ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ 2026 ಬಜೆಟ್ ಮಂಡನೆ 
ರಾಜ್ಯ

Karnataka Budget 2026: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ; ಸಿಎಂ ಸಿದ್ದರಾಮಯ್ಯ ಘೋಷಣೆ

ಈ ಭಾಷೆಯ ಪ್ರಮುಖ ಲಕ್ಷಣಗಳು ಎಂದರೆ ಪ್ರಾಚೀನ ಅಥವಾ ಹಳೆಯ ಕನ್ನಡದ ಪದಸಂಪತ್ತು, ವಿಭಿನ್ನ ಕ್ರಿಯಾಪದ ಅಂತ್ಯಗಳು ಮತ್ತು ಸಾಮಾನ್ಯ ಕನ್ನಡದೊಂದಿಗೆ ಸುಮಾರು ಶೇಕಡಾ 60ರಿಂದ 70ರಷ್ಟು ಸಾಮ್ಯತೆ ಹೊಂದಿರುವುದು.

Karnataka Budget 2026:-ಕರ್ನಾಟಕ ರಾಜ್ಯದ ಸಂಸ್ಕೃತಿಯ ಅಂಗವಾಗಿರುವ ಹವ್ಯಕ ಭಾಷೆಯ ಬೆಳವಣಿಗೆಗೆ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯಕರ್ನಾಟಕ ಬಜೆಟ್ 2026-27ರಲ್ಲಿ ಘೋಷಿಸಿದ್ದಾರೆ.

ಹವ್ಯಕ ಭಾಷೆ ಅಥವಾ ಹವಿಗನ್ನಡ ಎಂಬುದು ಕನ್ನಡದ ಒಂದು ವಿಶಿಷ್ಟ ಹಾಗೂ ಪ್ರಾಚೀನ ಉಪಭಾಷೆಯಾಗಿದ್ದು, ಮುಖ್ಯವಾಗಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ (ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ) ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಹವ್ಯಕ ಬ್ರಾಹ್ಮಣರು ಮಾತನಾಡುವ ಭಾಷೆಯಾಗಿದೆ.

ಈ ಭಾಷೆಯ ಪ್ರಮುಖ ಲಕ್ಷಣಗಳು ಎಂದರೆ ಪ್ರಾಚೀನ ಅಥವಾ ಹಳೆಯ ಕನ್ನಡದ ಪದಸಂಪತ್ತು, ವಿಭಿನ್ನ ಕ್ರಿಯಾಪದ ಅಂತ್ಯಗಳು ಮತ್ತು ಸಾಮಾನ್ಯ ಕನ್ನಡದೊಂದಿಗೆ ಸುಮಾರು ಶೇಕಡಾ 60ರಿಂದ 70ರಷ್ಟು ಸಾಮ್ಯತೆ ಹೊಂದಿರುವುದು.

ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಕರ್ನಾಟಕದ ಹಳೆಗನ್ನಡ ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದ್ದು, ಭಾಷಾ ವೈವಿಧ್ಯ ಹಾಗೂ ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.

ಹವ್ಯಕ ಭಾಷೆಯ ವಿಶಿಷ್ಟ ಮತ್ತು ಅಪರೂಪದ ಭಾಷೆಯ ಅಧ್ಯಯನ, ಅಭಿವೃದ್ಧಿ ಮತ್ತು ಸಂರಕ್ಷಣೆ ದೃಷ್ಟಿಯಿಂದ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಘೋಷಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ; Video

IPL 2026: ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ 'ನಿಜಕ್ಕೂ AI?' ಎಲಾನ್ ಮಸ್ಕ್ ಈ ಮಾಂತ್ರಿಕನನ್ನು ಸೃಷ್ಟಿಸಿದರೇ?

'ನಿಮ್ಮ ಕಾನೂನಿಗೆ ತಿದ್ದುಪಡಿ ತನ್ನಿ': ಅತ್ಯಾಚಾರ ಸಂತ್ರಸ್ತ ಬಾಲಕಿ ಗರ್ಭಪಾತ ತಡೆದ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

IPL 2026: ಡ್ರೆಸಿಂಗ್ ರೂಮ್‌ನಲ್ಲಿ ನಿಷೇಧಿತ ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್​​ಗೆ ದಂಡ ಫಿಕ್ಸ್!

ಬೆಂಗಳೂರು ಮಳೆ ಅವಾಂತರ: ಮತ್ತೋರ್ವ ವ್ಯಕ್ತಿ ಸಾವು, ಮೃತರ ಸಂಖ್ಯೆ 10ಕ್ಕೆ ಏರಿಕೆ

SCROLL FOR NEXT