ಸಂಗ್ರಹ ಚಿತ್ರ 
ರಾಜ್ಯ

ಆಸ್ತಿ ಆಸೆಗೆ 70 ವರ್ಷದ ವೃದ್ಧೆಯ ಬರ್ಬರ ಹತ್ಯೆ; ಇಬ್ಬರು ಸಂಬಂಧಿಕರ ಬಂಧನ..!

ತನಿಖೆ ವೇಳೆ ವೆಂಕಟಲಕ್ಷ್ಮಮ್ಮ ಅವರಿಗೆ ನಾಲ್ಕು ಮನೆಗಳಿದ್ದವು ಎಂಬುದು ತಿಳಿದುಬಂದಿದೆ. ಈ ಪೈಕಿ ಒಂದು ಮನೆಯಲ್ಲಿ ಅವರು ವಾಸಿಸುತ್ತಿದ್ದರು. ಇದರ ಜೊತೆಗೆ ಆರ್.ಆರ್.ನಗರದಲ್ಲಿ ಹಲವು ನಿವೇಶನಗಳು ಮತ್ತು ಜಮೀನುಗಳನ್ನೂ ಹೊಂದಿದ್ದರು.

ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 70 ವರ್ಷದ ವೃದ್ಧೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರು ಸಂಬಂಧಿಕರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ನಗರದ ಹೊಸಗುಡ್ಡದಹಳ್ಳಿಯ ನಿವಾಸಿಯಾಗಿದ್ದ ವೃದ್ಧೆಯನ್ನು ಅಕ್ಟೋಬರ್ 24ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಯಾದ ವೃದ್ಧೆಯನ್ನು ವೆಂಕಟಲಕ್ಷ್ಮಮ್ಮ ಎಂದು ಗುರುತಿಸಲಾಗಿದೆ. ಅವರು ಕಳೆದ ಆರು ವರ್ಷಗಳಿಂದ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಬಂಧಿತ ಆರೋಪಿಗಳನ್ನು ಕಾಂತರಾಜು (39) ಮತ್ತು ಮಂಜಪ್ಪ (30) ಎಂದು ಗುರುತಿಸಲಾಗಿದೆ.

ಕಾಂತರಾಜು, ವೆಂಕಟಲಕ್ಷ್ಮಮ್ಮ ಅವರ ಸಹೋದರನ ಸಂಬಂಧಿಯಾಗಿದ್ದು, ಜಯನಗರದ ನಕ್ಕಲುಬಂಡೆ ನಿವಾಸಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಮಂಜಪ್ಪ, ಅವರ ಸಾಕು ಸಹೋದರಿಯ ಸಂಬಂಧಿಯಾಗಿದ್ದು, ಮದನಾಯಕನಹಳ್ಳಿಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 24ರಂದು ನೆರೆಹೊರೆಯವರು ವೆಂಕಟಲಕ್ಷ್ಮಮ್ಮ ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.

ತನಿಖೆ ವೇಳೆ ವೆಂಕಟಲಕ್ಷ್ಮಮ್ಮ ಅವರಿಗೆ ನಾಲ್ಕು ಮನೆಗಳಿದ್ದವು ಎಂಬುದು ತಿಳಿದುಬಂದಿದೆ. ಈ ಪೈಕಿ ಒಂದು ಮನೆಯಲ್ಲಿ ಅವರು ವಾಸಿಸುತ್ತಿದ್ದರು. ಇದರ ಜೊತೆಗೆ ಆರ್.ಆರ್.ನಗರದಲ್ಲಿ ಹಲವು ನಿವೇಶನಗಳು ಮತ್ತು ಜಮೀನುಗಳನ್ನೂ ಹೊಂದಿದ್ದರು. ಈ ಆಸ್ತಿಗಳಿಗೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿತ್ತು.

ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಕ್ಟೋಬರ್ 23ರ ತಡರಾತ್ರಿ ಕಾಂತರಾಜು ಮತ್ತು ಮಂಜಪ್ಪ ವೃದ್ಧೆಯ ಮನೆಗೆ ಭೇಟಿ ನೀಡಿರುವುದು ಪತ್ತೆಯಾಗಿದೆ.

ಬಂಧನದ ಬಳಿಕ ವಿಚಾರಣೆ ನಡೆಸಿದಾಗ, ವೃದ್ಧೆಯೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ತಲೆ ಮತ್ತು ಕುತ್ತಿಗೆಗೆ ಬಲವಾಗಿ ಹೊಡೆದ ಪರಿಣಾಮ ವೆಂಕಟಲಕ್ಷ್ಮಮ್ಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಯುದ್ಧ ಮತ್ತಷ್ಟು ಭೀಕರಗೊಳಿಸುವ ಸುಳಿವು, ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!

ಕಬ್ಬು ಬೆಳೆಗಾರರ ಹೋರಾಟ ಅಂತ್ಯ, ಶುಕ್ರವಾರದಿಂದ ಕಾರ್ಖಾನೆಗಳು ಆರಂಭ: ರೈತ ಮುಖಂಡ ಚೂನಪ್ಪ ಪೂಜಾರಿ

Asian Champions Trophy 2026 Final: ಜಪಾನ್ ವಿರುದ್ಧ 4-1 ಅಂತರದ ಗೆಲುವು; ದಾಖಲೆ ನಿರ್ಮಿಸಿದ ಭಾರತಕ್ಕೆ 6ನೇ ಟ್ರೋಫಿ

ಬೆಂಗಳೂರು ಟರ್ಫ್ ಕ್ಲಬ್‌ಗೆ 4 ಎಕರೆ ಜಮೀನು ಗುತ್ತಿಗೆ; ₹20 ಸಾವಿರ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಸಂಪುಟ ಅಸ್ತು!