ಬಿ.ಕೆ ಹರಿಪ್ರಸಾದ್ 
ರಾಜ್ಯ

'ಸರ್ವಾಧಿಕಾರಿ ಮುಸಲೋನಿ ದೃಷ್ಟಿಕೋನದಿಂದ ನೋಡುವವರಿಗೆ, 56 ಇಂಚಿನ ಎದೆ ಎಂದು ಬೀಗುವವರಿಗೆ ಸೋನಿಯಾ ಆತ್ಮಚರಿತ್ರೆ ಅರ್ಥವಾಗಲ್ಲ'

56 ಇಂಚಿನ ಎದೆ ಇದೆ ಎಂದು ಬೀಗುವವರಿಗೆ ಈ ವಿಷಯ ಸರಿಯಾಗಿ ಅರ್ಥವಾದಂತೆ ಕಾಣುತ್ತಿಲ್ಲ, ಈ ಪುಸ್ತಕವು ನವೆಂಬರ್ 14 ರಂದು ದೆಹಲಿಯಲ್ಲಿ ಬಿಡುಗಡೆಯಾಗಲಿದ್ದು, ನಂತರ ನವೆಂಬರ್ 17 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು: ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಕುರಿತು ಬಿಜೆಪಿ ಟೀಕೆ ಮತ್ತು ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಬಿಜೆಪಿ ಈ ವಿಷಯವನ್ನು ಆರ್‌ಎಸ್‌ಎಸ್ (RSS) ಮತ್ತು ಇಟಲಿಯ ಸರ್ವಾಧಿಕಾರಿ ಮುಸ್ಸೋಲಿನಿ ಅವರ ಸೈದ್ಧಾಂತಿಕ ದೃಷ್ಟಿಕೋನದಿಂದ ನೋಡುತ್ತಿದೆ ಎಂದು ಆರೋಪಿಸಿದರು.

56 ಇಂಚಿನ ಎದೆ ಇದೆ ಎಂದು ಬೀಗುವವರಿಗೆ ಈ ವಿಷಯ ಸರಿಯಾಗಿ ಅರ್ಥವಾದಂತೆ ಕಾಣುತ್ತಿಲ್ಲ, ಈ ಪುಸ್ತಕವು ನವೆಂಬರ್ 14 ರಂದು ದೆಹಲಿಯಲ್ಲಿ ಬಿಡುಗಡೆಯಾಗಲಿದ್ದು, ನಂತರ ನವೆಂಬರ್ 17 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಮೈಸೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶಿವಕುಮಾರ್ ವಿರುದ್ಧ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್ ಸುಮ್ಮನೆ ಮಾತನಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಅವರ ಮಾತುಗಳು ಮತ್ತು ನಡೆಗಳ ಬಗ್ಗೆ ನಾವು ಚರ್ಚೆಗೆ ಇಳಿಯುವುದು ಬೇಡ. ಅವರು ಮುಖ್ಯಮಂತ್ರಿಯಾಗಿದ್ದಾಗ ನನಗೆ ಯಾವ ಸಹಾಯ ಮಾಡಿದರು ಮತ್ತು ನಾನು ಅವರಿಗಾಗಿ ಏನು ಮಾಡಿದೆ? ನನ್ನ ಪಕ್ಷವನ್ನು ಮುಗಿಸಲು ಅವರು ಏನೆಲ್ಲಾ ಪ್ರಯತ್ನಗಳನ್ನು ಮಾಡಿದರು? ಅವರು ನೀಡುವ ಪ್ರತಿಯೊಂದು ಹೇಳಿಕೆಗೂ ನಾನು ಪ್ರತಿಕ್ರಿಯಿಸಬೇಕೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಅಡಿಯಲ್ಲಿ ನೆರವು ಬಿಡುಗಡೆ ಮಾಡುವುದರಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ವ್ಯಕ್ತಪಡಿಸಿದ ಟೀಕೆಯನ್ನು ಹರಿಪ್ರಸಾದ್ ಸಮರ್ಥಿಸಿಕೊಂಡರು. ಕೇಂದ್ರ ಸರ್ಕಾರದಿಂದ ನೆರವು ಕೋರಲು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದೊಳಗೆ ಇರುವ ಭಿನ್ನ ಸೈದ್ಧಾಂತಿಕ ಧ್ವನಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಪಕ್ಷವು ವೈವಿಧ್ಯಮಯ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರುವ ಜನರಿಗೆ ಅವಕಾಶ ನೀಡುತ್ತದೆ ಎಂದು ಹೇಳಿದರು. ಸಮಾಜವಾದಿಗಳು, ಪ್ರಜಾಪ್ರಭುತ್ವವಾದಿಗಳು ಮತ್ತು ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರುವವರು ಕೂಡ ಪಕ್ಷದ ಭಾಗವಾಗಿದ್ದಾರೆ. ಕಾಂಗ್ರೆಸ್ ಧರ್ಮ ಅಥವಾ ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಮತ್ತು ನಾವು ಅವರ ಮಾತುಗಳನ್ನು ಆಲಿಸುತ್ತೇವೆ. ಅಂತಿಮವಾಗಿ, ಪಕ್ಷವೇ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ," ಎಂದು ಅವರು ತಿಳಿಸಿದರು. ಸದಸ್ಯರು ಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರಬಹುದಾದರೂ, ಕಾಂಗ್ರೆಸ್ ತನ್ನ ಬದ್ಧತೆಗಳಿಗೆ ಬದ್ಧವಾಗಿರುತ್ತದೆ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎನ್‌ವಿಡಿಯಾದ ಮಾಜಿ CEO ಜೆನ್ಸನ್ ಹುವಾಂಗ್‌ಗೆ ಮತ್ತೊಬ್ಬ ಮಹಿಳಾ ಉದ್ಯೋಗಿ ಜೊತೆ ಸಂಬಂಧ: ರಾಯಿಟರ್ಸ್ ವರದಿ

BJP ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಗೆ ಬ್ರೇಕ್; 2022ರ ಹಿಂದಿನ ಸ್ಥಿತಿಗೆ ತರಲು 'ಕೈ' ಸರ್ಕಾರ ಮುಂದು..!

ಹಾವೇರಿ: IAF helicopter ತುರ್ತು ಲ್ಯಾಂಡಿಂಗ್: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಏಪ್ರಿಲ್ 20ರಿಂದ 'Invest Karnataka 2027': ಏರೋಸ್ಪೇಸ್-ರಕ್ಷಣಾ ವಲಯಕ್ಕೆ ಬಂಪರ್; 2026-31ರ ನೂತನ ನೀತಿ ಅನಾವರಣ..!

Nvidia ನೂತನ CEO ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಡೊನಾಲ್ಡ್ ಟ್ರಂಪ್!