ಸಾವಿನಲ್ಲೂ ಒಂದಾದ ಅಪ್ಪ-ಮಗ 
ರಾಜ್ಯ

ರಾಯಚೂರು: ಸಾವಿನಲ್ಲೂ ಒಂದಾದ ಅಪ್ಪ-ಮಗ; ತಂದೆ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ಪುತ್ರ!

ತಂದೆಯ ಸಾವಿನ ಸುದ್ದಿ ಕೇಳಿ ಅಘಾತ ತಡೆಯಲಾರದೇ ಲೋ ಬಿಪಿಯಿಂದ ಕಿರಿಯ ಮಗ ಸಹ ಸಾವನ್ನಪ್ಪಿದ್ದಾನೆ.

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ಸೋಮವಾರ ಅಪ್ಪ-ಮಗ ಸಾವಿನಲ್ಲೂ ಒಂದಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ತಿಪ್ಪನಹಟ್ಟಿ ಗ್ರಾಮದ 58 ವರ್ಷದ ಅಮೀನ್ ಸಾಬ್ ಅವರು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತಂದೆಯ ಸಾವಿನ ಸುದ್ದಿ ಕೇಳಿ ಅಘಾತ ತಡೆಯಲಾರದೇ ಲೋ ಬಿಪಿಯಿಂದ ಕಿರಿಯ ಮಗ ಸಹ ಸಾವನ್ನಪ್ಪಿದ್ದಾನೆ.

ತಂದೆಯ ಸಾವಿನ ಸುದ್ದಿ ತಿಳಿದ ಎರಡ್ಮೂರು ಗಂಟೆಯಲ್ಲೇ 37 ವರ್ಷದ ಮಗ ಮೆಹಬೂಬ್ ದಾದಾಪೀರ್ ಮೃತಪಟ್ಟಿದ್ದಾನೆ. ಮೃತ ದಾದಾಪೀರ್‌ಗೆ ಕಳೆದ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು.

ಈ ಘಟನೆಯಿಂದ ತಿಪ್ಪನಹಟ್ಟಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು, ತಂದೆ ಮತ್ತು ಮಗನನ್ನು ಕಳೆದುಕೊಂಡು ಕಂಗಾಲಾಗಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕುಲ್ಗಾಮ್ ಎನ್‌ಕೌಂಟರ್: ಒಬ್ಬ ಉಗ್ರ ಹತ, ಮತ್ತೊಬ್ಬ ಟ್ರ್ಯಾಪ್; CRPF ಯೋಧರ ಮೇಲಿನ ದಾಳಿಗೆ ಭಾರತೀಯ ಸೇನೆ ಪ್ರತೀಕಾರ

ಆರ್ಥಿಕ ಸಹಾಯಕ್ಕಾಗಿ ಮನವಿ ವಿಡಿಯೋ ವೈರಲ್: 'ಜೋಶ್' ನಟ ಶರದ್ ಕಪೂರ್ ಭೇಟಿ ಮಾಡಿದ ಸೋನು ಸೂದ್! Video

'ನಮ್ಮ ಮಕ್ಕಳನ್ನೇ ಸೋಲಿಸೋಕೆ ಆಗಿಲ್ಲ, ಇನ್ನು?': U19 ಏಷ್ಯಾಕಪ್ ಗೆಲುವಿನ ಬೆನ್ನಲ್ಲೇ ಪಾಕ್ ಕಾಲೆಳೆದ ಓವೈಸಿ, Video

ಬಾಕ್ಸ್ ಆಫೀಸ್‌ನಲ್ಲಿ 'Ramayana' ಹೊಸ ದಾಖಲೆ; 11 ದಿನಕ್ಕೆ ವಿಶ್ವಾದ್ಯಂತ 1,384 ಕೋಟಿ ರೂ. ಕಲೆಕ್ಷನ್! ಧುರಂದರ್ 2 ದಾಖಲೆ ಪತನ

ಚಹಾಲ್ ಮಾಜಿ ಪತ್ನಿ ಹೊಸ ಇನ್ನಿಂಗ್ಸ್ ಆರಂಭ; ಸಿನಿಮಾ ಕ್ಷೇತ್ರಕ್ಕೆ ಧನಶ್ರೀ ವರ್ಮಾ ಪಾದಾರ್ಪಣೆ!