎತ್ತರದ ಪ್ರದೇಶಗಳಲ್ಲಿ ಮಳೆಯ ಮಾದರಿ ಬದಲಾಗುತ್ತಿರರುವುದು ಮತ್ತೊಂದು ಕಳವಳವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಹರಿಯುವ ಜಲಮೂಲಗಳು ಮತ್ತು ಹಿಮನದಿಗಳಲ್ಲಿನ ಒಟ್ಟು ನೀರಿನ ಮಟ್ಟಗಳು, ಹಿಮನದಿಗಳ ಕರಗುವಿಕೆ, ಮಳೆನೀರಿನ ಸಂಗ್ರಹಣೆ ಮತ್ತು ಅಂತರ್ಜಲ ಮಟ್ಟಗಳ ಕುರಿತು ಅಧ್ಯಯನಗಳನ್ನು ಕೈಗೊಳ್ಳುವ ತುರ್ತು ಅಗತ್ಯವನ್ನು ಅವರು ಕರೆ ನೀಡಿದರು. ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಮಾದರಿಗಳನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ

'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್