ಸಂದರ್ಶನಕ್ಕೆ ಅರ್ಹತೆಯೇ ಇಲ್ಲದಿದ್ದರೂ KAS ಹುದ್ದೆಗೆ ಡೀಲ್ Online Desk
ರಾಜ್ಯ

KPSC ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಪುತ್ರಿಯರ KAS ಹುದ್ದೆಗಾಗಿ 2 ಕೋಟಿ ರೂ. ನೀಡಿದರಾ IPS ಅಧಿಕಾರಿ?

KPSC ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ED ನಡೆಸುತ್ತಿರುವ ತನಿಖೆಯಲ್ಲಿ ರಾಜ್ಯದ IPS ಅಧಿಕಾರಿಯೊಬ್ಬರು ತಮ್ಮ ಮಕ್ಕಳಿಗೆ KAS ಹುದ್ದೆ ಕೊಡಿಸಲು ಮಧ್ಯವರ್ತಿಗೆ 2 ಕೋಟಿ ರೂ. ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆಯಲ್ಲಿ ರಾಜ್ಯದ IPS ಅಧಿಕಾರಿಯೊಬ್ಬರು ತಮ್ಮ ಇಬ್ಬರು ಪುತ್ರಿಯರಿಗೆ KAS ಹುದ್ದೆ ಕೊಡಿಸಲು ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ 2 ಕೋಟಿ ರೂ. ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆ ಕುರಿತ ವರದಿ ಇಲ್ಲಿದೆ:

KPSC ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆ, ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ನೀಡಿರುವ ಹೇಳಿಕೆಯಲ್ಲಿ ಈ ವಿಚಾರವನ್ನು ಬಯಲಿಗೆಳೆದಿದ್ದು, "ಕೆಎಎಸ್ ಸಂದರ್ಶನಕ್ಕೂ ಮುನ್ನವೇ ಅವರ ಇಬ್ಬರು ಹೆಣ್ಣುಮಕ್ಕಳಿಗೆ ಹುದ್ದೆ ಕೊಡಿಸುವ ಆಮಿಷವೊಡ್ಡಿ, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ, ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಸೂಚನೆಯಂತೆ ತಾನು ಅಧಿಕಾರಿಯ ಮನೆಗೆ ತೆರಳಿ 2 ಕೋಟಿ ರೂ. ಸಂಗ್ರಹಿಸಿದ್ದಾಗಿ" ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಅರ್ಹತೆ ಇಲ್ಲದಿದ್ದರೂ ಸಂದರ್ಶನ

ಸಂದರ್ಶನದ ಮೇಲೆ ಪ್ರಭಾವ ಐಪಿಎಸ್ ಅಧಿಕಾರಿ ತಮ್ಮ ಇಬ್ಬರು ಪುತ್ರಿಯರಿಗೆ ಕೆಎಎಸ್ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸಿ ಆಯ್ಕೆ ಖಚಿತಪಡಿಸಲು ಈ ಡೀಲ್ ನಡೆದಿತ್ತು ಎನ್ನಲಾಗಿದೆ. ಇದರಲ್ಲಿ ಒಬ್ಬ ಪುತ್ರಿ ಸಂದರ್ಶನಕ್ಕೆ ಅರ್ಹತೆಯನ್ನೇ ಹೊಂದಿರಲಿಲ್ಲ ಎನ್ನಲಾಗಿದೆ. ಜೊತೆಗೆ, ಐಪಿಎಸ್ ಅಧಿಕಾರಿಯಿಂದ ಪಡೆದ 2 ಕೋಟಿ ರೂ. ಹಣವನ್ನು ನಂತರ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ತಲುಪಿಸಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ, ಇ.ಡಿ ಅಧಿಕಾರಿಗಳು ಕೆಎಎಸ್ (KAS) ನೇಮಕಾತಿ ಪ್ರಕ್ರಿಯೆ, ಅಭ್ಯರ್ಥಿಗಳ ಸಂಖ್ಯೆ ಮತ್ತು ಸಂದರ್ಶನದಲ್ಲಿ ಸದಸ್ಯರು ನೀಡುವ ಅಂಕಗಳ ಕುರಿತಾಗಿಯೂ ಕೆಪಿಎಸ್‌ಸಿಯಿಂದ ಮಾಹಿತಿ ಕಲೆಹಾಕಲು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಂತುಕನ ಆತಂಕ: ಟಿಕೆಟ್ ಇಲ್ಲ, ದಾಖಲೆಗಳೂ ಇಲ್ಲ, ಬಲವಂತವಾಗಿ ನುಗ್ಗಲು ಯತ್ನಿಸಿದವ CISF ವಶಕ್ಕೆ! Video

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

Wellington Test: ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಫಿಲಿಪ್ಸ್-ನಿಕೋಲ್ಸ್ ಆಸರೆ, ಮೊದಲ ದಿನದಾಟದ ಅಂತ್ಯಕ್ಕೆ NZ 243/5

ತಮಿಳುನಾಡಿನಲ್ಲಿ ಅಮಾನವೀಯ ಘಟನೆ; ಪಾಠ ಕೇಳದಿದ್ದಕ್ಕೆ 3 ವರ್ಷದ ಬಾಲಕನ ಕೈಕಟ್ಟಿ, ಹಾಳೆಯಲ್ಲಿ ಸುತ್ತಿದ ಶಿಕ್ಷಕಿ!

ದೇವಾಲಯದ ಹುಂಡಿ ತುಂಬಿದರೂ ಅರ್ಚಕರ ಹೊಟ್ಟೆ ತುಂಬುತ್ತಿಲ್ಲ; ಹಾಲು, ತುಪ್ಪ, ಅಕ್ಕಿ ಬೆಲೆ ಏರಿಕೆ, ವೇತನ ಹೆಚ್ಚಳ, ವಿಮೆಗೆ ಆಗ್ರಹ!