ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ತಾಪಮಾನ ಏರಿಕೆ: ಬಿಸಿಲ ಝಳಕ್ಕೆ ಜನತೆ ತತ್ತರ; AC City ಹೆಗ್ಗಳಿಕೆಗೆ ದಕ್ಕೆ..!

ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ಪ್ರಕಾರ, ಶನಿವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 34.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬೆಂಗಳೂರು: ಒಂದಾನೊಂದು ಕಾಲದಲ್ಲಿ ತಂಪಾದ ಹವಾಮಾನದಿಂದ 'ಏರ್ ಕಂಡಿಷನ್ಡ್ ಸಿಟಿ' ಎಂದು ಪ್ರಸಿದ್ಧಿಯಾಗಿದ್ದ ಬೆಂಗಳೂರು, ಈಗ ಕ್ರಮೇಣ ಬಿಸಿಲ ನಗರವಾಗಿ ಪರಿವರ್ತನೆಗೊಳ್ಳುತ್ತಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲ ದಗೆಗೆ ಜನರು ಹೈರಾಣಾಗಿದ್ದಾರೆ.

ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ಪ್ರಕಾರ, ಶನಿವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 34.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ನಗರದಲ್ಲಿ ಗುರುವಾರ: 33.5°C, ಶುಕ್ರವಾರ: 34 ಡಿಗ್ರಿ ತಾಪಮಾನ ದಾಖಲಾಗಿದೆ. ನಗರದಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನ ಇದೇ ಮಟ್ಟದಲ್ಲಿ ಮುಂದುವರಿದಿದೆ.

ಸಾಮಾನ್ಯವಾಗಿ ಈ ಸಮಯದಲ್ಲಿ ಬೆಂಗಳೂರಿನ ಸರಾಸರಿ ತಾಪಮಾನ ಸುಮಾರು 32.5°C ಆಗಿರುತ್ತದೆ. ಆದರೆ ಈಗ ಅದು 1.5ರಿಂದ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೇವಲ ದಿನದ ತಾಪಮಾನ ಮಾತ್ರವಲ್ಲ, ರಾತ್ರಿ ತಾಪಮಾನವೂ ಏರಿಕೆಯಾಗುತ್ತಿದೆ. ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 21.9°C ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 2.6 ಡಿಗ್ರಿ ಸೆಲ್ಸಿಯಸ್ ಹೆಚ್ಚು.

ಅದೇ ವೇಳೆ ಹೆಚ್ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ 20.5°C ತಾಪಮಾನ ದಾಖಲಾಗಿದ್ದು, ಇದು ಸಹ ಸಾಮಾನ್ಯಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

IMD ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರ ಪ್ರಕಾರ, ಮುಂದಿನ ಒಂದು ವಾರದಲ್ಲಿ ತಾಪಮಾನ ಇನ್ನೂ 1ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

“ಮಳೆ ವ್ಯವಸ್ಥೆ ರೂಪುಗೊಳ್ಳದಿರುವುದು, ಆಕಾಶ ಸ್ಪಷ್ಟವಾಗಿರುವುದು ಮತ್ತು ದೀರ್ಘಕಾಲದ ಒಣ ಹವಾಮಾನ ಕಾರಣದಿಂದ ತಾಪಮಾನ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ತಾಪಮಾನ ಏರಿಕೆಗೆ ಕೇವಲ ಋತು ಬದಲಾವಣೆ ಮಾತ್ರ ಕಾರಣವಲ್ಲ. ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು, ನೆರಳು ಪ್ರದೇಶಗಳ ಕೊರತೆ ಮತ್ತು ಕೆರೆಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಕೂಡ ನಗರ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಭಾಗಗಳಲ್ಲಿಯೂ ತಾಪಮಾನ ಏರಿಕೆಯಾಗುತ್ತಿದೆ.

ಬೆಂಗಳೂರಿನ ತಾಪಮಾನ

ದಿನಾಂಕ - ಗರಿಷ್ಠ - ಕನಿಷ್ಠ (ಡಿಗ್ರಿ ಸೆಲ್ಸಿಯಸ್‌ನಲ್ಲಿ)

  • ಫೆಬ್ರವರಿ 28 - 31.5 - 20.2

  • ಮಾರ್ಚ್ 1 - 31.8 - 21.1

  • ಮಾರ್ಚ್ 2 - 32.4 - 20

  • ಮಾರ್ಚ್ 3 - 32.7 - 19.8

  • ಮಾರ್ಚ್ 4 - 32.4 - 19.5

  • ಮಾರ್ಚ್ 5 - 33.5 - 20.3

  • ಮಾರ್ಚ್ 6 - 34 - 21.9

  • ಮಾರ್ಚ್ 7 - 34.4

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

ನರ್ಮದಾ ನದಿಯಲ್ಲಿ 30 ಪ್ರವಾಸಿಗರಿದ್ದ ಕ್ರೂಸ್ ಹಡಗು ಜಲಸಮಾಧಿ: ಐದು ಶವಗಳು ಪತ್ತೆ, ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ!

ರಜತ್ ಪಾಟಿದಾರ್ ಔಟ್ ವಿವಾದ: ಚೆಂಡು ನೆಲಕ್ಕೆ ತಾಗಿದ್ದರೂ ಅಂಪೈರ್ ಎಡವಟ್ಟು; Virat Kohli ಆಕ್ರೋಶ, Video!

ಬೌರಿಂಗ್ ಆಸ್ಪತ್ರೆ ದುರಂತ: ಕಾರ್ಯನಿರ್ವಾಹಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

SCROLL FOR NEXT