ದೇಗುಲ ಆನೆ ಕಾಲಿಗೆ ಗಾಯ 
ರಾಜ್ಯ

'ಅತ್ಯಂತ ಅಮಾನವೀಯ, 70 ವರ್ಷ ಬದುಕಬೇಕಿದ್ದ ಆನೆ 30ನೇ ವಯಸ್ಸಿಗೇ ಸಾವು'; ದೇಗುಲದ ಆನೆಗಳ ಸಂಕಷ್ಟದ ಬಗ್ಗೆ ನಟಿ ರಮ್ಯಾ ಕಿಡಿ, Video

“ಇಂತಹ ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯಗಳಿಗೆ ಸಂಬಂಧಪಟ್ಟ ಇಲಾಖೆಯೇ ಅವಕಾಶ ನೀಡುತ್ತಿರುವುದು ಬೇಸರದ ಸಂಗತಿ. ಸಚಿವರು ಹಾಗೂ ಧಾರ್ಮಿಕ ವಲಯದ ಒತ್ತಡಕ್ಕೆ ಇಲಾಖೆ ಹೆದರಿದೆಯೇ ಎಂಬ ಅನುಮಾನ..

ಬೆಂಗಳೂರು: ಭಾರತದಲ್ಲಿ ದೇಗುಲದ ಆನೆಗಳ ಬದುಕು ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಆನೆಗಳು, ಮತ್ತೊಂದೆಡೆ ದೀರ್ಘಕಾಲ ಬಂಧನದಲ್ಲಿ ಬದುಕಬೇಕಾದ ಸಂಕಷ್ಟ ಎದುರಿಸುತ್ತಿವೆ.

ಇದಕ್ಕೆ ಕರ್ನಾಟಕದ ಅಲಕನೂರು ಮಠದ ಆನೆ ಧ್ರುವರಾಜನ ಸಾವು ಉದಾಹರಣೆಯಾಗಿದೆ. ಧ್ರುವರಾಜ ಆನೆ 25 ವರ್ಷಕ್ಕೂ ಹೆಚ್ಚು ಕಾಲ ಅಲಕನೂರು ಮಠದ ಸೇವೆಯಲ್ಲಿತ್ತು. ಆದರೆ ಕೇವಲ 30ನೇ ವಯಸ್ಸಿನಲ್ಲೇ ಮೃತಪಟ್ಟಿದೆ ಎಂದು ಸುಜಯ್ ಜಗದೀಶ್ ಎನ್ನುವವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಅವರು, 'ಸಾಮಾನ್ಯವಾಗಿ ಆನೆಗಳ ನೈಸರ್ಗಿಕ ಜೀವಿತಾವಧಿ ಸುಮಾರು 70 ವರ್ಷಗಳೆಂದು ಹೇಳಲಾಗುತ್ತದೆ. ಹೀಗಾಗಿ ಧ್ರುವರಾಜನ ಸಾವು, ದೇಗುಲದ ಆನೆಗಳ ಜೀವನ ಪರಿಸ್ಥಿತಿ ಮತ್ತು ಅವುಗಳ ಕಲ್ಯಾಣದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ' ಎಂದಿದ್ದಾರೆ.

ಸಂಪ್ರದಾಯದ ಹೆಸರಿನಲ್ಲಿ ಬಂಧನದ ಬದುಕು?

ದೇಗುಲದ ಧಾರ್ಮಿಕ ಆಚರಣೆಗಳು, ಮೆರವಣಿಗೆಗಳು ಮತ್ತು ಉತ್ಸವಗಳಲ್ಲಿ ಆನೆಗಳಿಗೆ ವಿಶೇಷ ಸ್ಥಾನವಿದೆ. ಭಕ್ತರು ಅವುಗಳನ್ನು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಆದರೆ ಈ ಗೌರವದ ಮತ್ತೊಂದು ಮುಖವಾಗಿ ಆನೆಗಳು ದೀರ್ಘಕಾಲ ಸೆರೆಯಲ್ಲಿದ್ದು, ತಮ್ಮ ಸಹಜ ಪರಿಸರದಿಂದ ದೂರವಾಗಿ ಬದುಕಬೇಕಾದ ಪರಿಸ್ಥಿತಿ ಎದುರಿಸುತ್ತಿವೆ.

ಧಾರ್ಮಿಕ ಸಂಪ್ರದಾಯಗಳನ್ನು ಉಳಿಸುವುದರ ಜೊತೆಗೆ ಆನೆಗಳ ಆರೋಗ್ಯ, ಸ್ವಾತಂತ್ರ್ಯ ಮತ್ತು ಕಲ್ಯಾಣಕ್ಕೂ ಆದ್ಯತೆ ನೀಡಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ರಮ್ಯಾ ಪೋಸ್ಟ್

ದೇಗುಲದ ಆನೆ ಕಾಲಿಗೆ ಸರಪಳಿ ಬಿಗಿದು ತೀವ್ರ ಗಾಯವಾಗಿರುವ ಫೋಟೋ ವೈರಲ್ ಆಗುತ್ತಲೇ ಈ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೆಯನ್ನು ಇಂತಹ ಅಮಾನವೀಯ ಸ್ಥಿತಿಯಲ್ಲಿ ಇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಸಂಬಂಧಪಟ್ಟ ಇಲಾಖೆಯ ಕಾರ್ಯವೈಖರಿಯನ್ನೂ ಪ್ರಶ್ನಿಸಿದ್ದಾರೆ.

“ಇದು ಶೋಚನೀಯ. ನನಗೆ ತುಂಬಾ ಕೋಪ ಮತ್ತು ದುಃಖವಾಗುತ್ತಿದೆ. ಇಂತಹ ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯಗಳಿಗೆ ಸಂಬಂಧಪಟ್ಟ ಇಲಾಖೆಯೇ ಅವಕಾಶ ನೀಡುತ್ತಿರುವುದು ಬೇಸರದ ಸಂಗತಿ. ಸಚಿವರು ಹಾಗೂ ಧಾರ್ಮಿಕ ವಲಯದ ಒತ್ತಡಕ್ಕೆ ಇಲಾಖೆ ಹೆದರಿದೆಯೇ ಎಂಬ ಅನುಮಾನ ಮೂಡುತ್ತಿದೆ” ಎಂದು ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ vs ಕಾಂಗ್ರೆಸ್: ಪ್ರಧಾನಿ ಮೋದಿ ಮುಂದೆ ಮೇಕೆದಾಟು ಪ್ರಸ್ತಾಪಿಸಿದ CM ಡಿಕೆಶಿ; ಖಂಡಿಸಿದ ಮಾಣಿಕ್ಯಂ ಟ್ಯಾಗೋರ್!

ರಾಜಕೀಯ ಬದ್ಧವೈರಿ ನಿತೀಶ್ ಕುಮಾರ್ ಮನೆಯಲ್ಲಿ 'ಖೀರ್' ಸವಿಯಲು ಲಾಲು ಪುತ್ರಿ ರೋಹಿಣಿ ನಿರ್ಧಾರ!

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

ಗೋಧ್ರಾ ಹತ್ಯಾಕಾಂಡ ತನಿಖೆ ಬಗ್ಗೆ ಸೋನಿಯಾ ಸಂದೇಹ: ಸಿಬಿಐ ಮಾಜಿ ಅಧಿಕಾರಿ ಹೇಳಿದ್ದೇನು? Video

ತಾಯಿಯ ಅಂತ್ಯಕ್ರಿಯೆಗಾಗಿ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ಬಿಗಿ ಪೊಲೀಸ್ ಭದ್ರತೆ