ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 
ರಾಜ್ಯ

ದೇಗುಲ ನಿರ್ಮಾಣಕ್ಕೆ ಗೃಹಲಕ್ಷ್ಮಿ ಹಣ: 850 ಮಹಿಳೆಯರಿಂದ 17 ಲಕ್ಷ ರೂ ದೇಣಿಗೆ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೆಚ್ಚುಗೆ..!

ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ನಿರ್ಮಾಣ ಕಾಮಗಾರಿಗೆ ತಮ್ಮ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ಗದಗ: ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಡಿ ಪಡೆಯುವ 2000 ರೂ. ಹಣವನ್ನು ದೇವಾಲಯ ನಿರ್ಮಾಣಕ್ಕೆ ದಾನ ಮಾಡಿದ್ದು, ಇತರರಿಗೆ ಪ್ರೇರಣೆಯಾಗಿದ್ದಾರೆ.

ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ನಿರ್ಮಾಣ ಕಾಮಗಾರಿಗೆ ತಮ್ಮ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ಗ್ರಾಮದಲ್ಲಿ ಒಟ್ಟು 850 ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದು, ಈಗಾಗಲೇ 280 ಮಹಿಳೆಯರು ತಮ್ಮ ಹಣವನ್ನು ದೇವಸ್ಥಾನ ನಿರ್ಮಾಣದ ಮೇಲ್ವಿಚಾರಣೆ ಮಾಡುತ್ತಿರುವ ಗ್ರಾಮ ಹಿರಿಯರಿಗೆ ಹಸ್ತಾಂತರಿಸಿದ್ದಾರೆ. ಅಗತ್ಯವಿದ್ದರೆ ಇನ್ನಷ್ಟು ಹಣ ನೀಡಲು ಸಿದ್ಧರಿದ್ದೇವೆ ಎಂದು ಮಹಿಳೆಯರು ತಿಳಿಸಿದ್ದಾರೆ.

ದೇವಾಲಯವನ್ನು ಪರಂಪರೆಯ ಶೈಲಿಯಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಭಕ್ತಿಧಾಮ ಹಾಗೂ ಪ್ರವಾಸಿ ಆಕರ್ಷಣೆಯಾಗಲಿದೆ ಎಂದು ಗ್ರಾಮ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ದೇವಾಲಯ ನಿರ್ಮಾಣ ಪೂರ್ಣಗೊಳ್ಳಲು ಸುಮಾರು ರೂ.1 ಕೋಟಿ ವೆಚ್ಚವಾಗುವ ಅಂದಾಜಿಸಲಾಗಿದೆ. ಮಹಿಳೆಯರ ಈ ನಡೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ತಿಮ್ಮಾಪುರದ ಮಹಿಳೆಯರು ತಮ್ಮ ಗೃಹಲಕ್ಷ್ಮಿ ಅನುದಾನವನ್ನು ಧಾರ್ಮಿಕ ಕಾರ್ಯಗಳಿಗಾಗಿ ಬಳಸುತ್ತಿದ್ದಾರೆ ಎಂದು ತಿಳಿದು ನಮಗೆ ಸಂತೋಷವಾಯಿತು. ಇದು ಅವರು ತಮ್ಮ ವೈಯಕ್ತಿಕ ಅಗತ್ಯಗಳಿಗಿಂತ ಸಮಾಜದ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.

ಸ್ಥಳೀಯ ರೈತ ಯಲ್ಲಪ್ಪ ಬಬಾರಿ ಮಾತನಾಡಿ, “ಗ್ರಾಮದಲ್ಲಿ 850 ಗುೃಹಲಕ್ಷ್ಮಿ ಫಲಾನುಭವಿಗಳಿದ್ದು, ಮಹಿಳೆಯರ ದೇಣಿಗೆಯಿಂದ ಸುಮಾರು ರೂ.17 ಲಕ್ಷ ಸಂಗ್ರಹವಾಗಲಿದೆ. ದೇವಾಲಯ ನಿರ್ಮಾಣಕ್ಕಾಗಿ ತಮ್ಮ ಮಾಸಿಕ ಆದಾಯವನ್ನು ನೀಡಲು ಮಹಿಳೆಯರು ಏಕಮನಸ್ಸಿನಿಂದ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಐದು ಗ್ಯಾರಂಟಿ ಯೋಜನೆಗಳಿಗೂ ಕೃತಜ್ಞತೆ ಸಲ್ಲಿಸಿದ ಅವರು, ಅನೇಕ ಮಹಿಳೆಯರು ಈ ಯೋಜನೆಯ ಹಣವನ್ನು ಬೋರ್‌ವೆಲ್ ತೋಡುವುದು, ಮಗಳ ಮದುವೆ ಮುಂತಾದ ಅಗತ್ಯಗಳಿಗೆ ಬಳಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಕೊಪ್ಪಳ ಜಿಲ್ಲೆಯಲ್ಲಿಯೂ ಮಹಿಳೆಯರು ಗುೃಹಲಕ್ಷ್ಮಿ ಹಣವನ್ನು ದೇವಾಲಯ ನಿರ್ಮಾಣಕ್ಕೆ ದಾನ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ದಾಳಿಯ ನಡುವೆ ಇಸ್ರೇಲ್ ನೆರವು ಕೋರಿದ UAE! Iron Dome ವಾಯು ರಕ್ಷಣಾ ವ್ಯವಸ್ಥೆ ರವಾನೆ

'ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್': ಗುಂಡಿನ ದಾಳಿಗೆ 10 ನಿಮಿಷ ಮೊದಲು ಕುಟುಂಬಕ್ಕೆ ಪತ್ರ ಕಳುಹಿಸಿದ್ದ ವೈಟ್ ಹೌಸ್ ಶೂಟೌಟ್ ಪ್ರಕರಣದ ಆರೋಪಿ

IPL 2026: 'ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕೆ ಔಟ್: ಕೆಕೆಆರ್ ಆಕ್ರೋಶ, ಬೌಂಡರಿ ಲೈನ್ ನಲ್ಲಿ ರಘುವಂಶಿ ಮಾಡಿದ್ದೇನು? VIDEO ನೋಡಿ...

ನಾಯಕತ್ವ ವಿಚಾರದಲ್ಲಿ ನಾನು ಮತ್ತು ಸಿದ್ದರಾಮಯ್ಯ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ: ಡಿ ಕೆ ಶಿವಕುಮಾರ್

'ಮೇ.10ರೊಳಗೆ ಡಿ ಕೆ ಶಿವಕುಮಾರ್ ಸಿಎಂ ಆಗಬಹುದು ಎಂಬ ಸುದ್ದಿಯಿದೆ, ಆದರೆ ಸಂತೋಷ, ಹೈಕಮಾಂಡ್ ತಕ್ಷಣ ನಿರ್ಧಾರ ಕೈಗೊಳ್ಳಲಿ': ಪ್ರಣವಾನಂದ ಸ್ವಾಮೀಜಿ-Video

SCROLL FOR NEXT