ಬೆಂಗಳೂರಿನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ  
ರಾಜ್ಯ

ಜಗತ್ತಿಗೆ ಭಾರತ ಯೋಗದ ಹೆಬ್ಬಾಗಿಲು,ಯಾವುದೇ ವೆಚ್ಚವಿಲ್ಲದೆ ದೊರೆಯುವ ಅತಿದೊಡ್ಡ ಆರೋಗ್ಯ ಕೊಡುಗೆ: ಪ್ರಧಾನಿ ಮೋದಿ; Video

ಅರಿಶಿನಕ್ಕೆ ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಉತ್ಪಾದನೆ, ಗುಣಮಟ್ಟ ಮತ್ತು ರಫ್ತಿಗೆ ಉತ್ತೇಜನ ನೀಡಲು ಸರ್ಕಾರ ರಾಷ್ಟ್ರೀಯ ಅರಿಶಿನ ಮಂಡಳಿಯನ್ನೂ ಸ್ಥಾಪಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಆಯುರ್ವೇದ ಮತ್ತು ಯೋಗದ ಪ್ರಯೋಜನಗಳನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಮಗ್ರ ಆರೋಗ್ಯ ಸೇವೆ (Holistic healthcare) ಜಾಗತಿಕ ಮಟ್ಟದಲ್ಲಿ ಹೊಸ ಆಂದೋಲನವಾಗಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯ ಬಗ್ಗೆಯೂ ಜನರ ಆಸಕ್ತಿ ಹೆಚ್ಚುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ಜಿಗಣಿ ಬಳಿಯ ಎಸ್-ವ್ಯಾಸ ವಿಶ್ವವಿದ್ಯಾಲಯದ ‘ಪ್ರಶಾಂತಿ ಕುಟೀರ’ದಲ್ಲಿ ನಡೆದ ಸುವರ್ಣ ಮಹೋತ್ಸವ ಹಾಗೂ ಎಚ್.ವಿ. ಶೇಷಾದ್ರಿ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ಆಯುಷ್‌ಗಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಗಿದೆ ಎಂದು ಹೇಳಿದರು.

ಆಯುಷ್ ಉತ್ಪನ್ನಗಳ ರಫ್ತು ಕೂಡ ಹೆಚ್ಚುತ್ತಿದ್ದು, ಆಯುಷ್ ವಲಯಕ್ಕೆ ಸಂಬಂಧಿಸಿದ ಆರ್ಥಿಕತೆಯು ಹಲವು ಲಕ್ಷ ಕೋಟಿ ರೂಪಾಯಿಗಳ ಮಟ್ಟಕ್ಕೆ ಬೆಳೆದಿದೆ. ಅರಿಶಿನಕ್ಕೆ ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಉತ್ಪಾದನೆ, ಗುಣಮಟ್ಟ ಮತ್ತು ರಫ್ತಿಗೆ ಉತ್ತೇಜನ ನೀಡಲು ಸರ್ಕಾರ ರಾಷ್ಟ್ರೀಯ ಅರಿಶಿನ ಮಂಡಳಿಯನ್ನೂ ಸ್ಥಾಪಿಸಿದೆ ಎಂದು ತಿಳಿಸಿದರು.

140 ಕೋಟಿ ಭಾರತೀಯರು ವಿಕಸಿತ ಭಾರತ ನಿರ್ಮಾಣದ ಸಾಮಾನ್ಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ವಿಶ್ವಬ್ಯಾಂಕ್ ವರದಿಯು ಈ ಪ್ರಯತ್ನಕ್ಕೆ ಹೊಸ ವೇಗ ನೀಡಿದೆ. ಕಳೆದ 12ರಿಂದ 13 ವರ್ಷಗಳಲ್ಲಿ ಸುಮಾರು 50 ಕೋಟಿ ಭಾರತೀಯರು ತೀವ್ರ ಬಡತನದಿಂದ ಹೊರಬಂದಿದ್ದಾರೆ ಎಂದು ವರದಿ ತಿಳಿಸಿರುವುದನ್ನು ಅವರು ಉಲ್ಲೇಖಿಸಿದರು.

ಪ್ರತಿಯೊಂದು ಕುಟುಂಬವೂ ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಯೋಗ ಮಹತ್ವದ ಪಾತ್ರ ವಹಿಸಬಲ್ಲದು. ಯೋಗವು ರೋಗಮುಕ್ತಿ ಮಾತ್ರವಲ್ಲದೆ ಭೋಗಮುಕ್ತಿ (ಭೌತಿಕ ಸುಖಭೋಗಗಳ ಮೇಲಿನ ಅವಲಂಬನೆಯಿಂದ ಮುಕ್ತಿ)ಯನ್ನೂ ನೀಡುತ್ತದೆ ಎಂಬುದನ್ನು ತಾನು ಯಾವಾಗಲೂ ಪ್ರತಿಪಾದಿಸುತ್ತಿರುವುದಾಗಿ ತಿಳಿಸಿದರು.

ಯಾವುದೇ ವೆಚ್ಚವಿಲ್ಲದೆ ದೊರೆಯುವ ಅತಿದೊಡ್ಡ ಆರೋಗ್ಯ ಕೊಡುಗೆ ಯೋಗವಾಗಿದೆ ಎಂದು ಹೇಳಿದ ಮೋದಿ, ವಿಕಸಿತ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡುವ ದೃಷ್ಟಿಯಿಂದ ಮುಂದಿನ 25 ವರ್ಷಗಳ ಕಾರ್ಯಯೋಜನೆಯನ್ನು ಸಿದ್ಧಪಡಿಸುವಂತೆ ಎಸ್-ವ್ಯಾಸ ವಿಶ್ವವಿದ್ಯಾಲಯಕ್ಕೆ ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ಕನ್ನಡ ವರನಟ ಡಾ ರಾಜ್ ಕುಮಾರ್ ಯೋಗಾಭ್ಯಾಸದಲ್ಲಿ ಮಾದರಿ: ಪ್ರಧಾನಿ ಮೋದಿ

4th ODI: ವಿಲ್ ಯಂಗ್ ಸ್ಫೋಟಕ ಶತಕ, ಭಾರತಕ್ಕೆ ಗೆಲ್ಲಲು 334 ರನ್ ಬೃಹತ್ ಗುರಿ ನೀಡಿದ ನ್ಯೂಜಿಲೆಂಡ್

16 ವರ್ಷಗಳ ಹಿಂದೆ ವಿಚ್ಚೇದನ, ಮುರಿದು ಬಿದ್ದ 2ನೇ ಮದುವೆ, ಕೊನೆಗೂ ಒಂದಾದ ತಾರಾ ದಂಪತಿ ರಂಜಿತ್-ಪ್ರಿಯಾ ರಮಣ್!

ರಾಕ್ಷಸ ಕೃತ್ಯ; ಮಹಿಳೆಗೆ ಲೈಂಗಿಕ ಕಿರುಕುಳ, ವಿರೋಧಿಸಿದ್ದಕ್ಕೆ ರೈಲಿನಿಂದ ತಳ್ಳಿದ ಕಾಮುಕ; ಸಿಸಿಟಿವಿಯಲ್ಲಿ ಕೃತ್ಯ ಸೆರೆ! Video

ಮೈದಾನದಲ್ಲೇ ಬ್ರಾರ್ - ಟಿಮ್ ನಡುವೆ ಮತ್ತೆ ಜಗಳ: ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ವಿರಾಟ್ ಕೊಹ್ಲಿ; Video