ಸುದ್ದಿಗೋಷ್ಠಿಯಲ್ಲಿ ಹೊನ್ನಾಳಿ ಶಾಸಕ ಶಾಂತನಗೌಡ 
ರಾಜ್ಯ

ಕಾಂಗ್ರೆಸ್`ಗೆ ಹೊನ್ನಾಳಿ ಶಾಸಕ ಶಾಕ್; ಶಾಂತನಗೌಡ ರಾಜೀನಾಮೆಗೆ ಮುಂದು!

1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ಹರಿಸಬೇಕಾದರೆ ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ನಾಲೆಯಲ್ಲಿ ಹರಿಸಬೇಕಾಗುತ್ತದೆ. ಇದು ಅವೈಜ್ಞಾನಿಕ ಸಮಸ್ಯೆಯ ತೀರ್ಮಾನವಾಗಿರುತ್ತದೆ ಎಂದು ಕಿಡಿಕಾರಿದ್ದಾರೆ.

ದಾವಣಗೆರೆ: ನೀರಾವರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹೊನ್ನಾಳಿ ಶಾಸಕ ಶಾಂತನಗೌಡ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ರೈತರ ಹಿತದೃಷ್ಟಿಯಿಂದ ಐ.ಸಿ.ಸಿ ಸಭೆ ಕರೆಯದೆ ಸರ್ಕಾರ ಏಕಪಕ್ಷೀಯವಾಗಿ 1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ನಾಲೆಯಲ್ಲಿ ಹರಿಸಲು ಆದೇಶ ಮಾಡಿರುವುದನ್ನು ಖಂಡಿಸಿ ಹೊನ್ನಾಳಿ ಶಾಸಕ ಶಾಂತನಗೌಡ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ಹರಿಸಬೇಕಾದರೆ ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ನಾಲೆಯಲ್ಲಿ ಹರಿಸಬೇಕಾಗುತ್ತದೆ. ಇದು ಅವೈಜ್ಞಾನಿಕ ಸಮಸ್ಯೆಯ ತೀರ್ಮಾನವಾಗಿರುತ್ತದೆ ಎಂದು ಕಿಡಿಕಾರಿದ್ದಾರೆ.

1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ಪ್ರತಿ ದಿವಸ 1000 ಕ್ಯೂಸೆಕ್ಸ್ ನಂತೆ ನೀರನ್ನು ಹರಿಸುವುದರಿಂದ ಆಣೆಕಟ್ಟೆಯಿಂದ 15 ಕಿಲೋ ಮೀಟರ್ ಒಳಗಿನ ರೈತ ಬಾಂಧವರಿಗೆ ಮಾತ್ರ ನೀರು ತಲುಪುತ್ತದೆ. ಇದು ಅಚ್ಚುಕಟ್ಟಿನ ಒಟ್ಟು ಪ್ರದೇಶದ 5% ರೈತರ ಜಮೀನುಗಳಿಗೆ ನೀರು ಸಿಗುವುದಿಲ್ಲ.

ಆದ್ದರಿಂದ ಈ ಕ್ಷಣ ಅಣೆಕಟ್ಟಿನಿಂದ ನೀರನ್ನು ನಿಲ್ಲಿಸಿ ಕೂಡಲೇ ಐ.ಸಿ.ಸಿ ಸಭೆ ಕರೆದು ತೀರ್ಮಾನ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರೈತರ ಹಿತದೃಷ್ಟಿಯಿಂದ ರಾಜೀನಾಮೆ ಕೊಟ್ಟು ಅಣೆಕಟ್ಟು ಮುಂಭಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇವೆ. ಈಗಾಗಲೇ ನಾನು ನಮ್ಮ ರೈತರು ಹಾಗೂ ನನ್ನ ಭಾಗದ ರೈತರ ಹಿತದೃಷ್ಟಿಯಿಂದ ರಾಜೀನಾಮೆಯನ್ನು ನೀಡಲು ನಿರ್ಧರಿಸಿದ್ದು, ಈ ಸಂಜೆ ನಮ್ಮ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ನೀಡಿ ನನ್ನ ಅಳಲನ್ನು ತೋಡಿಕೊಳ್ಳುತ್ತೇನೆ ಎಂದು ಹೇಳಿದರು.

ನೀರು ನಿಲ್ಲಿಸದಿದ್ರೆ ರಾಜೀನಾಮೆ

ನಾನು ಸೀದಾ ಬೆಂಗಳೂರಿಗೆ ಹೋಗಿ ಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಆಗಿ ನಮ್ಮ ಸಮಸ್ಯೆ ಹೇಳ್ತೀವಿ. 1 ಟಿಎಂಸಿ ನೀರು ಕೇವಲ ಭದ್ರಾವತಿ ತಾಲೂಕಿಗೆ ಹೋಗುತ್ತೆ, ಡ್ಯಾಂ ಭದ್ರಾವತಿ ಆಸ್ತಿ ಅಲ್ಲ. ನಮ್ಮ ಬೇಡಿಕೆ ಇಷ್ಟೇ ಭದ್ರಾ ಡ್ಯಾಂನಿಂದ ನೀರು ನಿಲ್ಲಿಸಬೇಕು.

ತಕ್ಷಣ ತಡೆ ಹಿಡಿಯದಿದ್ರೆ ನಾನು ರಾಜೀನಾಮೆ ಪತ್ರ ಹಿಡಿದಿಟ್ಟುಕೊಂಡಿದ್ದೇನೆ. ನೀರು ಬಿಡುಗಡೆ ನಿಲ್ಲಿಸದಿದ್ರೆ ನಾನು ರಾಜೀನಾಮೆ ನೀಡ್ತೀನಿ ಎಂದು ಶಾಂತನಗೌಡ ಗುಡುಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಅತಿರೇಕದ ಆಚರಣೆ ಮಧ್ಯೆಯೂ ಭಾರತ ಯುವ ಪಡೆಯನ್ನು ಶ್ಲಾಘಿಸಿದ್ದೇಕೆ ಶೋಯೆಬ್ ಅಖ್ತರ್, Pak ವಿರುದ್ಧ ಆಕ್ರೋಶ!

ಬಾಲಿವುಡ್ ನಟನ ಸಂಕಷ್ಟಕ್ಕೆ ಮಿಡಿದ ಸೋಶಿಯಲ್ ವರ್ಕರ್, ಶರದ್ ಕಪೂರ್‌ಗೆ ಆರ್ಥಿಕ ನೆರವು ನೀಡಿದ ರಾಹುಲ್ ಗುಪ್ತಾ! VIDEO

ಜಾಗತಿಕ ತಂತ್ರಜ್ಞಾನ ಹಬ್ ಆಗಲಿದೆ ಕರ್ನಾಟಕ; 'AI, ರೋಬೋಟಿಕ್ಸ್, ಚಿಪ್ ಉತ್ಪಾದನೆಗೆ ಆದ್ಯತೆ': ಸಿಎಂ DK ಶಿವಕುಮಾರ್

ಐಫೋನ್‌ಗಳಿಗೆ ಮಾಲ್ ವೇರ್ ದಾಳಿ, ಕ್ರಿಪ್ಟೋ ಕಳ್ಳತನಕ್ಕೆ ಯತ್ನ: ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ವೆಬ್‌ಸೈಟ್‌ಗಳು ಗುರಿ!