ಸಂಗ್ರಹ ಚಿತ್ರ 
ರಾಜ್ಯ

1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯವಲ್ಲ: ವಯೋಮಿತಿಯಲ್ಲಿ ಸಡಿಲಿಕೆ; ಪೋಷಕರು ನಿರಾಳ!

1ನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಲಾಗಿದ್ದ 6 ವರ್ಷ ಕಡ್ಡಾಯ ವಯೋಮಿತಿಯನ್ನು ರಾಜ್ಯ ಸರ್ಕಾರ ಸಡಿಲಿಕೆ ಮಾಡಿದೆ.

ಬೆಂಗಳೂರು: 1ನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಲಾಗಿದ್ದ 6 ವರ್ಷ ಕಡ್ಡಾಯ ವಯೋಮಿತಿಯನ್ನು ರಾಜ್ಯ ಸರ್ಕಾರ ಸಡಿಲಿಕೆ ಮಾಡಿದೆ. ಪೋಷಕರ ಮನವಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು 2026-27 ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿ ಪ್ರವೇಶಕ್ಕೆ ವಯಸ್ಸಿನ ಅರ್ಹತಾ ಮಾನದಂಡದಲ್ಲಿ 60 ದಿನಗಳ ಸಡಿಲಿಕೆಯನ್ನು ಘೋಷಿಸಿದೆ. ಈ ಬಗ್ಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು. ಪ್ರಸಕ್ತ ವರ್ಷಕ್ಕೆ ಅನ್ವಯವಾಗುವಂತೆ ಮಕ್ಕಳ ಶಾಲಾ ಪ್ರವೇಶಕ್ಕೆ ನಿಗದಿಪಡಿಸಿದ್ದ 6 ವರ್ಷಗಳ ವಯೋಮಿತಿಗೆ 60 ದಿನಗಳ ಕಾಲ ವಿನಾಯಿತಿ ನೀಡಲಾಗಿದೆ ಎಂದರು.

ಒಂದನೇ ತರಗತಿಗೆ ಸೇರ್ಪಡೆಯಾಗುವ ಮಕ್ಕಳ ಕನಿಷ್ಠ ವಯಸ್ಸನ್ನು 6 ವರ್ಷ ಎಂದು ನಿಗದಿಪಡಿಸಿ ರಾಜ್ಯ ಸರ್ಕಾರ ಜುಲೈ 2022ರಲ್ಲಿಯೇ ಆದೇಶ ಹೊರಡಿಸಿತ್ತು. ಆದರೆ ಈಗ 60 ದಿನಗಳ ಸಡಿಲಿಕೆಯಿಂದ 2020 ಜುಲೈ 31ರೊಳಗೆ ಜನಿಸಿರುವ ಮಗುವಿಗೆ ಪ್ರವೇಶ ಸಿಗಲಿದೆ. ಇದರಿಂದ ಬೆಂಗಳೂರಿನ ಮೂರು ಲಕ್ಷಕ್ಕೂ ಅಧಿಕ ಮಕ್ಕಳಿಗೆ ಅನುಕೂಲವಾಗಲಿದೆ.

ಹೊಸ ಆದೇಶಕ್ಕೆ ಅನುಗುಣವಾಗಿ ಪ್ರವೇಶ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು. UKG ಮುಗಿಸಿದರೂ 6 ವರ್ಷ ಪೂರ್ಣಗೊಳ್ಳದ ಮಕ್ಕಳು ಅನಿವಾರ್ಯವಾಗಿ ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಹಾಗೂ ಪೋಷಕರ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತಿತ್ತು.

ಎಲ್‌ಕೆಜಿ ಮತ್ತು ಯುಕೆಜಿ ಪ್ರವೇಶಕ್ಕೂ ಸಮಸ್ಯೆಗಳಿವೆ. ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ನಾವು ಆದಷ್ಟು ಬೇಗ ಕಾನೂನು ತರುತ್ತೇವೆ ಎಂದು ಹೇಳಿದರು. 60 ದಿನಗಳ ವಿನಾಯಿತಿ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿಗೆ ಅನ್ವಯಿಸುತ್ತದೆ ಎಂದು ಸಚಿವರು ಹೇಳಿದರು. ಎಲ್‌ಕೆಜಿ ಮತ್ತು ಯುಕೆಜಿ ನಿಯಂತ್ರಕ ವ್ಯವಸ್ಥೆಯ ಅಡಿಯಲ್ಲಿಲ್ಲದ ಕಾರಣ, ಮುಂದಿನ ಅಧಿವೇಶನದಲ್ಲಿ ಇಲಾಖೆಯಿಂದ ನಿಯಂತ್ರಕ ಕಾಯ್ದೆ ಅಥವಾ ನಿಯಮಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ರಾಹುಲ್ ಗಾಂಧಿ ನಿಲುವಿಗೆ ಉಲ್ಟಾ ಹೊಡೆದರೇ ಡಿಕೆಶಿ? CM ನಿವಾಸಕ್ಕೆ ಅದಾನಿ ಭೇಟಿ; ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ..!

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?