ದರ್ಶನ್ , ಪವಿತ್ರಾ ಗೌಡ 
ರಾಜ್ಯ

ಕಷ್ಟ-ಸುಖ ಮಾತಾಡಿ ಸಂಕಷ್ಟಕ್ಕೆ ಸಿಲುಕಿದ ದರ್ಶನ್-ಪವಿತ್ರಾ: 2 ನಿಮಿಷದ ಸಂಭಾಷಣೆಯೇ SPPಗೆ ಹೊಸ ಅಸ್ತ್ರ! ಆಡಿಯೋ ಕ್ಲಿಪ್ ಜಡ್ಜ್ ಕೈಗೆ?

ಹೌದು, ದರ್ಶನ್ ಹಾಗೂ ಪವಿತ್ರಾಗೌಡ ಅವರ ಮಾತುಕತೆಯ ಆಡಿಯೋ ಈಗ ಪ್ರಾಸಿಕ್ಯೂಷನ್ ಗೆ ದೊಡ್ಡ ಅಸ್ತ್ರವಾಗಿದ್ದು, ಎಸ್ ಪಿಪಿ ಇದನ್ನು ನ್ಯಾಯಧೀಶರ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಮತ್ತು ಅವರ ಗೆಳತಿ ಪವಿತ್ರಾಗೌಡ ಅವರು ಕಳೆದ ಗುರುವಾರ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ವೇಳೆ ಕಷ್ಟ-ಸುಖ ಮಾತಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಹೌದು, ದರ್ಶನ್ ಹಾಗೂ ಪವಿತ್ರಾಗೌಡ ಅವರ ಮಾತುಕತೆಯ ಆಡಿಯೋ ಈಗ ಪ್ರಾಸಿಕ್ಯೂಷನ್ ಗೆ ದೊಡ್ಡ ಅಸ್ತ್ರವಾಗಿದ್ದು, ಎಸ್ ಪಿಪಿ ಇದನ್ನು ನ್ಯಾಯಧೀಶರ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಬ್ಬರ ಮಾತಿನ ರೆಕಾರ್ಡ್ ಕ್ಲಿಪ್ ಅನ್ನು ನ್ಯಾಯಧೀಶರಿಗೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಸ್ ಪಿಪಿ ಸೋಮವಾರ ಈ ವಿಚಾರವನ್ನು ನ್ಯಾಯಧೀಶರ ಗಮನಕ್ಕೆ ತರುವ ಸಾಧ್ಯತೆ ಇದೆ. ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ತಮ್ಮ ಮಾತುಕತೆ ವೈರಲ್ ಆಗಿರುವ ಬಗ್ಗೆ ನಂತರ ಅವರ ಗಮನಕ್ಕೆ ಬಂದಿದ್ದು, ಸಿಬ್ಬಂದಿಯ ಮೂಲಕ ಈ ವಿಚಾರವನ್ನು ಇಬ್ಬರೂ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ.

ಕೋರ್ಟ್ ಹಾಲ್ ನಲ್ಲಿ ಮಾತ್ರ ತಾಂತ್ರಿಕ ಸಮಸ್ಯೆಯಿಂದಾಗಿ ವಿಡಿಯೋ ಕಾನ್ಫರೆನ್ಸ್‌ ಕಟ್ ಆಗಿತ್ತು. ಆದರೆ ವಿಸಿ ಆನ್ ಲೈನ್ ನಲ್ಲಿ ಹಾಗೆಯೇ ಇತ್ತು ಎನ್ನಲಾಗಿದೆ. ಹೀಗಾಗಿ ಕೋರ್ಟ್ ನಲ್ಲಿದ್ದವರಿಗೆ ತಿಳಿಯಲಿಲ್ಲ. ಬದಲಾಗಿ ಆನ್ ಲೈನ್ ಮೂಲಕ ಲಾಗಿನ್ ಆಗಿದ್ದವ್ರಿಗೆ ಇಬ್ಬರ ಮಾತು ಕೇಳಿದೆ. ಆದರೆ ಕೋರ್ಟ್ ಹಾಲ್ ನಲ್ಲಿ ವಿಸಿ ಲಾಗ್ ಔಟ್ ಆಗಿದೆ ಎಂದು ತಿಳಿದು ದರ್ಶನ್ ಮತ್ತು ಪವಿತ್ರಾಗೌಡ ಮಾತನಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಮೊದಲು ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

ಅಮೆರಿಕದಲ್ಲಿ ದಿಢೀರ್ ವಿಮಾನ ಸಂಚಾರ ಸ್ಥಗಿತ; ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದು: ಆದ್ರೂ ಯಾವುದೇ ಬೆದರಿಕೆ ಇಲ್ಲ - US

KPSC ನೇಮಕಾತಿ ಹಗರಣ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್‌, ಕನ್ನಾಳೆ ವಿರುದ್ಧ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ

ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿ ನವ ಮಧ್ಯಮ ವರ್ಗ: ಪ್ರಧಾನಿ ಮೋದಿ; Video

ಬೆತ್ತಲೆ ಫೋಟೋ ಕಳುಹಿಸಿದ ಪಾಕ್ ಏಜೆಂಟ್; ಪ್ರತಿಯಾಗಿ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ!