ಸಂಗ್ರಹ ಚಿತ್ರ 
ರಾಜ್ಯ

5G ಕ್ರಾಂತಿ; ಬೆಂಗಳೂರು ಟೆಕ್ ಹಬ್ ಆದರೂ ನೆಟ್‌ವರ್ಕ್ ಕವರೇಜ್‌ನಲ್ಲಿ ಕರ್ನಾಟಕಕ್ಕೆ ಹಿನ್ನಡೆ..!

ಈ ಅಂಕಿ ಅಂಶಗಳು ತಂತ್ರಜ್ಞಾನ ಮತ್ತು ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು 5G ನೆಟ್ ವರ್ಕ್ ವಿಸ್ತರಣೆಯಲ್ಲೇ ಹಿಂದುಳಿದಿದೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಮಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಕರ್ನಾಟಕದಲ್ಲೇ ಇದ್ದರೂ, ರಾಜ್ಯ ಮಾತ್ರ 5G ಜಾಲ ವ್ಯಾಪ್ತಿ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಎಂಬುದಾಗಿ ತಿಳಿದುಬಂದಿದೆ.

ಸಂವಹನ ಸಚಿವಾಲಯ ಬುಧವಾರ ಲೋಕಸಭೆಯಲ್ಲಿ ಪ್ರಸ್ತುತಪಡಿಸಿದ ಅಂಕಿಅಂಶಗಳುಈ ಮಾಹಿತಿ ತಿಳಿದುಬಂದಿದೆ. ಸಚಿವಾಲಯ ನೀಡಿರುವ ಪ್ರಕಾರ, ರಾಜ್ಯದಲ್ಲಿ 5G ಕೇವಲ ಶೇ.79.92 ಜನಸಂಖ್ಯೆಯನ್ನು ಮಾತ್ರ ಆವರಿಸಿದೆ, ಇದು ರಾಷ್ಟ್ರದ ಸರಾಸರಿ ಶೇ.86.18 ಕ್ಕಿಂತ ಕಡಿಮೆ ಇರುವುದಷ್ಟೇ ಅಲ್ಲ, ಬಿಹಾರ (94.52%), ಉತ್ತರ ಪ್ರದೇಶ (85.25%), ಕೇರಳ (97.54%), ಗುಜರಾತ್ (94.87%) ಹಾಗೂ ಹರಿಯಾಣ (99.52%) ರಾಜ್ಯಗಳಿಗಿಂತಲೂ ಹಿಂದುಳಿದಿದೆ.

ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಪರವಾನಗಿ ಪಡೆದ ಸೇವಾ ಪ್ರದೇಶಗಳು ಮಾತ್ರ 5G ನೆಟ್‌ವರ್ಕ್‌ನಿಂದ ಶೇ.100ರಷ್ಟು ನೆಟ್ ವರ್ಕ್ ಕವರೇಜ್ ಸಾಧಿಸಿವೆ.

ಈ ಅಂಕಿ ಅಂಶಗಳು ತಂತ್ರಜ್ಞಾನ ಮತ್ತು ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು 5G ನೆಟ್ ವರ್ಕ್ ವಿಸ್ತರಣೆಯಲ್ಲೇ ಹಿಂದುಳಿದಿದೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ರಾಜ್ಯದಲ್ಲಿ 34,444 BTS (Base Transceiver Stations)ಗಳನ್ನು ಸ್ಥಾಪಿಸಲಾಗಿದ್ದು, ಇದು ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು. ಜೊತೆಗೆ 2.33 ಕೋಟಿ 5G ಬಳಕೆದಾರರಿರುವುದು ಕೂಡ ಗಮನಾರ್ಹ ಸಾಧನೆ. ಆದರೂ, ಈ ಮೂಲಸೌಕರ್ಯವು ಸಮಾನವಾಗಿ ರಾಜ್ಯದ ಎಲ್ಲಾ ಭಾಗಗಳಿಗೆ ತಲುಪಿಲ್ಲ.

ನಗರ ಕೇಂದ್ರೀಕೃತ ಅಭಿವೃದ್ಧಿ. ಬೆಂಗಳೂರಿನಂತಹ ಮಹಾನಗರಗಳಲ್ಲಿ 5G ಜಾಲದ ವಿಸ್ತರಣೆ ವೇಗವಾಗಿ ನಡೆದರೂ, ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಜಾಲದ ಲಭ್ಯತೆ ಇನ್ನೂ ಸೀಮಿತವಾಗಿದೆ. ಟೆಲಿಕಾಂ ಕಂಪನಿಗಳು ಹೆಚ್ಚು ಆದಾಯ ತರುವ ನಗರ ಪ್ರದೇಶಗಳಿಗೆ ಆದ್ಯತೆ ನೀಡಿರುವುದು ಸಹ ಈ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ವಿರುದ್ಧವಾಗಿ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಕಡಿಮೆ BTS ಇದ್ದರೂ ಹೆಚ್ಚಿನ ಜನಸಂಖ್ಯೆಯನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಇದು ಜಾಲದ ಸಮಾನ ವಿತರಣೆಯ ಮಹತ್ವವನ್ನು ತೋರಿಸುತ್ತದೆ. ಅಂದರೆ, ಕೇವಲ ಮೂಲಸೌಕರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ಸಮರ್ಥವಾಗಿ ಹಂಚಿಕೆ ಮಾಡುವುದೂ ಅಷ್ಟೇ ಮುಖ್ಯ ಎಂಬುದನ್ನು ಈ ಬೆಳವಣಿಗೆ ತೋರಿಸುತ್ತಿದೆ.

ಇನ್ನು ದೇಶದ ಮಟ್ಟದಲ್ಲಿ ನೋಡಿದರೆ, ಭಾರತವು 5G ನೆಟ್ ವರ್ಕ್ ಕವರೇಜ್ನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಒಟ್ಟು 5,23,866 BTSಗಳನ್ನು ಸ್ಥಾಪಿಸಲಾಗಿದ್ದು, 37.6 ಕೋಟಿ ಬಳಕೆದಾರರು 5G ಸೇವೆಯನ್ನು ಬಳಸುತ್ತಿದ್ದಾರೆ. 1.02 ಬಿಲಿಯನ್ ಇಂಟರ್ನೆಟ್ ಬಳಕೆದಾರರೊಂದಿಗೆ, ಪ್ರತಿ ಬಳಕೆದಾರನ ಸರಾಸರಿ ತಿಂಗಳ ಡೇಟಾ ಬಳಕೆ 25.70 GB ಆಗಿದೆ, ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ಹೆಚ್ಚಾಗಿದೆ. ಜೊತೆಗೆ, ಭಾರತದ ಮೊಬೈಲ್ ಬ್ರಾಡ್‌ಬ್ಯಾಂಡ್ ಮಧ್ಯಮ ವೇಗ 130.24 Mbps ಆಗಿದ್ದು, ಜಾಗತಿಕ ಸರಾಸರಿ 107.13 Mbps ಗಿಂತ ಉತ್ತಮವಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 5G ಜಾಲವನ್ನು ಕೇವಲ ನಗರಗಳಿಗೆ ಸೀಮಿತಗೊಳಿಸದೇ, ಗ್ರಾಮೀಣ ಮತ್ತು ಗಡಿ ಭಾಗದ ಪ್ರದೇಶಗಳಿಗೂ ಸಮಾನವಾಗಿ ತಲುಪಿಸುವುದು ಮುಖ್ಯವಾಗಿದೆ ಸರ್ಕಾರ ಮತ್ತು ಟೆಲಿಕಾಂ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಿದರೆ, ರಾಜ್ಯವು ತನ್ನ ತಂತ್ರಜ್ಞಾನ ಸಾಮರ್ಥ್ಯಕ್ಕೆ ತಕ್ಕಂತೆ 5G ಕ್ಷೇತ್ರದಲ್ಲೂ ಮುಂಚೂಣಿಗೆ ಬರಲು ಸಾಧ್ಯವಿದೆ. ಇಲ್ಲದಿದ್ದರೆ, “ಐಟಿ ಹಬ್” ಎಂಬ ಗುರುತಿನ ನಡುವೆಯೇ ಡಿಜಿಟಲ್ ಅಸಮಾನತೆ ಹೆಚ್ಚುವ ಅಪಾಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!