ದಿನೇಶ್ ಭಟ್ಕಳ್ 
ರಾಜ್ಯ

ಗುಂಡು ಹಾರಿಸಿಕೊಂಡು ಹಿರಿಯ ವೈದ್ಯ ದಿನೇಶ್ ಭಟ್ಕಳ್ ಆತ್ಮಹತ್ಯೆ; ಸಾವಿಗೂ ಮುನ್ನ ಪ್ರಭಾಕರ ಕೋರೆಗೆ ಸಂದೇಶ

ದಿನೇಶ್ ಭಟ್ಕಳ ಅವರು ಇಂದು ಬೆಳಗ್ಗೆ ತಮ್ಮ ವೈಯಕ್ತಿಕ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಕೆಎಲ್‌ಇ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಸಂದೇಶ ಕಳುಹಿಸಿದ್ದಾರೆ.

ಬೆಳಗಾವಿ: ಕಳೆದ 40 ವರ್ಷಗಳಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಹಿರಿಯ ವೈದ್ಯ ಡಾ. ದಿನೇಶ್ ಭಟ್ಕಳ್ ಅವರು ಶುಕ್ರವಾರ ಮಂಡೋಳಿ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಿನೇಶ್ ಭಟ್ಕಳ ಅವರು ಇಂದು ಬೆಳಗ್ಗೆ ತಮ್ಮ ವೈಯಕ್ತಿಕ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಕೆಎಲ್‌ಇ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಸಂದೇಶ ಕಳುಹಿಸಿದ್ದಾರೆ.

ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದಿನೇಶ್ ಅವರು ಅಂಕೋಲಾ ಮೂಲದವರು ಮತ್ತು ಅಂಕೋಲಾದಲ್ಲಿರುವ ಕೆಎಲ್ಇ ಸಂಸ್ಥೆಯ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದರು. ಈಚೆಗೆ ಅವರು ಬೆಳಗಾವಿಯ ಮನೆಗೆ ಬಂದು ನೆಲೆಸಿದ್ದರು.

ಕಳೆದ ನಾಲ್ಕು ತಿಂಗಳ ಹಿಂದಷ್ಟೇ ದಿನೇಶ್ ಅವರಿಗೆ ಶ್ವಾಸಕೋಶ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಚಿಕಿತ್ಸೆಗಾಗಿಯೇ ತಮ್ಮೂರು ಬಿಟ್ಟು ಬೆಳಗಾವಿಯ ಟಿಳಕವಾಡಿಯ ಮಂಡೋಲಿ ರಸ್ತೆಯಲ್ಲಿ ಮನೆ ಮಾಡಿಕೊಂಡು ಕುಟುಂಬಸ್ಥರೊಂದಿಗೆ ವಾಸವಿದ್ದರು.

ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಸಹಿಸಲಾಗದ ನೋವನ್ನು ಅನುಭವಿಸುತ್ತಿದ್ದರು ಎನ್ನಲಾಗಿದೆ. ತಮಗಾಗುತ್ತಿರುವ ನೋವಿನ ಕುರಿತು ಆಗಾಗ ತಮ್ಮ ಸ್ನೇಹಿತರೊಡನೆ ಹಂಚಿಕೊಳ್ಳುತ್ತಿದ್ದರು. ಇಂದೂ ಸಹ ಬೆಳಗ್ಗೆ ಎದ್ದ ತಕ್ಷಣ ದಿನೇಶ್ ಅವರಿಗೆ ಎದೆಯಲ್ಲಿ ಸಹಿಸಲಾಗದ ನೋವು ಕಾಣಿಸಿಕೊಂಡಿದೆ. ಹೀಗಾಗಿ, ಅವರು ತಮ್ಮ ಮನೆಯಲ್ಲಿದ್ದ ರಿವಾಲ್ವಾರ್ ತೆಗೆದುಕೊಂಡು ಮನೆಯ ಗ್ಯಾಲರಿ ಬಳಿ ಹೋಗಿ ಅಲ್ಲಿಯೇ ತಲೆಗೆ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾರೆ.

ವೈದ್ಯ ದಿನೇಶ್ ಆತ್ಮಹತ್ಯೆಗೆ ಶರಣಾಗುವ ಮುನ್ನ ತಮ್ಮ ಹಿತೈಷಿಗಳು ಹಾಗೂ ಮಾರ್ಗದರ್ಶಕರಿಗೆ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಅದರಲ್ಲಿ ಕೆಎಲ್‌ಇ ಮಾಜಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆಯವರಿಗೂ ಸಹ ವಾಟ್ಸಪ್ ಸಂದೇಶ ಕಳಿಸಿದ್ದಾರೆ.

‘ನನಗೆ ನೀವು ಇಷ್ಟು ವರ್ಷ ಸಹಾಯ ಮಾಡಿದ್ದೀರಿ. ಆದರೆ, ನನಗೆ ತೀವ್ರವಾದ ಎದೆ ನೋವಿದೆ. ನಾನು ನೋವಿನಿಂದ ಬೇಸತ್ತು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ. ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ’ ಎಂದು ಸಂದೇಶ ಕಳುಹಿಸಿದ್ದಾರೆ.

ಡಾ. ದಿನೇಶ್ ಅವರ ಆತ್ಮಹತ್ಯೆಯ ಸುದ್ದಿ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರಗೆ ರವಾನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವಿಚಾರಣೆ ವಿಳಂಬದಿಂದ ಕಸಬ್, ಹಫೀಜ್ ಸಯೀದ್‌ಗೂ ಜಾಮೀನು ಸಿಗುತ್ತಿತ್ತೇ?': ಸುಪ್ರೀಂ ಕೋರ್ಟ್‌ಗೆ ಕೇಂದ್ರ ಪ್ರಶ್ನೆ

'ಮಂಡಿಯೂರಿ ಕುಳಿತಿದೆ BJP, ಅನ್ ಫಾಲೋ ಮಾಡಿ' ಎಂದ ಕಾಕ್ರೋಚ್ ಪಾರ್ಟಿ ಮುಖ್ಯಸ್ಥ, ಆದ್ರೆ ಆಗಿದ್ದೇ ಬೇರೆ..!

ದೇಶ ಮೊದಲು: ಪ್ರಧಾನಿ ಮೋದಿಯನ್ನು ಬೆಂಬಲಿಸಿದ ಕಮಲ್ ಹಾಸನ್

Cockroach Janta Partyಗೆ ಪಾಕ್-ಬಾಂಗ್ಲಾದೇಶಿ ಫಾಲೋವರ್ಸ್‌ಗಳೇ ಹೆಚ್ಚು; ಇದು ದೊಡ್ಡ ಸಂಚು ಎಂದ ನೆಟ್ಟಿಗರು

30ಕ್ಕೂ ಹೆಚ್ಚು 'ಕೈ' ಶಾಸಕರಿಂದ ಹೈಕಮಾಂಡ್ ಭೇಟಿ: ಸಂಪುಟ ಪುನಾರಚನೆಯಾಗದಿದ್ದರೆ ಏನು ಮಾಡಬೇಕೆಂದು ಗೊತ್ತು; ಬೇಳೂರು ಗೋಪಾಲಕೃಷ್ಣ

SCROLL FOR NEXT