ಕೃಷ್ಣ ಬೈರೇಗೌಡ  
ರಾಜ್ಯ

ಕಸ ಸಂಗ್ರಹಣೆ ವಾಹನಗಳಿಗೆ GPS ಕಡ್ಡಾಯ: ನಿಯಮ ಪಾಲಿಸದ ಗುತ್ತಿಗೆದಾರರಿಗೆ ದಂಡ, ನವೆಂಬರ್ ಅಂತ್ಯದೊಳಗೆ ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ವ್ಯವಸ್ಥೆ ಜಾರಿ..!

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಹೊಸ ಪ್ರಾಥಮಿಕ ಕಸ ಸಂಗ್ರಹಣೆ ಗುತ್ತಿಗೆಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದ ಸಚಿವರು, ಹೊಸ ವ್ಯವಸ್ಥೆಯ ಜಾರಿಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ, ಜಿಪಿಎಸ್ ಆಧಾರಿತ ವಾಹನಗಳ ನಿಗಾ ಮತ್ತು ಪಾರದರ್ಶಕ ಪಾವತಿ ವ್ಯವಸ್ಥೆ ಇರಬೇಕು.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ಸಂಗ್ರಹಣೆ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ಸರ್ಕಾರ ಮುಂದಾಗಿದೆ.

ಇದರ ಭಾಗವಾಗಿ ನವೆಂಬರ್ ಅಂತ್ಯದ ವೇಳೆಗೆ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಘನತ್ಯಾಜ್ಯ ನಿರ್ವಹಣಾ ಗುತ್ತಿಗೆ ವ್ಯವಸ್ಥೆ ಕಾರ್ಯಾರಂಭ ಮಾಡಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಗೋವಿಂದರಾಜನಗರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ ಮತ್ತು ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಹೊಸ ವ್ಯವಸ್ಥೆ ಯಾವುದೇ ಅಡಚಣೆಯಿಲ್ಲದೆ ಜಾರಿಗೆ ಬರುವಂತೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್‌ನಲ್ಲಿ ಹೊಸ ಗುತ್ತಿಗೆ ವ್ಯವಸ್ಥೆ ಆರಂಭವಾಗುವ ನಿರೀಕ್ಷೆಯಿದೆ.

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಹೊಸ ಪ್ರಾಥಮಿಕ ಕಸ ಸಂಗ್ರಹಣೆ ಗುತ್ತಿಗೆಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದ ಸಚಿವರು, ಹೊಸ ವ್ಯವಸ್ಥೆಯ ಜಾರಿಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ, ಜಿಪಿಎಸ್ ಆಧಾರಿತ ವಾಹನಗಳ ನಿಗಾ ಮತ್ತು ಪಾರದರ್ಶಕ ಪಾವತಿ ವ್ಯವಸ್ಥೆ ಇರಬೇಕು ಎಂದು ಸೂಚಿಸಿದರು.

ಜಿಪಿಎಸ್ ದತ್ತಾಂಶದ ಮೂಲಕ ಪರಿಶೀಲಿಸಿ ದೃಢಪಡಿಸಿದ ಸೇವೆಗಳಿಗೆ ಮಾತ್ರ ಗುತ್ತಿಗೆದಾರರಿಗೆ ಹಣ ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಕಡ್ಡಾಯ ಜಿಪಿಎಸ್ ವ್ಯವಸ್ಥೆ ಇಲ್ಲದೆ ಕಾರ್ಯನಿರ್ವಹಿಸುವ ವಾಹನಗಳ ವಿರುದ್ಧ ದಂಡ ವಿಧಿಸುವಂತೆಯೂ ಸೂಚಿಸಿದರು.

ಕಸ ಸಂಗ್ರಹಣೆಗೆ ನಿಯೋಜಿಸುವ ಪ್ರತಿಯೊಂದು ವಾಹನಕ್ಕೂ ಜಿಪಿಎಸ್ ಅಳವಡಿಸುವುದು ಕಡ್ಡಾಯ. ಗುತ್ತಿಗೆದಾರರಿಗೆ ಮಾಡುವ ಪಾವತಿಯನ್ನು ಪರಿಶೀಲಿತ ಜಿಪಿಎಸ್ ದತ್ತಾಂಶಕ್ಕೆ ಜೋಡಿಸಬೇಕು. ಕಾರ್ಯನಿರ್ವಹಿಸದ ಜಿಪಿಎಸ್ ವ್ಯವಸ್ಥೆ ಹೊಂದಿರುವ ವಾಹನಗಳಿಗೆ ಆ ದಿನದ ಬಿಲ್ ಪಾವತಿಸಬಾರದು. ನಿಯಮ ಉಲ್ಲಂಘಿಸುವ ಗುತ್ತಿಗೆದಾರರಿಗೂ ದಂಡ ವಿಧಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಕೈಯಾರೆ ಸಲ್ಲಿಸುವ ಲೆಕ್ಕಾಚಾರಗಳನ್ನು ಆಧರಿಸಿ ಪಾವತಿ ಮಾಡುವ ಬದಲು, ವಾಹನಗಳು ನೈಜವಾಗಿ ಕಾರ್ಯನಿರ್ವಹಿಸಿದ ಆಧಾರದ ಮೇಲೆ ಹಣ ಪಾವತಿಯಾಗುವಂತೆ ತಂತ್ರಾಂಶ ಆಧಾರಿತ ಬಿಲ್ಲಿಂಗ್ ವ್ಯವಸ್ಥೆ ಜಾರಿಗೆ ತರಬೇಕು. ಸಂಬಂಧಪಟ್ಟ ನಗರ ಪಾಲಿಕೆ ಅಧಿಕಾರಿಗಳು ನಿಯಮಗಳ ಪಾಲನೆಯ ಮೇಲೆ ನಿಕಟ ನಿಗಾ ವಹಿಸಿ, ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ಸಿದ್ಧವಾಗಿರುವ ಹೊಸ ತಂತ್ರಾಂಶದ ಕಾರ್ಯವೈಖರಿಯನ್ನು ಅಧಿಕಾರಿಗಳು ವಿವರವಾದ ಪ್ರಾತ್ಯಕ್ಷಿಕೆ ಮೂಲಕ ತೋರಿಸಬೇಕು. ಗುತ್ತಿಗೆದಾರರು ಮತ್ತು ಇಲಾಖೆಯ ಸಿಬ್ಬಂದಿಗೆ ತಂತ್ರಾಂಶ ಬಳಕೆಯ ಕುರಿತು ಪರಿಚಯ ಮಾಡಿಕೊಡಬೇಕು ಎಂದು ಸೂಚಿಸಿದರು.

ಹೊಸ ವ್ಯವಸ್ಥೆಯ ಅನುಷ್ಠಾನದ ಮೇಲ್ವಿಚಾರಣೆ ಮತ್ತು ಎಲ್ಲ ಪಾಲುದಾರರ ನಡುವಿನ ಸಮನ್ವಯದ ಜವಾಬ್ದಾರಿಯನ್ನು ಆಯಾ ನಗರ ಪಾಲಿಕೆಗಳ ಆಯುಕ್ತರು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಪಾನ್‌ನಲ್ಲಿ ಪ್ರಬಲ ಭೂಕಂಪ: 5.7 ತೀವ್ರತೆಯ ಕಂಪನಕ್ಕೆ ಜನಜೀವನ ಅಸ್ತವ್ಯಸ್ತ; 22 ಮಂದಿಗೆ ಗಾಯ, ಮುಂದಿನ 2-3 ದಿನಗಳಲ್ಲಿ ಪ್ರಬಲ ಕಂಪನ ಸಾಧ್ಯತೆ..!

BJP ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಗೆ ಗೆಲುವು: ವಿಚಾರಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಹೈಕೋರ್ಟ್..!

ಹೈಜಾಕ್ ಬೆದರಿಕೆ: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಮರಳಿದ ಇಂಡಿಗೋ ವಿಮಾನ..!

ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿ ಹತ್ಯೆ: ತಮಿಳುನಾಡಿನ ಸೇಲಂ ಘಾಟ್ ನಲ್ಲಿ ಮತ್ತೆರಡು ಮೃತದೇಹ ಪತ್ತೆ

ದೀಪಾವಳಿ ವೇಳೆ ಪಟಾಕಿ ಸಿಡಿಸುವ ಮುನ್ನ: ಈ ತಪ್ಪುಗಳ ಮಾಡಲೇಬೇಡಿ: ಕಣ್ಣಿಗೆ ಗಾಯವಾದರೆ ಏನು ಮಾಡಬೇಕು? ವೈದ್ಯರು ಕೊಟ್ಟ ಇಲ್ಲಿದೆ...