ರಿಷಿ ಸುನಕ್-ಅಕ್ಷತಾ ಮೂರ್ತಿ ದಂಪತಿ ಮತ್ತು ನಿಖಿಲ್ ಕಾಮತ್(ಸಂಗ್ರಹ ಚಿತ್ರ) 
ರಾಜ್ಯ

'ಗೊತ್ತಾಗಲ್ಲ ಅವ್ರಿಗೆ': ಕನ್ನಡದಲ್ಲಿ ರಿಷಿ ಸುನಕ್ ಕಾಲೆಳೆದ ಅಕ್ಷತಾ ಮೂರ್ತಿ; ನಿಖಿಲ್ ಕಾಮತ್- ಕಪಲ್ಸ್ ಪಾಡ್ ಕಾಸ್ಟ್

ಟ್ರೇಲರ್‌ನಲ್ಲಿ ಕನ್ನಡದಲ್ಲಿ ನಡೆದ ಒಂದು ಲಘು ಸಂಭಾಷಣೆ ನೆಟ್ಟಿಗರ ಗಮನ ಸೆಳೆಯುತ್ತದೆ. ಸುನಕ್ ಕೇಳುತ್ತಿರುವಾಗ, ಅಕ್ಷತಾ ಮೂರ್ತಿ ಮತ್ತು ನಿಖಿಲ್ ಕಾಮತ್ ಇದ್ದಕ್ಕಿದ್ದಂತೆ ಕನ್ನಡದಲ್ಲಿ ಮಾತನಾಡುತ್ತಾರೆ.

ಯುನೈಟೆಡ್ ಕಿಂಗ್ ಡಮ್ ನ ಮಾಜಿ ಪ್ರಧಾನಮಂತ್ರಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ, ಝೆರೋಧಾ ಸಹ-ಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನ ಮುಂದಿನ ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪಾಡ್ ಕಾಸ್ಟ್ ನ ಟ್ರೇಲರ್‌ನಲ್ಲಿ ಈ ಮೂವರ ನಡುವಿನ ಸಹಜ ಹಾಗೂ ಮನಮುಟ್ಟುವ ಕ್ಷಣಗಳ ಕೆಲವು ಝಲಕ್‌ಗಳು ಕಾಣಿಸುತ್ತವೆ.

ಟ್ರೇಲರ್‌ನಲ್ಲಿ ಕನ್ನಡದಲ್ಲಿ ನಡೆದ ಒಂದು ಲಘು ಸಂಭಾಷಣೆ ನೆಟ್ಟಿಗರ ಗಮನ ಸೆಳೆಯುತ್ತದೆ. ಸುನಕ್ ಕೇಳುತ್ತಿರುವಾಗ, ಅಕ್ಷತಾ ಮೂರ್ತಿ ಮತ್ತು ನಿಖಿಲ್ ಕಾಮತ್ ಇದ್ದಕ್ಕಿದ್ದಂತೆ ಕನ್ನಡದಲ್ಲಿ ಮಾತನಾಡುತ್ತಾರೆ. ನಿಖಿಲ್ ಕಾಮತ್ ಕಡೆ ತೋರಿಸಿ ಅಕ್ಷತಾ ಮೂರ್ತಿ ಕನ್ನಡದಲ್ಲಿ “ನಿಮಗೆ ಕನ್ನಡ ಗೊತ್ತು, ನನಗೆ ಕನ್ನಡ ಗೊತ್ತು” ಎಂದು ಹೇಳುತ್ತಾರೆ. ನಂತರ ರಿಷಿ ಸುನಕ್ ಕಡೆ ತಿರುಗಿ ಇಂಗ್ಲಿಷಿನಲ್ಲಿ “ನಿಮಗೆ ಇದರಲ್ಲಿ ಏನಾದರೂ ಅರ್ಥವಾಯಿತೇ?” ಎಂದು ಕೇಳುತ್ತಾರೆ. ಅದಕ್ಕೆ ಸುನಕ್ ನಗುಮುಖದಿಂದ “ಇಲ್ಲ” ಎಂದು ಉತ್ತರಿಸುತ್ತಾರೆ.

ನಂತರ ನಿಖಿಲ್ ಕಾಮತ್ ಕನ್ನಡದಲ್ಲಿ “ನಾವು ಅವರ ಬಗ್ಗೆ ಏನನ್ನಾದರೂ ಹೇಳಬಹುದೇ” ಎಂದು ತಮಾಷೆಯಾಗಿ ಮಾಡುತ್ತಾ ಕೇಳುತ್ತಾರೆ. ಇದಕ್ಕೆ ಅಕ್ಷತಾ ಹಾಸ್ಯವಾಗಿ “ನಾವು ಏನು ಬೇಕಾದರೂ ಹೇಳಬಹುದು, ಅವರಿಗೆ ಏನೂ ಗೊತ್ತಾಗುವುದಿಲ್ಲ ” ಎಂದು ಪ್ರತಿಕ್ರಿಯಿಸುತ್ತಾರೆ.

ನಾನು-ಅಕ್ಷತಾ ನೆರೆಹೊರೆಯವರು

ನಿಖಿಲ್ ಕಾಮತ್, ಎಪಿಸೋಡ್ ಬಗ್ಗೆ ಒಂದು ಶೀರ್ಷಿಕೆ ಬರೆದಿದ್ದಾರೆ. “ಅಕ್ಷತಾ ನನ್ನ ಮನೆಯಿಂದ ಐದು ನಿಮಿಷದ ದೂರದಲ್ಲಿರುವ ಜಯನಗರದಲ್ಲಿ ಬೆಳೆದವರು. ರಿಷಿ ಸುನಕ್ ಯುಕೆ ದೇಶದ ಮೊದಲ ಭಾರತೀಯ ಮೂಲದ ಪ್ರಧಾನಮಂತ್ರಿಯಾಗಿದ್ದರು. ಇವರು 20 ವರ್ಷಗಳಿಂದ ಒಟ್ಟಿಗೆ ಇದ್ದರೂ, ಐಸ್‌ಕ್ರೀಂ ರುಚಿಗಳ ಬಗ್ಗೆ ಇನ್ನೂ ಚರ್ಚೆ ಮಾಡುತ್ತಿರುತ್ತಾರೆ.

ಯುಕೆ ಪ್ರಧಾನಿಯಾಗಿದ್ದು, ನಂತರ ಅಧಿಕಾರ ಕಳೆದುಕೊಂಡದ್ದು ಅನುಭವ ಹೇಗಿತ್ತು ಎಂಬುದರ ಬಗ್ಗೆ ಅವರ ಜೊತೆ, ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. ಇದು ಕಪಲ್ಸ್ ಗಳ ಬಗ್ಗೆ ನಾನು ಮಾಡುತ್ತಿರುವ ಮೊದಲ ಎಪಿಸೋಡ್ ಎಂದು ನಿಖಿಲ್ ಕಾಮತ್ ಬರೆದುಕೊಂಡಿದ್ದಾರೆ.

ಟ್ರೇಲರ್‌ನಲ್ಲಿ ಕೇವಲ ಕೆಲವು ಕ್ಷಣಗಳನ್ನಷ್ಟೇ ತೋರಿಸಲಾಗಿದೆ. ಸಂಪೂರ್ಣ ಎಪಿಸೋಡ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ, ಆದರೆ ಇನ್ನೂ ಬಿಡುಗಡೆ ದಿನಾಂಕ ಘೋಷಿಸಲಾಗಿಲ್ಲ.

ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆಗಳು
ಈ ವಿಡಿಯೋಗೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು, ಪ್ರತಿಬಾರಿ ಅತಿಥಿಗಳ ಆಯ್ಕೆ ಅದ್ಬುತವಾಗಿರುತ್ತದೆ ಎಂದಿದ್ದಾರೆ.

ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಈಗ ದೇವರುಗಳು ಮತ್ತು ಏಲಿಯನ್ಸ್ ಮಾತ್ರ ಬಾಕಿ ಉಳಿದಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ನಿಮ್ಮ ಪಾಡ್‌ಕಾಸ್ಟ್‌ನಲ್ಲಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಅವರನ್ನು ನೋಡುವುದು ಚೆನ್ನಾಗಿದೆ—ಇದು ಎರಡು ಹಳೆಯ ಬೆಂಗಳೂರಿನ ಜನರು ಕೂತು ಮಾತನಾಡುವಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಎಷ್ಟು ಚೆನ್ನಾಗಿ ಮಾಡುತ್ತಾರೆ, ಪಕ್ಕಾ ಬೆಂಗಳೂರು ಕನ್ನಡ ಎಂದು ಮತ್ತೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Gautam Adaniಗೆ ಬಿಗ್ ರಿಲೀಫ್: ಎಲ್ಲ ಪ್ರಕರಣಗಳ ವಿಚಾರಣೆ ಶಾಶ್ವತವಾಗಿ ಕೈ ಬಿಟ್ಟ ಅಮೆರಿಕ: ವರದಿ

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ಒಡಿಶಾ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

IPL 2026: ಸ್ಟಂಪೌಟ್ ಮಾಡಿದ Sanju Samson ವಿರುದ್ಧ Klaasen ಆಕ್ರೋಶ, ಮೈದಾನದಲ್ಲೇ ಹೈಡ್ರಾಮಾ, ಆಗಿದ್ದೇನು?

ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧಿಸಿದ CBI

IPL 2026: SRH ಗೆಲುವಿನ ದಡ ಸೇರಿಸಿದ Ishan Kishan, ತವರಿನಲ್ಲೇ CSKಗೆ ಮುಖಭಂಗ, ಪ್ಲೇಆಫ್ ನಿಂದ ಬಹುತೇಕ ಔಟ್!

SCROLL FOR NEXT