ಸಂಗ್ರಹ ಚಿತ್ರ 
ರಾಜ್ಯ

ಆಟೋ ಟಿಪ್ಪರ್‌ಗಳ ಹಾಜರಾತಿಯಲ್ಲಿ ಭಾರೀ ಗೋಲ್ಮಾಲ್: ದಾಖಲೆಗಳಲ್ಲಿ ಒಂದು-ವಾಸ್ತವದಲ್ಲಿ ಇನ್ನೊಂದು; ಕಸ ಸಂಗ್ರಹಣೆ ವ್ಯವಸ್ಥೆಯ ಲೋಪ ಬಯಲು..!

ದಾಖಲೆಗಳಲ್ಲಿ ಮತ್ತು ಮೊಬೈಲ್ ಆ್ಯಪ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತೋರಿಸಲಾಗಿದ್ದ ಅನೇಕ ಆಟೋ ಟಿಪ್ಪರ್‌ಗಳು ವಾಸ್ತವದಲ್ಲಿ ಸ್ಥಳದಲ್ಲೇ ಇಲ್ಲದಿರುವುದು ಬೆಳಕಿಗೆ ಬಂದಿದ್ದು, ಕಸ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪಗಳು ಬಹಿರಂಗಪಡಿಸಿವೆ.

ಬೆಂಗಳೂರು: ಬೆಂಗಳೂರು ನಗರದ ಕಸ ಸಂಗ್ರಹಣೆ ವ್ಯವಸ್ಥೆಯಲ್ಲಿ ಭಾರೀ ಗೋಲ್ಮಾಲ್ ನಡೆದಿರುವುದು ಬೆಂಗಳೂರು ಉತ್ತರ ನಗರ ಪಾಲಿಕೆಯ (BNCC) ದಿಢೀರ್ ಪರಿಶೀಲನೆಯಲ್ಲಿ ಬಯಲಾಗಿದೆ.

ದಾಖಲೆಗಳಲ್ಲಿ ಮತ್ತು ಮೊಬೈಲ್ ಆ್ಯಪ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತೋರಿಸಲಾಗಿದ್ದ ಅನೇಕ ಆಟೋ ಟಿಪ್ಪರ್‌ಗಳು ವಾಸ್ತವದಲ್ಲಿ ಸ್ಥಳದಲ್ಲೇ ಇಲ್ಲದಿರುವುದು ಬೆಳಕಿಗೆ ಬಂದಿದ್ದು, ಕಸ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪಗಳು ಬಹಿರಂಗಪಡಿಸಿವೆ.

ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು, ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಗುರುವಾರ ಬೆಳಿಗ್ಗೆ ವಿವಿಧ ವಾರ್ಡ್‌ಗಳ ಆಟೋ ಮರ್ಜಿಂಗ್ ಪಾಯಿಂಟ್‌ಗಳಲ್ಲಿ ದಿಢೀರ್ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ವಾರ್ಡ್ ಸಂಖ್ಯೆ 59ರಲ್ಲಿ ಆ್ಯಪ್‌ನಲ್ಲಿ 24 ಆಟೋ ಟಿಪ್ಪರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ದಾಖಲಾಗಿದ್ದರೂ, ಸ್ಥಳದಲ್ಲಿ ಕೇವಲ 21 ವಾಹನಗಳು ಮಾತ್ರ ಕಂಡುಬಂದವು.

ವಾರ್ಡ್ 49ರಲ್ಲಿ 25 ವಾಹನಗಳ ಪೈಕಿ ಕೇವಲ 10 ವಾಹನಗಳು ಮಾತ್ರ ಹಾಜರಿದ್ದವು. ವಾರ್ಡ್ 27ರಲ್ಲಿ 35 ವಾಹನಗಳ ಪೈಕಿ 17 ವಾಹನಗಳು ಹಾಗೂ ವಾರ್ಡ್ 24ರಲ್ಲಿ 31 ವಾಹನಗಳ ಪೈಕಿ ಕೇವಲ 18 ವಾಹನಗಳು ಮಾತ್ರ ಪತ್ತೆಯಾಗಿವೆ.

ಈ ವ್ಯತ್ಯಾಸವು ಕಸ ಸಂಗ್ರಹಣೆ ವ್ಯವಸ್ಥೆಯ ಮೇಲಿನ ಮೇಲ್ವಿಚಾರಣೆ ಮತ್ತು ಹಾಜರಾತಿ ದಾಖಲಾತಿಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಾಹನಗಳು ಸ್ಥಳದಲ್ಲಿಲ್ಲದಿದ್ದರೂ ಹಾಜರಿದ್ದಾರೆ ಎಂದು ದಾಖಲಾಗಿರುವುದು ಅಕ್ರಮವನ್ನು ಬಹಿರಂಗಪಡಿಸಿದೆ.

ಇದೇ ವೇಳೆ, ಕೆಲವು ಆಟೋ ಟಿಪ್ಪರ್‌ಗಳಲ್ಲಿ ಸಹಾಯಕ ಸಿಬ್ಬಂದಿಯೇ ಇಲ್ಲದಿರುವುದು ಮತ್ತು ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಸುರಕ್ಷತಾ ಕೈಗವಸುಗಳನ್ನು ಧರಿಸದೇ ಕೆಲಸ ಮಾಡುತ್ತಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದು ಕಾರ್ಮಿಕರ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನೂ ಬಯಲಿಗೆಳೆದಿದೆ.

ಪರಿಶೀಲನೆ ವೇಳೆ ಕಂಡುಬಂದ ಲೋಪಗಳ ಬಗ್ಗೆ ಸಂಬಂಧಿತ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಲು ಸೂಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯುಕ್ತರು ಆದೇಶ ನೀಡಿದ್ದಾರೆ.

ಕಸ ಸಂಗ್ರಹಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ಹೆಚ್ಚಿಸಲು ಮುಂದಿನ ದಿನಗಳಲ್ಲೂ ಇಂತಹ ದಿಢೀರ್ ತಪಾಸಣೆಗಳನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ ಗಳು!

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!

ಎಲ್.ಕೆ. ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ವಾರಣಾಸಿ ಎನ್‌ಕೌಂಟರ್‌ನಲ್ಲಿ 30 ಲಕ್ಷ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!