ಸಾಂದರ್ಭಿಕ ಚಿತ್ರ online desk
ರಾಜ್ಯ

ಚಲಿಸುತ್ತಿದ್ದ ಬೈಕ್‌ನಲ್ಲಿ ಮದ್ಯಪಾನ ಮಾಡಿ ಅಸಭ್ಯ ವರ್ತನೆ: ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ರೌಡಿ ಶೀಟರ್ ಸೇರಿ ಇಬ್ಬರು ಆರೋಪಿಗಳ ಬಂಧನ

ಬಂಧಿತರನ್ನು 32 ವರ್ಷದ ಹರೀಶ್ ಮತ್ತು 27 ವರ್ಷದ ನಿತೇಶ್ ಎಂದು ಗುರುತಿಸಲಾಗಿದೆ. ಹರೀಶ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ 13 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು: ಚಲಿಸುತ್ತಿದ್ದ ಬೈಕ್ ನಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸಿ, ಸಾರ್ವಜನಿಕಕಲ್ಲಿ ಆತಂಕ ಹುಟ್ಟಿಸಿದ ರೌಡಿ ಶೀಟರ್ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು 32 ವರ್ಷದ ಹರೀಶ್ ಮತ್ತು 27 ವರ್ಷದ ನಿತೇಶ್ ಎಂದು ಗುರುತಿಸಲಾಗಿದೆ. ಹರೀಶ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ 13 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಬ್ಬ ಆರೋಪಿ ನಿತೇಶ್ ಆನಂದಪುರೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಶುಕ್ರವಾರ ರಾತ್ರಿ ತಾವರೆಕೆರೆ ಕಡೆಯಿಂದ ಬೆಂಗಳೂರಿನತ್ತ ಬೈಕ್‌ನಲ್ಲಿ ಬರುತ್ತಿದ್ದ ವೇಳೆ, ಹಿಂಬದಿ ಸವಾರನು ಮದ್ಯದ ಬಾಟಲಿ ಹಿಡಿದು ವಾಹನ ಚಲನೆಯಲ್ಲಿಯೇ ಮದ್ಯ ಸೇವಿಸುತ್ತಿದ್ದು, ಇಬ್ಬರೂ ಜೋರಾಗಿ ಕೂಗಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿ, ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ವೇಳೆ ಪಶ್ಚಿಮ ವಿಭಾಗದ ಸಂಘಟಿತ ಅಪರಾಧ ದಳದ ಗಸ್ತು ಪೊಲೀಸರು ಇವರನ್ನು ತಡೆದು ವಶಕ್ಕೆ ಪಡೆದಿದ್ದಾರೆ.

ವಿಚಾರಣೆಯಲ್ಲಿ ಹರೀಶ್ ಈ ಹಿಂದೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಹಾಗೂ ಆತನ ವಿರುದ್ಧ ವಾರಂಟ್‌ಗಳು ಜಾರಿಯಲ್ಲಿದ್ದವು ಎಂಬುದು ತಿಳಿದುಬಂದಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video

Asian Games 2026: 'ನೀನ್ ಕ್ಯಾಚ್ ಬಿಡು, ನಾವ್ ನೀರು ಬಿಡ್ತೀವಿ': ಫೀಲ್ಡಿಂಗ್ ಮಾಡುತ್ತಿದ್ದ ಪಾಕ್ ಬೌಲರ್ ಗೆ ಅಭಿಮಾನಿಗಳ ಕಾಟ! Video

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!