ಹೆಚ್ ಡಿ ಕುಮಾರಸ್ವಾಮಿ  
ರಾಜ್ಯ

ಲಕ್ಷ-ಲಕ್ಷ ಲಂಚ: ಸಚಿವ ಶಿವಲಿಂಗೇಗೌಡ, ಹಾಸನ ಡಿಸಿ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಸ್ಫೋಟಕ ಆರೋಪ

ಹಾಸನಾಂಬಾ ದರ್ಶನ ಪಡೆದ ಬಳಿಕ ಮಾತಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಡಿಸಿ ಲತಾ ಕುಮಾರಿ ಅವರ ಪಿಎ ಶಶಿಕಿರಣ್ ವಿರುದ್ಧ ಲಕ್ಷ-ಲಕ್ಷ ಲಂಚ ಪಡೆದ ಗಂಭೀರ ಆರೋಪ ಮಾಡಿದ್ದಾರೆ.

ಹಾಸನ: ದೀಪಾವಳಿ ಹಬ್ಬದ ನಡುವೆ ಹಾಸನ ಡಿಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇಂದು ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಾಪ್ ಚಾಟ್ ಪ್ರಿಂಟ್​​ನ ಓದಿದರು.

ಹಾಸನಾಂಬಾ ದರ್ಶನ ಪಡೆದ ಬಳಿಕ ಮಾತಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸಿ ಲತಾ ಕುಮಾರಿ ಅವರ ಪಿಎ ಶಶಿಕಿರಣ್ ವಿರುದ್ಧ ಲಕ್ಷ-ಲಕ್ಷ ಲಂಚ ಪಡೆದ ಗಂಭೀರ ಆರೋಪ ಮಾಡಿದ್ದಾರೆ. ಮಧ್ಯವರ್ತಿ ಜೊತೆ ಕ್ರಷರ್ ಗಳಿಗೆ ಪರವಾನಗಿ ಮತ್ತು ಇತರೆ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಪಡೆದಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಿ ಆರೋಪ ಮಾಡಿದ್ದಾರೆ. ಡಿಸಿ ಲತಾ ಕುಮಾರಿ ಸೇರಿದಂತೆ ಹಾಸನ ಸಚಿವರು ಹಾಗೂ ಸಂಸದ ಶ್ರೇಯಸ್ ಪಟೇಲ್ ಹೆಸರುಗಳನ್ನು ಕುಮಾರಸ್ವಾಮಿ ಉಲ್ಲೇಖ ಮಾಡಿದ್ದಾರೆ.

ಮೂರು ಕ್ರಷರ್​​ ಫೈಲ್​​ ಬಗ್ಗೆ ಚರ್ಚೆ ನಡೆದಿದೆ. ಕಳೆದ ಮೂರು ವರ್ಷದಿಂದ ನಿಮ್‌ ಹತ್ತಿರ ಎಷ್ಟು ಕೆಲಸ ಮಾಡಿಸಿದ್ದೇನೆ. ಕೇಳಿದ ಹಾಗೆ ಹಣ ಕೊಟ್ಟಿದ್ದೀನಿ, ಈಗ ಇಷ್ಟೊಂದು ಹಣ ಕೇಳ್ತಿದ್ದೀರಿ ಎಂದು ಇನ್ನೊಂದು ಕಡೆಯಿಂದ ಮೆಸೇಜ್​​ ಬಂದಿದೆ. ಅದಕ್ಕೆ ಈ ಕಡೆಯಿಂದ, ನೀವು ಕೊಡವಷ್ಟು ದುಡ್ಢನ್ನು ನಾವು ಡಿಸಿಯವರಿಗೆ ಕೊಡಬೇಕು. ಮಿಕ್ಕಿದ ಸಣ್ಣ ಹಣದಲ್ಲಿ ನಾನು ನನ್ನ ಸೆಕ್ಷನ್​ಗೆ ಹಂಚಬೇಕು. ಎಲ್ಲರಿಗೂ ಕೊಟ್ಟು ಮಿಕ್ಕೋದು ಮೂರು ನಾಮ ಮಾತ್ರ ಎಂದಿದ್ದಾರೆ.

ಏಪ್ರಿಲ್​​ ತಿಂಗಳಲ್ಲಿ ಒಂದು ಕೆಲಸಕ್ಕೆ ಹಠ ಹಿಡಿದು 15 ಲಕ್ಷ ತೆಗೆದುಕೊಂಡರು. ಕೇಳಿದರೆ ಡಿಸಿ ಮೇಡಂ ಒಂದು ರೂಪಾಯಿ ಕಡಿಮೆ ಆದರೂ ಆಗಲ್ಲ ಅಂತಾರೆ. ಇನ್ನೇನು ಡಿಸಿ ಮೇಡಂ ತಾನು ಇಸ್ಕೋತೀನಿ ಎಂದು ಪ್ರೆಸ್​​ಮೀಟ್​​ ಮಾಡಿ ಹೇಳ್ತಾರಾ? ಹಿಂದೆ ಇದ್ದ ಸತ್ಯಭಾಮ ಅವರೇ ಪರವಾಗಿಲ್ಲ. ಸ್ವಲ್ಪ ಮಾತ್ರ ಕೆಲಸ ಹೇಳೋರು. ದುಡ್ಡು ಅಷ್ಟೇ ಕಡಿಮೆ. ಈ ಡಿಸಿ ಬಂದಮೇಲೆ ನಮಗೂ ಖರ್ಚು ಮಾಡಿ ಸಾಕಾಗಿದೆ ಎಂದು ಹೇಳಿದ್ದು ಕೂಡ ಚಾಟ್​​ಗಳಲ್ಲಿವೆ. ಆಗ ಇನ್ನೊಂದು ಕಡೆಯವರು, ಅವೆಲ್ಲ ಬಿಡಿ ಸರ್​​. ಆ ಮೂರು ಫೈಲ್​ದು ಒಂದು ಫೈನಲ್​​ ಅಮೌಂಟ್​​ ಹೇಳಿ ಎಂದಿದ್ದಾರೆ.

ಅದಕ್ಕೆ ಹೇಳಿದ್ನಲ್ಲ ಹೋದ ವಾರವೇ, ಒಟ್ಟು 60 ಲಕ್ಷ ಕೊಡೋದಿದ್ದರೆ ಮಾತಾಡಿ. ಇಲ್ಲಂದ್ರೆ ಹಿಂಸೆಕೊಡಬೇಡಿ ಎಂದು ಇವರು ಹೇಳಿದ್ದಾರೆ. ಸಚಿವರು, ಸಂದರ ಬಳಿ ಬೇಕಿದ್ರೆ ಹೇಳಿಸುತ್ತೀನಿ ಎಂದಿದ್ದಕ್ಕೆ, ಶಿವಲಿಂಗೇಗೌಡರು ಡಿಸಿ ಬದಲಾವಣೆ ಮಾಡಿಸ್ತೀನಿ ಅಂತಿದ್ದರು. ಕೊನೆಗೆ ಡಿಸಿ ಮೇಡಂ ಅರಸೀಕೆರೆ ತಹಶೀಲ್ದಾರ್​​ ಸಂತೋಷ್​​ ಕಡೆ ಮಾತಾಡಿಸಿ 75 ಲಕ್ಷ ಕೊಟ್ಟು ಸುಮ್ಮನಿರಿಸಿದ್ದು. ಆ ಹಣವನ್ನು ನಾನು ಎಲ್ಲೆಲ್ಲೋ ಹೊಂದಿಸಿ ಕೊಟ್ಟುಬಂದೆ ಎಂದು ಹೇಳಿರುವುದು ಇದರಲ್ಲಿವೆ ಎಂದು ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 483ಕ್ಕೆ ತಲುಪಿದ AQI, ವಿಷಾನಿಲದ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: 85 ವರ್ಷದ ವೃದ್ಧನ ವಿರುದ್ಧ ಕೇಸ್!

ಹಳ್ಳಿ ಗುಗ್ಗು v/s ಬಲಿತ ದಲಿತ ಸಮರ: ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ ಜೆಡಿಎಸ್ ಕಚೇರಿ ಮುಂದೆ ಪ್ರಿಯಾಂಕ್ ಖರ್ಗೆ ಪರ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದ ಪೋಸ್ಟರ್ ವಾರ್: 'ಈ ನನ್ನ ಮಕ್ಕಳು' ಹೇಳಿಕೆಗೆ ವಿಜಯೇಂದ್ರ ನಿವಾಸ, ಬಿಜೆಪಿ ಕಚೇರಿಗೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಪರೀಕ್ಷೆಗೆ ಕರ್ನಾಟಕ, ಕೇರಳಕ್ಕೆ ಸ್ವಾತಂತ್ರ್ಯ: ರಾಜಕೀಯ ಮಾಡಬೇಡಿ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ