ವಿಧಾನ ಸೌಧ ಮುಂದಿನ ಸಾಂದರ್ಭಿಕ ಚಿತ್ರ  
ರಾಜ್ಯ

ಮಳೆಗಾಲ ಮುಗೀತು, ಈ ವರ್ಷ ಚಳಿ ಹೇಗಿರಲಿದೆ; ಹವಾಮಾನ ತಜ್ಞರು ಏನಂತಾರೆ?

ತೀವ್ರ ಎಲ್ ನಿನೊ ಪರಿಣಾಮ, ಬೇಸಿಗೆ ಕಾಲ ದೀರ್ಘವಾಗಿರುವುದು ಹಾಗೂ ನೈಋತ್ಯ ಮತ್ತು ಈಶಾನ್ಯ ಮುಂಗಾರು ಮಳೆ ಕೊರತೆಯಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹವಾಮಾನದ ಈ ಏರುಪೇರು ಕೃಷಿ ಇಳುವರಿಯ ಮೇಲೂ ತೀವ್ರ ಪರಿಣಾಮ ಬೀರಿದೆ.

ಸಾಮಾನ್ಯವಾಗಿ ಅಕ್ಟೋಬರ್ ಮಧ್ಯಭಾಗದಿಂದ ಈಶಾನ್ಯ ಮುಂಗಾರು ಆರಂಭವಾಗುವುದರೊಂದಿಗೆ ಉತ್ತರ ಮತ್ತು ಈಶಾನ್ಯ ದಿಕ್ಕಿನ ಗಾಳಿಗಳು ಬೀಸತೊಡಗುತ್ತವೆ. ಇದರೊಂದಿಗೆ ರಾಜ್ಯದಲ್ಲಿ ಚಳಿಗಾಲವೂ ಆರಂಭವಾಗುತ್ತದೆ. ಆದರೆ ಈ ಬಾರಿ ಗಾಳಿಯ ದಿಕ್ಕು ಮತ್ತು ಸ್ವರೂಪದಲ್ಲಿ ಬದಲಾವಣೆಯಾಗಿದ್ದು, ತಾಪಮಾನ ಹೆಚ್ಚಾಗಿಯೇ ಉಳಿದಿದೆ.

ಈ ಬಾರಿ ಚಳಿಗಾಲದಲ್ಲಿ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಚಳಿ ಇರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ತೀವ್ರ ಎಲ್ ನಿನೊ ಪರಿಣಾಮ, ಬೇಸಿಗೆ ಕಾಲ ದೀರ್ಘವಾಗಿರುವುದು ಹಾಗೂ ನೈಋತ್ಯ ಮತ್ತು ಈಶಾನ್ಯ ಮುಂಗಾರು ಮಳೆ ಕೊರತೆಯಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹವಾಮಾನದ ಈ ಏರುಪೇರು ಕೃಷಿ ಇಳುವರಿಯ ಮೇಲೂ ತೀವ್ರ ಪರಿಣಾಮ ಬೀರಿದೆ.

ಭಾರತೀಯ ಹವಾಮಾನ ಇಲಾಖೆ (IMD)ಯ ಹಿರಿಯ ಅಧಿಕಾರಿ, ಸಾಮಾನ್ಯವಾಗಿ ಅಕ್ಟೋಬರ್‌ನಿಂದ ತಾಪಮಾನ ಇಳಿಕೆಯಾಗತೊಡಗುತ್ತದೆ. ಆದರೆ ಈ ಬಾರಿ ಚಳಿಗಾಲದ ಆರಂಭ ವಿಳಂಬವಾಗಿದೆ. ಈ ವರ್ಷ ಋತುಮಾನಗಳಲ್ಲಿ ತೀವ್ರ ಬದಲಾವಣೆಗಳಾಗಿವೆ. ಇವುಗಳ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಿದೆ ಎಂದು ಹೇಳಿದರು.

ಬೆಂಗಳೂರು ಐಎಂಡಿ ನಿರ್ದೇಶಕ ಎನ್. ಪುವಿಯರಸನ್, ಕಳೆದ ಎರಡು ದಿನಗಳಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸುರಿದ ಮಳೆಗೆ ಕನ್ಯಾಕುಮಾರಿ ಪ್ರದೇಶದ ಮೇಲಿನ ವಾಯು ಸುಳಿಯೇ ಕಾರಣ. ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಒಣಹವೆ ಮುಂದುವರಿಯಲಿದೆ.

ಹಗಲಿನ ಗರಿಷ್ಠ ತಾಪಮಾನವು ಸಾಮಾನ್ಯ 27 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ ಸುಮಾರು 2 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ. ರಾತ್ರಿಯ ಕನಿಷ್ಠ ತಾಪಮಾನವು ಸಾಮಾನ್ಯವಾಗಿಯೇ ಇದ್ದು, ಸುಮಾರು 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದರು.

ಈಶಾನ್ಯ ದಿಕ್ಕಿನ ಗಾಳಿಗಳು ಬೀಸಲು ಆರಂಭಿಸಿದಾಗ ತಾಪಮಾನ ಇಳಿಕೆಯಾಗಲಿದೆ. ಆದರೆ ಸದ್ಯಕ್ಕೆ ಅಂತಹ ಗಾಳಿಯ ಮುನ್ಸೂಚನೆ ಇಲ್ಲ ಎಂದು ಪುವಿಯರಸನ್ ಹೇಳಿದರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ನಿರ್ದೇಶಕ ಎಂ.ಎಸ್. ದಿವಾಕರ್, ಚಳಿಗಾಲ ವಿಳಂಬವಾಗಲು ಎಲ್ ನಿನೊದ ತೀವ್ರ ಪರಿಣಾಮವೇ ಕಾರಣ ಎಂದು ತಿಳಿಸಿದರು. 2027ರ ಮಾರ್ಚ್‌ವರೆಗೆ ಸೂಪರ್ ಎಲ್ ನಿನೊ ಪರಿಸ್ಥಿತಿ ಮುಂದುವರಿಯಲಿದೆ. ಇದು ರಾಜ್ಯದ ಬೆಳೆ ಪದ್ಧತಿಯ ಮೇಲೂ ಪರಿಣಾಮ ಬೀರಿದೆ. ಮಣ್ಣಿನ ತೇವಾಂಶವನ್ನೇ ಹೆಚ್ಚಾಗಿ ಅವಲಂಬಿಸಿರುವ ಹಿಂಗಾರು ಬೆಳೆಗಳಿಗೆ ಹಾನಿಯಾಗಿದೆ ಎಂದರು.

ಕೃಷಿ ಹವಾಮಾನ ತಜ್ಞ ಪ್ರೊ. ಎಂ.ಬಿ. ರಾಜೇಗೌಡ ಅವರ ಪ್ರಕಾರ, ರಾಜ್ಯದಲ್ಲಿ ಸಾಮಾನ್ಯವಾಗಿ ಅಕ್ಟೋಬರ್ ಮಧ್ಯಭಾಗದಿಂದ ಫೆಬ್ರವರಿವರೆಗೆ ಚಳಿಗಾಲ ಇರುತ್ತದೆ. ಈ ಬಾರಿ ನವೆಂಬರ್ ಮೂರನೇ ವಾರದಲ್ಲಿ ಚಳಿಗಾಲ ಆರಂಭವಾಗುವ ಸಾಧ್ಯತೆಯಿದೆ. ಆದರೆ ಚಳಿಯ ತೀವ್ರತೆ ಹೆಚ್ಚಿರುವುದಿಲ್ಲ.

ಎಲ್ಲ ಋತುಮಾನಗಳೂ ಮುಂಗಾರು ಮಳೆಯ ಸ್ವರೂಪವನ್ನು ಅವಲಂಬಿಸಿವೆ. ಈ ವರ್ಷ ಮುಂಗಾರು ಮಳೆಯ ಮೇಲೂ ಪರಿಣಾಮ ಉಂಟಾಗಿದೆ ಎಂದು ಹೇಳಿದರು.

ಐಎಂಡಿ ಅಂಕಿಅಂಶಗಳ ಪ್ರಕಾರ, ನೈಋತ್ಯ ಮುಂಗಾರು ಮಳೆಯಲ್ಲಿ ಶೇ.32ರಷ್ಟು ಕೊರತೆ ಉಂಟಾಗಿದ್ದು, ಇದು ಈವರೆಗಿನ ಅತ್ಯಧಿಕ ಕೊರತೆಯಾಗಿದೆ. ಈಶಾನ್ಯ ಮುಂಗಾರು ಮಳೆಯಲ್ಲೂ ಶೇ.49ರಷ್ಟು ಕೊರತೆ ದಾಖಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ (IISC) ದಿವೇಚಾ ಹವಾಮಾನ ಬದಲಾವಣೆ ಅಧ್ಯಯನ ಕೇಂದ್ರದ ವಿಶಿಷ್ಟ ವಿಜ್ಞಾನಿ ಪ್ರೊ. ಜೆ. ಶ್ರೀನಿವಾಸನ್, ಸೂಪರ್ ಎಲ್ ನಿನೊ ಪರಿಣಾಮದಿಂದ ಈ ಬಾರಿ ಚಳಿಗಾಲ ಸಾಮಾನ್ಯಕ್ಕಿಂತ ಬೆಚ್ಚಗಿರಲಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಉಷ್ಣ ಅಲೆಗಳೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.

ಇದರಿಂದ ಗೋಧಿ ಬೆಳೆಯ ಇಳುವರಿಯ ಮೇಲೆ ಪರಿಣಾಮ ಉಂಟಾಗಲಿದೆ. ಅಕ್ಟೋಬರ್‌ನಲ್ಲಿ ಸರಾಸರಿ ಗರಿಷ್ಠ ತಾಪಮಾನ 32.43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಈವರೆಗಿನ ಅತ್ಯಧಿಕವಾಗಿದೆ. ಇದೇ ತಿಂಗಳಲ್ಲಿ ಸರಾಸರಿ ಕನಿಷ್ಠ ತಾಪಮಾನ 20.83 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 1901ರ ನಂತರದ ಐದನೇ ಅತ್ಯಧಿಕ ತಾಪಮಾನವಾಗಿದೆ ಎಂದು ವಿವರಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಪ್ರೊ. ಎಂ.ಎನ್. ತಿಮ್ಮೇಗೌಡ, ಚಳಿಗಾಲದಲ್ಲಿ ತಂಪಾದ ವಾತಾವರಣವಿದ್ದರೆ ಕಡಲೆ, ಕುಸುಬೆ, ಸಾಸಿವೆ ಮತ್ತು ಸೂರ್ಯಕಾಂತಿ ಬೆಳೆಗಳ ಇಳುವರಿ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಈ ವರ್ಷ 24.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ಕೇವಲ 11.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇದರಿಂದ ಶೇ.45ರಷ್ಟು ಕೊರತೆ ಉಂಟಾಗಿದೆ. ಹೆಚ್ಚುತ್ತಿರುವ ತಾಪಮಾನ ಮತ್ತು ಮಳೆಯ ಕೊರತೆಯಿಂದಾಗಿ ಈ ವರ್ಷ ರಾಜ್ಯದಲ್ಲಿ ಶೇ.70ರಷ್ಟು ಬೆಳೆ ನಷ್ಟವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ vs ಕಾಂಗ್ರೆಸ್: ಪ್ರಧಾನಿ ಮೋದಿ ಮುಂದೆ ಮೇಕೆದಾಟು ಪ್ರಸ್ತಾಪಿಸಿದ CM ಡಿಕೆಶಿ; ಖಂಡಿಸಿದ ಮಾಣಿಕ್ಯಂ ಟ್ಯಾಗೋರ್!

ಔಟ್‌ಲುಕ್ ಸಮಸ್ಯೆ ಬಗೆಹರಿಸಿದ Microsoft, ಜಾಗತಿಕ ವ್ಯತ್ಯಯಕ್ಕೆ ಕೊನೆ; ಗ್ರಾಹಕರಲ್ಲಿ ಕ್ಷಮೆಯಾಚನೆ

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

ಗೋಧ್ರಾ ಹತ್ಯಾಕಾಂಡ ತನಿಖೆ ಬಗ್ಗೆ ಸೋನಿಯಾ ಸಂದೇಹ: ಸಿಬಿಐ ಮಾಜಿ ಅಧಿಕಾರಿ ಹೇಳಿದ್ದೇನು? Video

ತಾಯಿಯ ಅಂತ್ಯಕ್ರಿಯೆಗಾಗಿ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ಬಿಗಿ ಪೊಲೀಸ್ ಭದ್ರತೆ