ಸಿಎಂ ಡಿಕೆ ಶಿವಕುಮಾರ್ 
ರಾಜ್ಯ

ಪರಂಪರೆ ಉಳಿಸಿಕೊಂಡು ಕುಮಾರಕೃಪಾಗೆ ಮರು ವಿನ್ಯಾಸ: ಕಡಿಮೆ ವೆಚ್ಚದ ಗ್ರಾನೈಟ್, ಖಾಸಗಿ ಪೀಠೋಪಕರಣ ಬಳಕೆ; ಸಿಎಂ

“ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪ ಅತಿಥಿ ಗೃಹ ಉಪಯೋಗವಾಗದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಇಂದು ಖಾಸಗಿ ಪೂಜೆ ನೆರವೇರಿಸಿದ್ದೇನೆ.

ಬೆಂಗಳೂರು: ಸರ್ಕಾರಿ ಅತಿಥಿ ಗೃಹದಲ್ಲಿ ಕುಮಾರಕೃಪವನ್ನು ಗಂಗಾ ಎಂದು ಮರುನಾಮಕಾರಣ ಮಾಡಿದ್ದು, ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಈ ಕಟ್ಟಡದ ಪರಂಪರೆಯನ್ನು ಉಳಿಸಿಕೊಂಡು ಶೇ.10ರಷ್ಟು ಮರುವಿನ್ಯಾಸ ಮಾಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ಸರ್ಕಾರಿ ಅಧಿಕೃತ ನಿವಾಸ ಗಂಗಾ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.

“ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪ ಅತಿಥಿ ಗೃಹ ಉಪಯೋಗವಾಗದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಇಂದು ಖಾಸಗಿ ಪೂಜೆ ನೆರವೇರಿಸಿದ್ದೇನೆ. ಗುರುವಾರ ರಾಜ್ಯದ 224 ಶಾಸಕರು, ರಾಜ್ಯದ ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುವೆ. ಆ ನಂತರ ನಾನು ಈ ಮನೆಯಲ್ಲಿ ಎಲ್ಲರನ್ನು ಭೇಟಿ ಮಾಡುವೆ. ಈ ನಿವಾಸಕ್ಕೆ ಗಂಗಾ ಎಂದು ನಾಮಕರಣ ಮಾಡಿರುವೆ” ಎಂದು ತಿಳಿಸಿದರು.

ಕಡಿಮೆ ವೆಚ್ಚದ ಗ್ರಾನೈಟ್, 90% ಖಾಸಗಿ ಪೀಠೋಪಕರಣ ಬಳಕೆ

“ಕೆಲವರು ಇದಕ್ಕೆ ಆಗಿರುವ ಖರ್ಚಿನ ಬಗ್ಗೆ ಪ್ರಶ್ನೆ ಮಾಡಬಹುದು. ಭದ್ರತೆ ಹಾಗೂ ರಸ್ತೆ ಸೌಕರ್ಯಕ್ಕೆ ಹೆಚ್ಚು ವೆಚ್ಚವಾಗಿದೆ. ಉಳಿದಂತೆ 90% ಪೀಠೋಪಕರಣಗಳು ನನ್ನ ಖಾಸಗಿಯಾಗಿವೆ. ನಾನು ಕಡಿಮೆ (60- 80 ರೂ.) ಮೌಲ್ಯದ ಗ್ರಾನೈಟ್ ಕಲ್ಲನ್ನು ಬಳಸಿದ್ದೇನೆ. ವೆಚ್ಚದ ಬಗ್ಗೆ ಟೀಕೆ ಮಾಡುತ್ತಾರೆ ಎಂಬ ಕಾರಣಕ್ಕೇ ನಾನು ನನ್ನ ಮನೆ ಹಾಗೂ ಕುಮಾರಕೃಪದಲ್ಲಿ ಇದ್ದ ಹಳೇ ಪೀಠೋಪಕರಣ ಇಟ್ಟುಕೊಂಡಿದ್ದೇನೆ. ಕೆಲವರು ಆರ್ ಟಿಐ ಹಾಕಿದ್ದಾರೆ” ಎಂದರು.

ಪಾರಂಪರಿಕ ಕಟ್ಟಡವನ್ನು ಬದಲಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದಾರೆ ಎಂದು ಕೇಳಿದಾಗ, “ಅವರು ಇರುವುದೇ ಟೀಕೆ ಮಾಡಲು. ಅದು ಅವರ ಕರ್ತವ್ಯ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವೆ ಅವರು ಬಂದು ನೋಡಲಿ” ಎಂದರು.

ಸಾರ್ವಜನಿಕರ ಭೇಟಿಗೆ ಅವಕಾಶವಿದೆಯೇ ಎಂದು ಕೇಳಿದಾಗ, “ಶಾಸಕರು, ಅಧಿಕಾರಿಗಳ ಭೇಟಿ, ಚರ್ಚೆಗೆ ಇಲ್ಲಿ ಅವಕಾಶ ಕಲ್ಪಿಸಲಾಗುವುದು, ಸಾರ್ವಜನಿಕ ಭೇಟಿಗೆ ಪಕ್ಕದ ಕೃಷ್ಣಾದಲ್ಲಿ, ಇಲಿ ಸಾರ್ವಜನಿಕ ಭೇಟಿಗಾಗಿ ಪ್ರತ್ಯೇಕ ಹಾಲ್ ಅನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಒಂದೆರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ನಾವು ಯಾರು ಇಲ್ಲಿ ಶಾಶ್ವತವಲ್ಲ. ರಾಜ್ಯದ ಮುಖ್ಯಮಂತ್ರಿಯಾದವರಿಗೆ ಇದು ಅನುಕೂಲವಾಗಲಿ, ಈ ಅತಿಥಿ ಗೃಹ ಜಾಗ ಉಪಯೋಗವಾಗಲಿ ವ್ಯರ್ಥವಾಗುವುದು ಬೇಡ ಎಂದು ಈ ತೀರ್ಮಾನಕ್ಕೆ ಬರಲಾಗಿದೆ” ಎಂದು ತಿಳಿಸಿದರು.

ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾನು ದೆಹಲಿಗೆ ಹೋಗುತ್ತಿದ್ದು, ಇಂದು ರಾತ್ರಿಯೇ ವಾಪಸ್ ಆಗುತ್ತೇನೆ. ನೀವುಗಳು ಹೇಳಿರುವ ವಿಚಾರ ಚರ್ಚೆಗೆ ಸಮಯಾವಕಾಶವಿಲ್ಲ. ಇಂದು ನಮ್ಮ ನಾಯಕರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗಿ ಇಲ್ಲೇ ಮಲಗುತ್ತೇನೆ” ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ವಿರುದ್ಧ ವಿದೇಶಿ ನಾಯಕನ ಟೀಕೆ: 'ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ': ಇಟಲಿ ಪ್ರಧಾನಿ ಮೆಲೋನಿ ಆಪ್ತೆ ತಿರುಗೇಟು

ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ; Akvan ತೀವ್ರ, ತ.ನಾಡು, ಆಂಧ್ರ ಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಸಣ್ಣ ಜಗಳಕ್ಕೆ ರಣಾಂಗಣವಾದ ಕ್ರಿಕೆಟ್ ಮೈದಾನ; ಬ್ಯಾಟ್, ವಿಕೆಟ್ ಹಿಡಿದು ಆಟಗಾರರ ಮಾರಾಮಾರಿ

'ಪತ್ರಕರ್ತರ ಪ್ರವಾಸದ ಬ್ಯಾನರ್, ಪ್ರೆಸ್ ಸ್ಟಿಕ್ಕರ್: ಬೆಂಗಳೂರಿನಲ್ಲಿ 7 ಮಂದಿ ಹತ್ಯೆಗೈದ ಕಾರು ಚಾಲಕ ಶವಗಳನ್ನು ಸಾಗಿಸಿದ್ದು ಹೇಗೆ ಗೊತ್ತಾ?

ಬಿಲ್ಕಿಸ್ ಬಾನೋ ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್! ಜಾಮೀನು ಮಂಜೂರು