ಸಿಎಂ ಡ್ಯಾಶ್‌ಬೋರ್ಡ್‌’ ಉದ್ಘಾಟಿಸಿದ ಡಿಕೆ ಶಿವಕುಮಾರ್ 
ರಾಜ್ಯ

ಸರ್ಕಾರದ ಯೋಜನೆ, ಅಭಿವೃದ್ಧಿ ಕಾಮಗಾರಿಗಳ ವಿವರ ಜನರಿಗೆ ಮುಕ್ತವಾಗಿ ಲಭ್ಯ: ‘ಸಿಎಂ ಡ್ಯಾಶ್‌ಬೋರ್ಡ್‌’ ಲೋಕಾರ್ಪಣೆ!

ಈ ಡ್ಯಾಶ್‌ಬೋರ್ಡ್ (cmdashboard.karnataka.gov.in) ಮುಖ್ಯಮಂತ್ರಿ ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ 'ಸಿಎಂ ಡ್ಯಾಶ್‌ಬೋರ್ಡ್' (CM Dashboard) ಲೋಕಾರ್ಪಣೆಗೊಳಿಸಿದರು. ಇದು ಸರ್ಕಾರದ ಪ್ರಮುಖ ಕಾರ್ಯಕ್ರಮಗಳು, ಗುರಿಗಳು ಮತ್ತು ಪ್ರಗತಿಯನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ, ಸಾರ್ವಜನಿಕರಿಗಾಗಿ ಇರುವ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿರುವ ಆನ್‌ಲೈನ್ ತಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಡ್ಯಾಶ್‌ಬೋರ್ಡ್ (cmdashboard.karnataka.gov.in) ಮುಖ್ಯಮಂತ್ರಿ ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಇದು ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೂ ಲಭ್ಯವಿರುತ್ತದೆ ಎಂದು ಅವರು ಹೇಳಿದರು.

ಸಿಎಂ ಡ್ಯಾಶ್‌ಬೋರ್ಡ್‌ನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಕೃಷಿ, ಶಿಕ್ಷಣ, ಉದ್ಯೋಗ, ಆರೋಗ್ಯ, ಕೈಗಾರಿಕೆ ಸೇರಿದಂತೆ ವಿವಿಧ ವಲಯಗಳ ಅಭಿಯಾನಗಳ ಪ್ರಗತಿ, ಸಾರ್ವಜನಿಕ ಕಾಮಗಾರಿಗಳು, ನಾಗರಿಕ ಸೇವೆಗಳು, ದೂರುಗಳ ಪರಿಹಾರ ಹಾಗೂ ಸರ್ಕಾರಿ ನೌಕರರ ಹಾಜರಾತಿಯ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸಬಹುದು.

ಇಲಾಖೆಗಳಿಂದ ನೇರವಾಗಿ ಮಾಹಿತಿ ಪಡೆದು ಪ್ರತಿದಿನ ನವೀಕರಿಸುವ ಈ ಸಾರ್ವಜನಿಕ ವೇದಿಕೆ, ಸರ್ಕಾರದ ಕಾರ್ಯವೈಖರಿಯನ್ನು ಜನರ ಮುಂದಿಡಲಿದೆ. ಸರ್ಕಾರದ ಪ್ರಗತಿಯನ್ನು ಜನರೇ ಗಮನಿಸುವಂತಾಗಬೇಕು ಎಂಬುದು ಇದರ ಆಶಯ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಜನರಿಗೆ ನೀಡಿದ ಪ್ರತಿಯೊಂದು ಭರವಸೆ ಮತ್ತು ವ್ಯಯಿಸುವ ಪ್ರತಿಯೊಂದು ರೂಪಾಯಿ ಜನರಿಗೆ ಕಾಣುವಂತಿರಬೇಕು. ಡ್ಯಾಶ್‌ಬೋರ್ಡ್ ಮೂಲಕ ಪ್ರತಿಯೊಂದು ಅಭಿಯಾನದ ಪ್ರಗತಿಯನ್ನು ನಾನು ಪರಿಶೀಲಿಸುತ್ತೇನೆ. ನಾನು ನೋಡುವ ಅಂಕಿಅಂಶಗಳನ್ನೇ ನಾಗರಿಕರೂ ನೋಡಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

"ಈ ಡ್ಯಾಶ್‌ಬೋರ್ಡ್ ಸರ್ಕಾರವು ಕೈಗೊಂಡಿರುವ ಮೊದಲ 100 ದಿನಗಳ ಯೋಜನೆಗಳನ್ನು (ಮಿಷನ್‌ಗಳನ್ನು) ಟ್ರ್ಯಾಕ್ ಮಾಡುತ್ತದೆ. ಇದರಲ್ಲಿ ರೈತರು ಮತ್ತು ಕೃಷಿ; ಉದ್ಯೋಗ ಮತ್ತು ಯುವ ಸಬಲೀಕರಣ; ಶಾಲಾ ಶಿಕ್ಷಣ; ಕೈಗಾರಿಕೆ ಮತ್ತು ಉತ್ಪಾದನೆ; ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ನಾವೀನ್ಯತೆ, ಆರೋಗ್ಯ; ವಾಯು ಮಾಲಿನ್ಯ ನಿಯಂತ್ರಣ; ಬೆಂಗಳೂರು ಹೊರತುಪಡಿಸಿ ಇತರ ಪ್ರದೇಶಗಳ ಸಮತೋಲಿತ ಅಭಿವೃದ್ಧಿ; ನಾಗರಿಕ ಸೇವೆಗಳು; ಹಾಗೂ ಜೂನ್ 3, 2026 ರಂದು ನಡೆದ ಸಚಿವ ಸಂಪುಟ ನಿರ್ಧಾರಗಳು ಸೇರಿದಂತೆ ಒಟ್ಟು 10 ವಲಯಗಳಲ್ಲಿನ 51 ಯೋಜನೆಗಳು ಸೇರಿವೆ ಎಂದು ಮುಖ್ಯಮಂತ್ರಿಗಳ ಕಚೇರಿ (CMO) ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಯೊಂದು ಯೋಜನೆಗೂ ಪ್ರತ್ಯೇಕ ಪುಟವಿದ್ದು, ಅದರಲ್ಲಿ ಜವಾಬ್ದಾರಿಯುತ ಇಲಾಖೆ, ಭೌತಿಕ ಮತ್ತು ಆರ್ಥಿಕ ಗುರಿಗಳು, ಅನುಮೋದನೆ ಮತ್ತು ಪ್ರಾರಂಭದ ದಿನಾಂಕಗಳು, ಗುರಿಗಳಿಗೆ ಅನುಗುಣವಾಗಿ ತ್ರೈಮಾಸಿಕ ಪ್ರಗತಿ, ಜಿಲ್ಲಾವಾರು ಅಂಕಿಅಂಶಗಳು ಹಾಗೂ ಸರ್ಕಾರಿ ಆದೇಶಗಳು ಮತ್ತು ಮಾರ್ಗಸೂಚಿಗಳ ವಿವರಗಳಿವೆ. ಈ ಡ್ಯಾಶ್‌ಬೋರ್ಡ್ ಮೂಲಕ ನಾಗರಿಕರು ಐದು 'ಗ್ಯಾರಂಟಿ ಯೋಜನೆಗಳ' (ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ, ಯುವ ನಿಧಿ ಮತ್ತು ಅನ್ನ ಭಾಗ್ಯ) ಕುರಿತ ಮಾಹಿತಿಯನ್ನು ಪಡೆಯಬಹುದು. ಈ ಯೋಜನೆಗಳ ಅಡಿಯಲ್ಲಿ ಸುಮಾರು 3.3 ಕೋಟಿ ಫಲಾನುಭವಿಗಳಿಗೆ 1,57,764 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಇಲ್ಲಿನ ದತ್ತಾಂಶವನ್ನು ಪ್ರತಿದಿನ ನವೀಕರಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

'ಪರಿವರ್ತನೆ' (Parivartane) ವಿಭಾಗದ ಅಡಿಯಲ್ಲಿ ನಾಗರಿಕರು ವಿವಿಧ ಇಲಾಖೆಗಳು, ಜಿಲ್ಲೆಗಳು, ತಾಲೂಕುಗಳು ಮತ್ತು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ 5.35 ಲಕ್ಷ ಕೋಟಿ ರೂಪಾಯಿ ಮೌಲ್ಯದ 4.21 ಲಕ್ಷ ಸಾರ್ವಜನಿಕ ಕಾಮಗಾರಿಗಳ ಪ್ರಗತಿಯನ್ನು ಗಮನಿಸಬಹುದು. ಇದರಲ್ಲಿ 75,534 ಕೋಟಿ ರೂಪಾಯಿ ಮೌಲ್ಯದ 748 ಆದ್ಯತಾ ಕಾಮಗಾರಿಗಳು ಸೇರಿವೆ ಎಂದು ತಿಳಿಸಲಾಗಿದೆ.

ನಾಗರಿಕ ಸೇವಾ ವಿಭಾಗದಡಿ ಸಕಾಲ ಯೋಜನೆಯ ವಿವರ ಒದಗಿಸಲಾಗುತ್ತದೆ. ಇದು 3.30 ಕೋಟಿ ಅರ್ಜಿಗಳನ್ನು ಸ್ವೀಕರಿಸಿದೆ, ಇದರಲ್ಲಿ ಶೇ 96 ರಷ್ಟು ನಿಗದಿತ ಸಮಯದ ಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. ಇದು 167 ಇಲಾಖೆಗಳಲ್ಲಿ 4.6 ಲಕ್ಷ ಉದ್ಯೋಗಿಗಳಿಗೆ ಪ್ರಜಾ ಸೇವೆಯ ಕುಂದುಕೊರತೆ ಪರಿಹಾರ ಮತ್ತು ಕರ್ತವ್ಯ ಹಾಜರಾತಿ ಮೇಲ್ವಿಚಾರಣೆಯನ್ನು ಸಹ ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇರ ಪ್ರಯೋಜನ ವರ್ಗಾವಣೆ ವಿಭಾಗವು ಕೆ-ಕಿಸಾನ್, ಸಾಮಾಜಿಕ ಭದ್ರತಾ ಪಿಂಚಣಿಗಳು, ವಿಬಿ-ಜಿ RAM-G, ಗ್ರಾಮೀಣ ವಸತಿ ಮತ್ತು ವಿದ್ಯಾರ್ಥಿವೇತನ ಯೋಜನೆಗಳನ್ನು ಒಳಗೊಂಡಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಡ್ಯಾಶ್‌ಬೋರ್ಡ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್: ಕೃಪಾ ಆಳ್ವಾ, ರಾಕೇಶ್ ಶೆಟ್ಟಿಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾ, ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ!

ಬೆಂಗಳೂರು: ಲಿವ್-ಇನ್ ಸಂಗಾತಿಯ ಮಗನ ಕೊಂದು ರೂಮ್‌ ಲಾಕ್‌ ಮಾಡಿದ ಪಾಪಿ; ಶವದ ಮುಂದೆ 3 ದಿನ ತಾಯಿ ನರಳಾಟ!

ಆಪರೇಷನ್ ಸಿಂಧೂರ ಬಳಿಕ ಪಾಕ್ ಸಚಿವ ಭಾರತಕ್ಕೆ: ತಾಜ್ ಮಹಲ್, ನಿಜಾಮುದ್ದೀನ್ ದರ್ಗಾ ಭೇಟಿಗೆ ಕೇಂದ್ರದಿಂದ ಅನುಮತಿ ನಿರಾಕರಣೆ!

ರಾಜಸ್ಥಾನ ಪಂಚಾಯತ್ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಗೆಲುವು; ಆಡಳಿತರೂಢ BJPಗೆ ತೀವ್ರ ಮುಖಭಂಗ!

'ಭಾರತದೊಂದಿಗೆ ನಮ್ಮ ಎಲ್ಲಾ ಸಂಬಂಧಗಳು ಸುಧಾರಿಸುತ್ತವೆ': ಪಾಕ್ ಸಚಿವನ ಭರವಸೆ; ಆದರೆ ಭಯೋತ್ಪಾದನೆ ಬಗ್ಗೆ ಮೌನ!