ವೈಷ್ಣವಿ 
ರಾಜ್ಯ

ಮೈಸೂರು: ಸ್ಕೂಟರ್‌ಗೆ KSRCT ಬಸ್ ಡಿಕ್ಕಿ; ಪಿಯುಸಿ ವಿದ್ಯಾರ್ಥಿನಿ ಸಾವು!

ನಗರದ ಎನ್.ಆರ್. ಮೊಹಲ್ಲಾ ನಿವಾಸಿಗಳಾದ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಪುತ್ರಿ ವೈಷ್ಣವಿ (17) ಮೃತಪಟ್ಟ ವಿದ್ಯಾರ್ಥಿನಿ. ಮೈಸೂರು ಅರಮನೆ ಸನಿಹದ ಚಾಮರಾಜ ವೃತ್ತದ ಬಳಿ ಈ ದುರಂತ ನಡೆದಿದೆ.

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಂಗಳವಾರ ನಡೆದಿದೆ.

ನಗರದ ಎನ್.ಆರ್. ಮೊಹಲ್ಲಾ ನಿವಾಸಿಗಳಾದ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಪುತ್ರಿ ವೈಷ್ಣವಿ (17) ಮೃತಪಟ್ಟ ವಿದ್ಯಾರ್ಥಿನಿ. ಮೈಸೂರು ಅರಮನೆ ಸನಿಹದ ಚಾಮರಾಜ ವೃತ್ತದ ಬಳಿ ಈ ದುರಂತ ನಡೆದಿದೆ.

ವೈಷ್ಣವಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹಿಂತಿರುಗಲು ತಂದೆ ವೆಂಕಟೇಶ್ ಅವರ ಜೊತೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮೈಸೂರು ಅರಮನೆ ಮುಂಭಾಗದ ಚಾಮರಾಜ ವೃತ್ತದ ಬಳಿ ಬಂದ ಬಸ್‌ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ವೈಷ್ಣವಿ ತೀವ್ರ ಗಾಯಗೊಂಡು ಕೊನೆಯುಸಿರೆಳೆದಿದ್ದಾಳೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಸಂಚಾರ ಪೊಲೀಸರು ನೆರವಿಗಾಗಿ ಧಾವಿಸಿದರಾದರೂ, ತೀವ್ರ ಗಾಯಗೊಂಡಿದ್ದ ವೈಷ್ಣವಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇತ್ತ ತಂದೆ ವೆಂಕಟೇಶ್ ಅವರೂ ಕೂಡ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಘಟನೆ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೈಷ್ಣವಿ, ಅಕಾಲಿಕವಾಗಿ ಕೊನೆಯುಸಿರೆಳೆದಿರುವುದು ಆಕೆಯ ಕುಟುಂಬಸ್ಥರು ಹಾಗೂ ಸಂಬಂಧಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ಮನೆ ಸಮೀಪದ ಮಸೀದಿ ನಂತರ ಮತ್ತೊಂದು ಮಸೀದಿ ತೆರವಿಗೆ ಕೇಂದ್ರ ನಿರ್ಧಾರ; ಹೈಕೋರ್ಟ್‌ಗೆ ಮಾಹಿತಿ!

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ; ಬಂಧನಕ್ಕೆ ಆಗ್ರಹ; Video

ಕೊಲೆಯಾದ ಬಳಿಕ ದೆವ್ವವಾಗಿ ಕಾಡಿದ ಸ್ನೇಹಿತ; ಕಾಟ ತಾಳದೇ ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡ ಯುವಕ!

'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!

ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರ; ಶಾಲೆ ಧ್ವಂಸ, 29 ಮಂದಿ ಸಾವು