ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ  
ರಾಜ್ಯ

ಕೇವಲ 7ಕಿ.ಮೀ. ಉದ್ದದ ಮೆಟ್ರೋ ಉದ್ಘಾಟನೆಗೆ ಪ್ರಧಾನಿ ಮೋದಿ ಬರಬೇಕಿತ್ತಾ, ಹತಾಶೆಯಿಂದ ಅವರು ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ: ಸಚಿವ ಎಂಬಿ ಪಾಟೀಲ್; Video

ವೇದಿಕೆಯಲ್ಲಿ ಭಾಷಣ ಮಾಡಿದ ಡಿ ಕೆ ಶಿವಕುಮಾರ್ ರಾಜ್ಯಕ್ಕೆ ಬರ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು, ಮೆಟ್ರೊದಲ್ಲಿ ಕರ್ನಾಟಕದ ಕೊಡುಗೆ ಹೀಗೆ ಎಲ್ಲಾ ವಿಷಯಗಳನ್ನು ಪ್ರಧಾನಿಗಳ ಮುಂದೆ ಪ್ರಸ್ತಾಪಿಸಿದ್ದಾರೆ. ಇನ್ನು ಮಾಡಬೇಕಾಗಿರುವುದು ಪ್ರಧಾನಿಯವರ ವಿವೇಚನೆಗೆ ಬಿಟ್ಟ ವಿಚಾರ ಎಂದರು.

ವಿಜಯಪುರ: ಕೇವಲ 7 ಕಿಲೋ ಮೀಟರ್ ಉದ್ದದ ಮೆಟ್ರೊ ಜಾಲದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುವ ಅಗತ್ಯವಿತ್ತಾ, ಸರಿ ಅವರು ಬಂದಿದ್ದಾರೆ, ಅವರ ಮುಂದೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯಕ್ಕೆ ಆಗಬೇಕಾದ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೆಟ್ರೊ ಪಿಂಕ್ ಲೈನ್ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಭಾಷಣ ಮಾಡಿದ ಡಿ ಕೆ ಶಿವಕುಮಾರ್ ರಾಜ್ಯಕ್ಕೆ ಬರ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು, ಮೆಟ್ರೊದಲ್ಲಿ ಕರ್ನಾಟಕದ ಕೊಡುಗೆ ಹೀಗೆ ಎಲ್ಲಾ ವಿಷಯಗಳನ್ನು ಪ್ರಧಾನಿಗಳ ಮುಂದೆ ಪ್ರಸ್ತಾಪಿಸಿದ್ದಾರೆ. ಇನ್ನು ಮಾಡಬೇಕಾಗಿರುವುದು ಪ್ರಧಾನಿಯವರ ವಿವೇಚನೆಗೆ ಬಿಟ್ಟ ವಿಚಾರ ಎಂದರು.

ಹತಾಶೆಯಿಂದ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ಮಾಡುತ್ತಿರಬೇಕು, ಅವರ ಜಯಪ್ರಿಯತೆ ಕಡಿಮೆಯಾಗುತ್ತಿದೆ, ಹೀಗಾಗಿ ಹತಾಶೆಗೊಂಡಿರಬೇಕು, ರಾಹುಲ್ ಗಾಂಧಿಯವರು ಮಾಡಿರುವ ಆರೋಪ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳ ಮೇಲೆ ಬಿಜೆಪಿ ನಿಯಂತ್ರಣ ಹೊಂದಿದೆ ಎಂದು ಆರೋಪಿಸಿದರು.

100 ಕಿ ಮೀ ದಾಟಿದ ಮೆಟ್ರೊ ಜಾಲ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗವನ್ನು ಉದ್ಘಾಟಿಸಿದರು. ಸುಮಾರು 3,470 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ಮಾರ್ಗವು ನಗರದ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದರ ಜತೆಗೆ ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲಿದೆ. ಅಲ್ಲದೆ, ಪ್ರಯಾಣಿಕರ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ನೆರವಾಗಲಿದೆ.

ಈ ಎಲಿವೇಟೆಡ್ ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ (ಬಿಳೇಕಹಳ್ಳಿ-ಐಐಎಂಬಿ), ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿದಂತೆ ಆರು ನಿಲ್ದಾಣಗಳನ್ನು ಸಂಪರ್ಕಿಸಲಿದೆ.

ಈ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲವು ಮೊದಲ ಬಾರಿಗೆ 100 ಕಿ.ಮೀ. ಗಡಿ ದಾಟಲಿದೆ.

ಯೋಜನೆಯ ವೆಚ್ಚ

ಪ್ರಧಾನಿ ಕಚೇರಿಯ ಮಾಹಿತಿಯ ಪ್ರಕಾರ, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗವನ್ನು ಸುಮಾರು 3,470 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

ಕಷ್ಟ-ಸುಖ ಮಾತಾಡಿ ಸಂಕಷ್ಟಕ್ಕೆ ಸಿಲುಕಿದ ದರ್ಶನ್-ಪವಿತ್ರಾ: 2 ನಿಮಿಷದ ಸಂಭಾಷಣೆಯೇ SPPಗೆ ಹೊಸ ಅಸ್ತ್ರ! ಆಡಿಯೋ ಕ್ಲಿಪ್ ಜಡ್ಜ್ ಕೈಗೆ?

'ನಾವೇನು ಸ್ಕೂಲ್ ಮಕ್ಕಳಾ?'.. 'ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳ ನೀಡುವುದು ಸರಿಯಲ್ಲ': ಆಸಿಸ್ ನಾಯಕ ಕೆಂಡಾಮಂಡಲ, ಮುರಳಿ ಕಾರ್ತಿಕ್ ತಿರುಗೇಟು!

2019ರಲ್ಲಿ ತಂದೆಯ ಕೊಲೆ, 2026ರಲ್ಲಿ ಸೇಡು ತೀರಿಸಿಕೊಂಡ ಮಗ; ಹಲವು ಬಾರಿ ಸಂಚು, ಕೊಡಲಿಯಿಂದ ಕೊಚ್ಚಿ ಹತ್ಯೆ!

ಅಮೆರಿಕದಲ್ಲಿ ದಿಢೀರ್ ವಿಮಾನ ಸಂಚಾರ ಸ್ಥಗಿತ; ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದು: ಆದ್ರೂ ಯಾವುದೇ ಬೆದರಿಕೆ ಇಲ್ಲ - US