ಕೃಪಾ ಆಳ್ವ 
ರಾಜ್ಯ

ಸ್ಟಿಂಗ್ ಆಪರೇಷನ್ ಪ್ರಕರಣ: 3ನೇ ಬಾರಿ ವಿಚಾರಣೆಗೆ ಕೃಪಾ ಆಳ್ವ ಹಾಜರು; ಪೊಲೀಸರಿಗೆ ಮೊಬೈಲ್ ನೀಡಲು ಹಿಂದೇಟು!

ಘಟನೆ ನಡೆದ ದಿನ ನಾನು ಆ ಸ್ಥಳದಲ್ಲಿದ್ದಿದ್ದು ನಿಜ. ಆದರೆ, ಅಲ್ಲಿ ಯಾರೋ ವಿಡಿಯೋ ಮಾಡಿರುವುದು ನನಗೆ ಗೊತ್ತೇ ಇರಲಿಲ್ಲ ಎಂದು ವಿಚಾರಣೆಯ ವೇಳೆ ವಾದ ಮಂಡಿಸಿದ್ದಾರೆ. ಅಲ್ಲದೆ ಆ ಸಂದರ್ಭದಲ್ಲಿ ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಈಗಾಗಲೇ ಬದಲಾಯಿಸಿದ್ದಾಗಿ ತಿಳಿಸಿದ್ದಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಇದೀಗ ಪ್ರಮುಖ ಸಾಕ್ಷ್ಯ ಸಂಗ್ರಹವೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಕೃಪಾ ಆಳ್ವ ವಿಚಾರಣೆಗೆ ಸಹಕರಿಸದೆ, ಸ್ಟಿಂಗ್‌ಗೆ ಬಳಸಲಾದ ಮೊಬೈಲ್ ಫೋನ್ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ, ಸಿಸಿಬಿ ಪೊಲೀಸರು ಈಗಾಗಲೇ ಕೃಪಾ ಆಳ್ವ ಅವರನ್ನು ಮೂರು ಬಾರಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ವಿಚಾರಣೆಯ ವೇಳೆ ಯಾವುದೇ ಸ್ಪಷ್ಟ ಮಾಹಿತಿ ಸಿಗದ ಕಾರಣ ತನಿಖೆಗೆ ಹಿನ್ನಡೆಯಾಗಿದೆ.

ವಿಡಿಯೋ ಚಿತ್ರೀಕರಣಕ್ಕೆ ಬಳಸಲಾದ ಮೂಲ ಮೊಬೈಲ್ ಫೋನ್ ಹಾಗೂ ಪ್ರಸ್ತುತ ಕೃಪಾ ಆಳ್ವ ಅವರು ಬಳಸುತ್ತಿರುವ ಮೊಬೈಲ್ ಅನ್ನು ತನಿಖೆಗಾಗಿ ಹಸ್ತಾಂತರಿಸುವಂತೆ ಪೊಲೀಸರು ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.

ವಶಪಡಿಸಿಕೊಳ್ಳಲಿರುವ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ, ವಿಡಿಯೋದ ಅಸಲಿಯತ್ತು ಮತ್ತು ಡಿಲೀಟ್ ಆಗಿರಬಹುದಾದ ದತ್ತಾಂಶಗಳನ್ನು ಪತ್ತೆಹಚ್ಚಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆದರೆ, ಮೊಬೈಲ್ ನೀಡಲು ನಿರಾಕರಿಸುತ್ತಿರುವ ಕೃಪಾ ಆಳ್ವ, ಬುಧವಾರದಂದು ಫೋನ್ ತಂದು ಕೊಡುವುದಾಗಿ ಪೊಲೀಸರ ಮುಂದೆ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ದಿನ ನಾನು ಆ ಸ್ಥಳದಲ್ಲಿದ್ದಿದ್ದು ನಿಜ. ಆದರೆ, ಅಲ್ಲಿ ಯಾರೋ ವಿಡಿಯೋ ಮಾಡಿರುವುದು ನನಗೆ ಗೊತ್ತೇ ಇರಲಿಲ್ಲ ಎಂದು ವಿಚಾರಣೆಯ ವೇಳೆ ವಾದ ಮಂಡಿಸಿದ್ದಾರೆ. ಅಲ್ಲದೆ ಆ ಸಂದರ್ಭದಲ್ಲಿ ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಈಗಾಗಲೇ ಬದಲಾಯಿಸಿದ್ದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

UN-OIC ಕರಡು ನಿರ್ಣಯ: ಉದ್ದೇಶಪೂರ್ವಕವಾಗಿ ಭಾರತವನ್ನು ದೂರವಿಟ್ಟ ಟರ್ಕಿ ವಿರುದ್ಧ ಭಾರತ ತೀವ್ರ ಕಿಡಿ, ನಿರ್ಣಯದ ವಿರುದ್ಧ ಮತದಾನ

ಸದ್ದೇ ಇಲ್ಲದೇ OTTಗೆ ಲಗ್ಗೆ ಇಟ್ಟ ಕನ್ನಡ ಬ್ಲಾಕ್ ಬಸ್ಟರ್ ಚಿತ್ರ 'ಪ್ರೇಮದ ಊರಲಿ'.. ಎಲ್ಲಿ, ಯಾವಾಗ?

West Asia Conflict ಎಫೆಕ್ಟ್: ರಫ್ತುದಾರರಿಗೆ ತೆರಿಗೆ ಬಿಸಿ; Diesel-ATF ರಫ್ತಿನ ಮೇಲಿನ Windfall ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಪೆಟ್ರೋಲ್‌ಗೆ ಶೂನ್ಯ ಸುಂಕ ಮುಂದುವರಿಕೆ..!

IPL: ರಾಜಸ್ಥಾನ್ ರಾಯಲ್ಸ್ ಗೆ ಕೈಕೊಟ್ಟ ಯಶಸ್ವಿ ಜೈಸ್ವಾಲ್?, KKR ಸೇರುವ ಸಾಧ್ಯತೆ ಇದೆ ಎಂದ ಇರ್ಫಾನ್ ಪಠಾಣ್!

'ನಕಲಿ ಬೌಲಿಂಗ್‌ನೊಂದಿಗೆ ಇಷ್ಟು ವರ್ಷ ಆಡಿದ್ದಾನೆ': ಟೀಂ ಇಂಡಿಯಾ ಉದಯೋನ್ಮು ವೇಗಿ ಕುರಿತು ಮಾಜಿ ಕ್ರಿಕೆಟಿಗ ಕಿಡಿ!