ಸಾಂದರ್ಭಿಕ ಚಿತ್ರ  
ರಾಜ್ಯ

ಕೋಳಿ ಸಾಕಾಣಿಕೆ ವೆಚ್ಚ ನಿಗದಿ ಆದೇಶ ಜಾರಿಗೆ ಆಗ್ರಹ: ನವೆಂಬರ್ 25ರಿಂದ ಅನಿರ್ದಿಷ್ಟಾವಧಿ ಮುಷ್ಕರ ಎಚ್ಚರಿಕೆ

ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕಲ್ಯಾಣ ಮತ್ತು ಅಭಿವೃದ್ಧಿ ಸಂಘ ಹಾಗೂ ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕಲ್ಯಾಣ ಮತ್ತು ಅಭಿವೃದ್ಧಿ ಸಂಘ ಜಂಟಿಯಾಗಿ ಈ ಪ್ರತಿಭಟನೆಗೆ ಕರೆ ನೀಡಿವೆ.

ಬೆಂಗಳೂರು: ಸರ್ಕಾರ ನಿಗದಿಪಡಿಸಿರುವ ಪ್ರತಿ ಕೆ.ಜಿ. ಕೋಳಿ ಸಾಕಾಣಿಕೆಯ ಮಧ್ಯಂತರ ಕನಿಷ್ಠ ವೆಚ್ಚವಾದ 10 ರೂ.ಗಳನ್ನು ಕೋಳಿ ಸಾಕಾಣಿಕೆ ಸಮಗ್ರ ನಿರ್ವಹಣಾ ಕಂಪನಿಗಳು ಜಾರಿಗೆ ತರಬೇಕು ಎಂದು ಆಗ್ರಹಿಸಿ, ನವೆಂಬರ್ 25ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕರ್ನಾಟಕದ ಕೋಳಿ ಸಾಕಾಣಿಕೆದಾರರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕಲ್ಯಾಣ ಮತ್ತು ಅಭಿವೃದ್ಧಿ ಸಂಘ ಹಾಗೂ ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕಲ್ಯಾಣ ಮತ್ತು ಅಭಿವೃದ್ಧಿ ಸಂಘ ಜಂಟಿಯಾಗಿ ಈ ಪ್ರತಿಭಟನೆಗೆ ಕರೆ ನೀಡಿವೆ. ಸುಮಾರು 5,000 ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, 'ವಿಧಾನಸೌಧ ಚಲೋ' ಹೋರಾಟ ನಡೆಸಲು ನಿರ್ಧರಿಸಲಾಗಿದೆ.

ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕಲ್ಯಾಣ ಮತ್ತು ಅಭಿವೃದ್ಧಿ ಸಂಘದ ಅಧ್ಯಕ್ಷ ಯಶವಂತ್ ಟಿ, ಸರ್ಕಾರ ಪ್ರತಿ ಕೆ.ಜಿ. ಕೋಳಿ ಸಾಕಾಣಿಕೆ ವೆಚ್ಚವನ್ನು 10 ರೂಪಾಯಿ ಎಂದು ನಿಗದಿಪಡಿಸಿ ಸುಮಾರು ಆರು ತಿಂಗಳು ಕಳೆದಿದ್ದರೂ, ಕೋಳಿ ಸಾಕಾಣಿಕೆ ಸಮಗ್ರ ನಿರ್ವಹಣಾ ಕಂಪನಿಗಳು ಈ ಆದೇಶವನ್ನು ಜಾರಿಗೆ ತಂದಿಲ್ಲ.

ನವೆಂಬರ್ 25ರೊಳಗೆ ಸರ್ಕಾರ ಆದೇಶದ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳದಿದ್ದರೆ, ಅಂದು ಸಂಜೆ 5 ಗಂಟೆಯಿಂದ ರಾಜ್ಯದಾದ್ಯಂತ ರೈತರು ಹೊಸ ಮರಿಗಳನ್ನು ಸ್ವೀಕರಿಸುವುದನ್ನೂ, ಬೆಳೆದ ಕೋಳಿಗಳನ್ನು ಪೂರೈಸುವುದನ್ನೂ ಸ್ಥಗಿತಗೊಳಿಸಲಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ ಎಂದು ತಿಳಿಸಿದರು.

ಸರ್ಕಾರದಲ್ಲಿ ಅಧಿಕಾರ ಬದಲಾವಣೆಯಾಗಿರುವುದನ್ನೇ ನೆಪವಾಗಿಟ್ಟುಕೊಂಡು ಕಂಪನಿಗಳು ಆದೇಶ ಜಾರಿಗೊಳಿಸುವುದರಿಂದ ನುಣುಚಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಸರ್ಕಾರ ಆದೇಶ ಹೊರಡಿಸಿದೆಯೇ ಹೊರತು ಅದನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಕಂಪನಿಗಳು ಒಂದಲ್ಲೊಂದು ನೆಪ ಹೇಳುತ್ತಿವೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರ ನಿಲ್ಲುವುದನ್ನು ಬಿಟ್ಟು ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿ ಚಂದ್ರಶೇಖರ್ ಮಾತನಾಡಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ರೈತರು ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ ಎಂದು ಹೇಳಿದರು.

ಮುಖ್ಯಮಂತ್ರಿ, ಪಶುಸಂಗೋಪನಾ ಸಚಿವರು ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಪದೇಪದೆ ಸಭೆಗಳನ್ನು ನಡೆಸಿದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದರು.

ಕೋಳಿ ಸಾಕಾಣಿಕೆಯಿಂದಾಗುತ್ತಿರುವ ಆರ್ಥಿಕ ಹೊರೆಯನ್ನು ವಿವರಿಸಿದ ಅವರು, ಒಂದು ಕೆ.ಜಿ. ಕೋಳಿ ಮಾಂಸ ಉತ್ಪಾದನೆಗೆ ವಾಸ್ತವವಾಗಿ 15ರಿಂದ 16 ರೂ. ವೆಚ್ಚವಾಗುತ್ತದೆ. ಶೆಡ್‌ಗಳ ನಿರ್ವಹಣೆ, ವಿದ್ಯುತ್ ಸೇರಿದಂತೆ ಹಲವು ವೆಚ್ಚಗಳನ್ನು ರೈತರು ಭರಿಸುತ್ತಿದ್ದಾರೆ ಎಂದು ತಿಳಿಸಿದರು.

ಇದಲ್ಲದೆ, ಕೋಳಿ ಸಾಕಾಣಿಕೆಯ ವಾಸ್ತವಿಕ ವೆಚ್ಚವನ್ನು ನಿರ್ಧರಿಸಲು ತಜ್ಞರ ಸಮಿತಿ ರಚಿಸಬೇಕು, ಕರ್ನಾಟಕ ಕೋಳಿ ಸಾಕಾಣಿಕೆ (ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆ-2022 ನ್ನು ಜಾರಿಗೊಳಿಸಬೇಕು ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಕೋಳಿ ಸಾಕಾಣಿಕೆಯನ್ನು ಕೃಷಿ ಚಟುವಟಿಕೆಯೆಂದು ಗುರುತಿಸಬೇಕು ಎಂದು ಸಂಘ ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಪಾನ್‌ನಲ್ಲಿ ಪ್ರಬಲ ಭೂಕಂಪ: 5.7 ತೀವ್ರತೆಯ ಕಂಪನಕ್ಕೆ ಜನಜೀವನ ಅಸ್ತವ್ಯಸ್ತ; 22 ಮಂದಿಗೆ ಗಾಯ, ಮುಂದಿನ 2-3 ದಿನಗಳಲ್ಲಿ ಪ್ರಬಲ ಕಂಪನ ಸಾಧ್ಯತೆ..!

BJP ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಗೆ ಗೆಲುವು: ವಿಚಾರಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಹೈಕೋರ್ಟ್..!

ಹೈಜಾಕ್ ಬೆದರಿಕೆ: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಮರಳಿದ ಇಂಡಿಗೋ ವಿಮಾನ..!

ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿ ಹತ್ಯೆ: ತಮಿಳುನಾಡಿನ ಸೇಲಂ ಘಾಟ್ ನಲ್ಲಿ ಮತ್ತೆರಡು ಮೃತದೇಹ ಪತ್ತೆ

ದೀಪಾವಳಿ ವೇಳೆ ಪಟಾಕಿ ಸಿಡಿಸುವ ಮುನ್ನ: ಈ ತಪ್ಪುಗಳ ಮಾಡಲೇಬೇಡಿ: ಕಣ್ಣಿಗೆ ಗಾಯವಾದರೆ ಏನು ಮಾಡಬೇಕು? ವೈದ್ಯರು ಕೊಟ್ಟ ಇಲ್ಲಿದೆ...