ಬಂಧಿತ ಆರೋಪಿಗಳು. 
ರಾಜ್ಯ

ಹಾಕಿ ದಿಗ್ಗಜ ಎಂ.ಎಂ. ಸೋಮಯ್ಯ ಒಲಿಂಪಿಕ್ಸ್ ಪದಕ ಕಳವು ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ

ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ನ್ಯೂ ತಿಪ್ಪಸಂದ್ರ ನಿವಾಸಕ್ಕೆ ನುಗ್ಗಿದ್ದ ಆರೋಪಿಗಳು, ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾ ಪದಕಗಳು, ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದರು.

ಬೆಂಗಳೂರು: ಭಾರತದ ಹಾಕಿ ತಂಡದ ಮಾಜಿ ನಾಯಕ ಎಂ.ಎಂ. ಸೋಮಯ್ಯ ಅವರ ಮನೆಯಿಂದ ಕಳವಾಗಿದ್ದ ಐತಿಹಾಸಿಕ 1980ರ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ಎಲ್ಲಾ ಎಂಟು ಅಂತರರಾಷ್ಟ್ರೀಯ ಪದಕಗಳನ್ನು ಬೆಂಗಳೂರು ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ನ್ಯೂ ತಿಪ್ಪಸಂದ್ರ ನಿವಾಸಕ್ಕೆ ನುಗ್ಗಿದ್ದ ಆರೋಪಿಗಳು, ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾ ಪದಕಗಳು, ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದರು.

ಅಕ್ಟೋಬರ್ 28ರ ನಸುಕಿನಲ್ಲಿ ಸೋಮಯ್ಯ ಹಾಗೂ ಅವರ ಕುಟುಂಬದವರು ಕೊಡಗು ಜಿಲ್ಲೆಗೆ ತೆರಳಿದ್ದ ವೇಳೆ ಈ ಕಳ್ಳತನ ನಡೆದಿತ್ತು.

ಕುಟುಂಬದವರು ಮನೆಗೆ ಮರಳಿದಾಗ ಬೆಲೆಬಾಳುವ ವಸ್ತುಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಕಳವಾಗಿದ್ದ ಎಲ್ಲ ಪದಕಗಳನ್ನು ಪೊಲೀಸರು ಯಾವುದೇ ಹಾನಿಯಾಗದಂತೆ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು 31 ವರ್ಷದ ಮಾಣಿಕ್ಯ ಅಲಿಯಾಸ್ ಮಾಣಿಕಾಂತ ಮತ್ತು 25 ವರ್ಷದ ಭರತ್ ಎಂದು ಗುರುತಿಸಲಾಗಿದೆ. ಮಾಣಿಕ್ಯ ವಿರುದ್ಧ ಕರ್ನಾಟಕದಲ್ಲಿ 25 ಹಾಗೂ ತಮಿಳುನಾಡಿನಲ್ಲಿ ಎಂಟು ಸೇರಿದಂತೆ ಒಟ್ಟು 33 ಅಪರಾಧ ಪ್ರಕರಣಗಳಿವೆ. ಭರತ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ.

ಪೊಲೀಸರು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳು ಸೇರಿದಂತೆ ಎಂಟು ಅಂತಾರಾಷ್ಟ್ರೀಯ ಕ್ರೀಡಾ ಪದಕಗಳು, ಕ್ಯಾಮೆರಾ, ಪಿಚಂಗತ್ತಿ (ಕೊಡವ ಸಾಂಪ್ರದಾಯಿಕ ಕತ್ತಿ), ಒಲಿಂಪಿಕ್ಸ್ ಚೀಲ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ, ರಾಜಾಜಿನಗರದ ಚಿನ್ನದ ಕಂಪನಿಯೊಂದಕ್ಕೆ ಮಾರಾಟ ಮಾಡಲಾಗಿತ್ತು ಎನ್ನಲಾದ ಒಂದು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕವನ್ನೂ ವಶಕ್ಕೆ ಪಡೆಯಲಾಗಿದೆ. ಉಳಿದ ಆರು ಪದಕಗಳು ಹಾಗೂ ಕಳವಾಗಿದ್ದ ಇತರ ವಸ್ತುಗಳನ್ನು ಹೊಸಕೋಟೆಯ ಎಚ್. ಕ್ರಾಸ್ ಸಮೀಪದ ಆರೋಪಿಯೊಬ್ಬನ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ.

ಪದಕಗಳು ಮರಳಿ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸೋಮಯ್ಯ, “ಮತ್ತೊಮ್ಮೆ ಪದಕಗಳನ್ನು ಗೆದ್ದ ಅನುಭವವಾಗುತ್ತಿದೆ” ಎಂದು ಪೊಲೀಸರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪದಕಗಳು ಕೇವಲ ತಮ್ಮ ಗೌರವವಲ್ಲ, ರಾಜ್ಯ ಹಾಗೂ ದೇಶದ ಹೆಮ್ಮೆಯ ಸಂಕೇತವೂ ಆಗಿವೆ ಎಂದು ಹೇಳಿದರು.

ನವೆಂಬರ್ 9ರಂದು ರಾಮನಗರದ ಹಗಳಹಳ್ಳಿ ಕ್ರಾಸ್ ಬಳಿ ಪೊಲೀಸರು ಇಬ್ಬರು ಶಂಕಿತರನ್ನು ಅವರು ಕೃತ್ಯಕ್ಕೆ ಬಳಸಿದ್ದರೆನ್ನಲಾದ ದ್ವಿಚಕ್ರ ವಾಹನದೊಂದಿಗೆ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ ಮತ್ತೊಬ್ಬ ಸ್ನೇಹಿತನ ನೆರವಿನೊಂದಿಗೆ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನವೆಂಬರ್ 10ರಂದು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಎಂಟು ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ. ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಮೂರನೇ ವ್ಯಕ್ತಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಶ್ಮೀರ: ಕರ್ತವ್ಯದ ವೇಳೆ ನಾಪತ್ತೆಯಾಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಶವವಾಗಿ ಪತ್ತೆ

ನಟಿ-ಮಾಡೆಲ್ ಸಮ್ರೀನ್ ಜತೆ ಸ್ಟಾರ್‌ ಕ್ರಿಕೆಟರ್‌ ಅರ್ಷ್‌ದೀಪ್ ಸಿಂಗ್ ಎಂಗೇಜ್‌ಮೆಂಟ್; ಫೋಟೋ ಹಂಚಿಕೊಂಡ ಗರ್ಲ್​ಫ್ರೆಂಡ್!

ದೀಪಾವಳಿ ಹಬ್ಬಕ್ಕೆ ಕರೀನಾ ಕಪೂರ್ ಧರಿಸಿದ್ದ ಪೆಂಡೆಂಟ್‌ನಲ್ಲಿ ಕುರಾನ್‌ ಪದ್ಯ; ಬಾಲಿವುಡ್ ನಟಿಗೆ ಲೀಗಲ್ ನೋಟಿಸ್‌!

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು, Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

E-ಖಾತಾ ಅಕ್ರಮ: GBA ಸಹಾಯಕ ಆಯುಕ್ತ ಮಾಗಿ ಸೇರಿ 31 ಜನರ ವಿರುದ್ಧ FIR ದಾಖಲು