ಬೆಂಗಳೂರಿನ ತಮ್ಮ ನಿವಾಸದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಡಿ ಕೆ ಶಿವಕುಮಾರ್  
ರಾಜ್ಯ

ಸಿಎಂ ಹುದ್ದೆ ಬದಲಾವಣೆ ವದಂತಿ ನಡುವೆ 64ನೇ ಹುಟ್ಟುಹಬ್ಬ ಆಚರಿಸಿಕೊಂಡ D K ಶಿವಕುಮಾರ್, ಪುರೋಹಿತರಿಂದ ಆಶೀರ್ವಾದ-Video

ನನ್ನ ಪೋಸ್ಟರ್‌ಗಳನ್ನು ಹಾಕಬಾರದೆಂದು ನನ್ನ ಬೆಂಬಲಿಗರಿಗೆ ಸೂಚಿಸಿದ್ದೇನೆ ಹಾಗೂ ಅವನ್ನು ತೆರವುಗೊಳಿಸುವಂತೆ ಪಾಲಿಕೆಗೆ ತಿಳಿಸಿದ್ದೇನೆ ಎಂದರು.

ನಾಯಕತ್ವ ಬದಲಾವಣೆ ವದಂತಿಗಳ ನಡುವೆ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಮೇ 15 ಶುಕ್ರವಾರ ತಮ್ಮ 64ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಹೊರಗೆ ಅರ್ಚಕರು ವೇದ ಮಂತ್ರಗಳನ್ನು ಘೋಷಿಸಿ ಪೂಜೆ ಸಲ್ಲಿಸಿದರು. ಅವರ ಆಸೆ-ಆಕಾಂಕ್ಷೆಗಳು ಶೀಘ್ರವೇ ನೆರವೇರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ನನಗೆ ಇಂದು ಹುಟ್ಟುಹಬ್ಬ ಆಚರಿಸುವ ಇಚ್ಛೆಯಿರಲಿಲ್ಲ. ತಪ್ಪಿಸಲು ಬಯಸಿದ್ದೆ. ಅದಕ್ಕಾಗಿಯೇ ನಿನ್ನೆ ಮುಂಬೈನಲ್ಲಿ ಊರಿನ ಹೊರಗಿದ್ದೆ. ಇಂದೂ ಇದನ್ನು ತಪ್ಪಿಸಲು ಪ್ರಯತ್ನಿಸಿದ್ದೆ. ಆದರೆ ರಾತ್ರಿಯಿಂದಲೇ ಕಾರ್ಯಕರ್ತರು ಕಾಯುತ್ತಿದ್ದರು. ನನ್ನ ಸ್ನೇಹಿತರು, ನಾಯಕರು, ಶಾಸಕರು, ಸಚಿವರು — ಎಲ್ಲರೂ ಕಾಯುತ್ತಿದ್ದರು. ಅವರ ಪ್ರೀತಿ, ವಿಶ್ವಾಸ, ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ನಾನು ನಿರಾಕರಿಸಲು ಸಾಧ್ಯವಾಗಲಿಲ್ಲ ಎಂದರು.

ನನ್ನ ಪೋಸ್ಟರ್‌ಗಳನ್ನು ಹಾಕಬಾರದೆಂದು ನನ್ನ ಬೆಂಬಲಿಗರಿಗೆ ಸೂಚಿಸಿದ್ದೇನೆ ಹಾಗೂ ಅವನ್ನು ತೆರವುಗೊಳಿಸುವಂತೆ ಪಾಲಿಕೆಗೆ ತಿಳಿಸಿದ್ದೇನೆ ಎಂದರು.

1962ರಲ್ಲಿ ಕನಕಪುರದಲ್ಲಿ ಜನಿಸಿದ ಡಿ ಕೆ ಶಿವಕುಮಾರ್ 1989ರಿಂದ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಉಪ ಮುಖ್ಯಮಂತ್ರಿ ಹುದ್ದೆಯೊಂದಿಗೆ ಬೃಹತ್ ಕೈಗಾರಿಕೆ, ಬೆಂಗಳೂರು ಅಭಿವೃದ್ಧಿ ಮತ್ತು ಇಂಧನ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.

ಈ ಶುಭಾಶಯಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಊಹಾಪೋಹಗಳು ಕೇಳಿಬರುತ್ತಲೇ ಇವೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಅಂತಹ ನಿರ್ಧಾರಗಳು ಪಕ್ಷದ ಹೈಕಮಾಂಡ್‌ಗೆ ಸೇರಿದ್ದು, ಯಾವುದೇ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ ರೂ.3 ಏರಿಕೆ, 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ..!

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್: ಪೆಟ್ರೋಲ್-ಡೀಸೆಲ್ ಬಳಿಕ CNG ದರವೂ ಹೆಚ್ಚಳ..!

US-Iran war: ಒಪ್ಪಂದಕ್ಕೆ ಬಾರದಿದ್ದರೆ ಒಂದೇ ದಿನದಲ್ಲಿ ಅಂತ್ಯ ಖಚಿತ; ಇರಾನ್'ಗೆ ಅಮೆರಿಕಾ ಕಠಿಣ ಎಚ್ಚರಿಕೆ

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ

ಹಿಜಾಬ್ ನಿಷೇಧ ಹಿಂಪಡೆದ ಸರ್ಕಾರ: ನ್ಯಾಯಾಂಗಕ್ಕೆ ಮಾಡಿದ ಅವಮಾನ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

SCROLL FOR NEXT