ರಾಜ್ಯ

ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿ ಹತ್ಯೆ: ಪೊಲೀಸರ ಕಣ್ತಪ್ಪಿಸಲು ಕಾರಿಗೆ ‘Press’ ಸ್ಟಿಕ್ಕರ್, ಪತ್ರಿಕೆ ಬ್ಯಾನರ್ ಬಳಸಿದ್ದ ಆರೋಪಿ ಇಂದುಶೇಖರ್ !

ಈ ಬ್ಯಾನರ್‌ನ ಮರೆಯಲ್ಲಿ ಆತ ಧೈರ್ಯವಾಗಿ ಮೃತದೇಹಗಳನ್ನು ಸಾಗಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರು: 15 ದಿನಗಳ ಅವಧಿಯಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ರಾಜಾಜಿನಗರದ ಎಸ್. ಇಂದುಶೇಖರ್ ಬಳಸಿದ್ದಾನೆ ಎನ್ನಲಾದ ಕಾರಿನ ಮೇಲೆ ದೊಡ್ಡದಾಗಿ 'ಪ್ರೆಸ್' ಸ್ಟಿಕ್ಕರ್ ಅಂಟಿಸಲಾಗಿತ್ತು. ಅಷ್ಟೇ ಅಲ್ಲದೆ, ಕೃತ್ಯ ಎಸಗಿ ಮೃತದೇಹಗಳನ್ನು ಸಾಗಿಸುವಾಗ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಕಾರಿನ ಹಿಂಭಾಗದಲ್ಲಿ, ಡಿಕ್ಕಿಯ ಮೇಲ್ಭಾಗದಲ್ಲಿ ಪತ್ರಿಕೆಯ ಬ್ಯಾನರ್‌ವೊಂದನ್ನೂ ಪ್ರದರ್ಶಿಸಲಾಗಿತ್ತು ಎಂದು ತಿಳಿದುಬಂದಿದೆ.

ಈ ಬ್ಯಾನರ್‌ನ ಮರೆಯಲ್ಲಿ ಆತ ಧೈರ್ಯವಾಗಿ ಮೃತದೇಹಗಳನ್ನು ಸಾಗಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತದೇಹಗಳನ್ನು ಸಾಗಿಸುವಾಗ ಹಾಗೂ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡುವಾಗ, ವಿಶೇಷವಾಗಿ ಹೊಸೂರು ಸಮೀಪದ ಗಡಿ ದಾಟುವ ಸಂದರ್ಭದಲ್ಲಿ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಈ ತಂತ್ರ ಆತನಿಗೆ ಸಹಕಾರಿಯಾಗಿತ್ತು ಎನ್ನಲಾಗಿದೆ.

ಪೊಲೀಸರು ಇದೀಗ ವಶಪಡಿಸಿಕೊಂಡಿರುವ ಟೊಯೊಟಾ ಎಟಿಯೋಸ್ (KA 02 AF 1488) ಕಾರನ್ನು, ಹತ್ಯೆಗಳನ್ನು ಮುಚ್ಚಿಹಾಕುವ ಪ್ರಯತ್ನದ ಭಾಗವಾಗಿ ಮೃತದೇಹಗಳನ್ನು ಸಾಗಿಸಲು ಆರೋಪಿ ಬಳಸಿದ್ದ ಎಂದು ಶಂಕಿಸಲಾಗಿದೆ.

ಕಾರಿನ ಹಿಂಭಾಗದಲ್ಲಿ ಡಿಕ್ಕಿಯ ಮೇಲ್ಭಾಗದ ಉದ್ದಕ್ಕೂ 'ತಾನಾ ವರದಿ' ಎಂಬ ಪತ್ರಿಕೆಯ ಹೆಸರಿನ ಬ್ಯಾನರ್ ಅಳವಡಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಪ್ರೆಸ್' ಗುರುತಿನ ಚೀಟಿಯ ರೀತಿಯ ಪ್ರದರ್ಶನದಿಂದ ತಾನು ಮಾಧ್ಯಮ ಸಂಸ್ಥೆಯೊಂದಕ್ಕೆ ಸೇರಿದವನು ಎಂಬ ಭಾವನೆ ಮೂಡಿಸಿ, ಮೃತದೇಹಗಳನ್ನು ವಿಲೇವಾರಿ ಮಾಡುವಾಗ ಯಾರ ಗಮನಕ್ಕೂ ಬಾರದಂತೆ ನೋಡಿಕೊಂಡಿದ್ದಾನೆ ಎಂಬುದು ಪೊಲೀಸರ ಶಂಕೆಯಾಗಿದೆ.

ಈ ಕಾರಿನ ಮೇಲೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 14,900 ರೂಪಾಯಿವರೆಗೆ ದಂಡ ಬಾಕಿ ಇದೆ ಎನ್ನಲಾಗಿದೆ. ಅಲ್ಲದೆ, ಕಾರಿನೊಳಗೆ ಚಂದನದ ಪರಿಮಳದ ಹಲವು ಸುಗಂಧ ದ್ರವ್ಯಗಳ ಬಾಟಲಿಗಳು ಹಾಗೂ ಗುಲಾಬಿ ನೀರಿನ ಬಾಟಲಿಗಳು ಪತ್ತೆಯಾಗಿವೆ. ಮೃತದೇಹಗಳನ್ನು ಸಾಗಿಸುವಾಗ ದುರ್ವಾಸನೆ ಮುಚ್ಚಿಹಾಕಲು ಇವುಗಳನ್ನು ಇಟ್ಟುಕೊಂಡಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

'ಮಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದ ಆರೋಪಿ'

ಪ್ರಾಥಮಿಕ ತನಿಖೆಯ ಪ್ರಕಾರ, ಇಂದುಶೇಖರ್ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಜನರನ್ನು ಬೆದರಿಸಲು ಹಾಗೂ ಬ್ಲ್ಯಾಕ್‌ಮೇಲ್ ಮಾಡಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಪೋಕ್ಸೊ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುವ ಮೂಲಕ ಜನರನ್ನು ಹೆದರಿಸುತ್ತಿದ್ದ ಎಂಬ ಆರೋಪವೂ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 483ಕ್ಕೆ ತಲುಪಿದ AQI, ವಿಷಾನಿಲದ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: 85 ವರ್ಷದ ವೃದ್ಧನ ವಿರುದ್ಧ ಕೇಸ್!

ಹಳ್ಳಿ ಗುಗ್ಗು v/s ಬಲಿತ ದಲಿತ ಸಮರ: ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ ಜೆಡಿಎಸ್ ಕಚೇರಿ ಮುಂದೆ ಪ್ರಿಯಾಂಕ್ ಖರ್ಗೆ ಪರ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದ ಪೋಸ್ಟರ್ ವಾರ್: 'ಈ ನನ್ನ ಮಕ್ಕಳು' ಹೇಳಿಕೆಗೆ ವಿಜಯೇಂದ್ರ ನಿವಾಸ, ಬಿಜೆಪಿ ಕಚೇರಿಗೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಪರೀಕ್ಷೆಗೆ ಕರ್ನಾಟಕ, ಕೇರಳಕ್ಕೆ ಸ್ವಾತಂತ್ರ್ಯ: ರಾಜಕೀಯ ಮಾಡಬೇಡಿ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ