ಡಿ ಕೆ ಶಿವಕುಮಾರ್  
ರಾಜ್ಯ

LPG ಸಿಲಿಂಡರ್ ಬೆಲೆ ಏರಿಕೆ: ವರದಿ ಕೇಳಿದ ಸಿಎಂ ಡಿ.ಕೆ ಶಿವಕುಮಾರ್

ಕೇಂದ್ರ ಸರ್ಕಾರವು 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ 29 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು: ಎಲ್‌ಪಿಜಿ (LPG) ಬೆಲೆ ಏರಿಕೆ ಕುರಿತು ಅಧಿಕಾರಿಗಳಿಂದ ವರದಿ ಕೇಳಿರುವುದಾಗಿ ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಜೊತೆಗೆ ಕೈಗಾರಿಕಾ ಅನಿಲ ಹಾಗೂ ಕೈಗಾರಿಕಾ ಡೀಸೆಲ್ ದರಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ 29 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜಾಗತಿಕ ಇಂಧನ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಒತ್ತಡ ಎದುರಿಸುತ್ತಿರುವ ಕಾರಣ, ಕಳೆದ ಮೂರು ತಿಂಗಳಲ್ಲಿ ಇದು ಎರಡನೇ ಬಾರಿ ದರ ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಎಲ್ ಪಿಜಿ ದರ ಏರಿಕೆ ಬಗ್ಗೆ ನಾನು ವರದಿ ಕೇಳಿದ್ದೇನೆ. ಅದಕ್ಕಿಂತಲೂ ಹೆಚ್ಚು ಕೈಗಾರಿಕಾ ಅನಿಲ ಮತ್ತು ಕೈಗಾರಿಕಾ ಡೀಸೆಲ್ ದರಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಈ ಕುರಿತು ವರದಿ ಪಡೆಯುತ್ತಿದ್ದೇನೆ. ನಾಳೆ ಈ ವಿಷಯದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದಿಂದ ಜಾಗತಿಕ ಮಟ್ಟದಲ್ಲಿ ಎಲ್‌ಪಿಜಿ ದರಗಳು ಗಣನೀಯವಾಗಿ ಏರಿಕೆಯಾಗಿದ್ದರೂ, ಭಾರತದಲ್ಲಿ ಇನ್ನೂ ವಿಶ್ವದಲ್ಲೇ ಅತ್ಯಂತ ಕಡಿಮೆ ಅಡುಗೆ ಅನಿಲ ದರವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದೇ ವರ್ಷದ ಮಾರ್ಚ್ 7ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 60 ರೂಪಾಯಿ ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ 29 ರೂಪಾಯಿ ಏರಿಕೆ ಮಾಡಲಾಗಿದೆ.

ಇತ್ತೀಚಿನ ಪರಿಷ್ಕರಣೆಗೆ ಮುನ್ನ, ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟವಾಗುವ ಪ್ರತಿಯೊಂದು ಎಲ್‌ಪಿಜಿ ಸಿಲಿಂಡರ್ ಮೇಲೂ ಸುಮಾರು 703 ರೂಪಾಯಿ ನಷ್ಟ ಅನುಭವಿಸುತ್ತಿದ್ದವು ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಪ್ರತಿಕ್ರಿಯೆಗೆ ಕಾಕ್ರೋಚ್ ಕೆಂಡಾಮಂಡಲ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ - CJP

ನನ್ನ ಹೃದಯ ಚೂರಾಗಿದೆ: ಸಲ್ಮಾನ್ ಖಾನ್ ನಂತರ CJP ಪ್ರತಿಭಟನೆಗೆ ಆಲಿಯಾ ಭಟ್ ಬೆಂಬಲ!

CJP protest: ಪ್ರತಿಭಟನೆಗೆ ಅಡ್ಡಿಪಡಿಸಲು, ಕಲ್ಲು ತೂರಲು ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ; ಕೇಂದ್ರದ ವಿರುದ್ಧ ದೀಪ್ಕೆ ಕಿಡಿ

Video: ಐಷಾರಾಮಿ ಕ್ಯಾರಾವ್ಯಾನ್ ಬೆನ್ನಲ್ಲೇ ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್! ಬೆಲೆ ಎಷ್ಟು ಗೊತ್ತಾ?

ತಮಿಳುನಾಡಿನಾದ್ಯಂತ 'ಜನ ನಾಯಗನ್' ರಿಲೀಸ್; ಥಿಯೇಟರ್‌ಗಳಲ್ಲಿ ಕುಣಿದು ಕುಪ್ಪಳಿಸಿದ ವಿಜಯ್ ಅಭಿಮಾನಿಗಳು!