ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಲಾಡ್ಜ್ ನಲ್ಲಿ ಜಗಳವಾಡಿ ಸ್ನೇಹಿತೆಯನ್ನು ತಳ್ಳಿದ ಬಾಯ್ ಫ್ರೆಂಡ್; ಕೆಳಗೆ ಬಿದ್ದು ಯುವತಿ ಸಾವು

ಮೃತಳನ್ನು ಹಾಸನ ಮೂಲದ ಐಶ್ವರ್ಯ ಎಂದು ಗುರುತಿಸಲಾಗಿದೆ. ನವೆಂಬರ್ 19ರಂದು ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಾಂಕೇತಿಕ ಚಿತ್ರ
Sumana Upadhyaya
Updated On : 24 Nov 2026, 2:01 pm

ಬೆಂಗಳೂರು: ನಗರದ ಲಾಡ್ಜ್‌ವೊಂದರಲ್ಲಿ ವಾಗ್ವಾದ ನಡೆಯುತ್ತಿದ್ದ ವೇಳೆ ಸ್ನೇಹಿತ ತಳ್ಳಿದ ಪರಿಣಾಮ ಸಮತೋಲನ ಕಳೆದುಕೊಂಡು ಕಿಟಕಿಯಿಂದ ಕೆಳಗೆ ಬಿದ್ದು 23 ವರ್ಷದ ಯುವತಿ ಮೃತಪಟ್ಟಿದ್ದಾರೆ.

ಮೃತಳನ್ನು ಹಾಸನ ಮೂಲದ ಐಶ್ವರ್ಯ ಎಂದು ಗುರುತಿಸಲಾಗಿದೆ. ನವೆಂಬರ್ 19ರಂದು ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೃತಳ ತಾಯಿ ನೀಡಿರುವ ದೂರಿನಲ್ಲಿ, ಐಶ್ವರ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದಳು. ಈ ಹಿಂದೆ ಐಶ್ವರ್ಯ, ತನ್ನ ಪರಿಚಯದ ಅರುಂಧತಿ ಎಂಬಾಕೆಯ ಪ್ರಿಯಕರನ ಸ್ನೇಹಿತ ಸಚಿನ್ ಎಂಬಾತನೊಂದಿಗೆ ಒಯೋ (OYO) ಕೊಠಡಿಗೆ ತೆರಳಿದ್ದಳು ಎನ್ನಲಾಗಿದೆ.

Advertisement

Advertisement

Also Read

ಬೆಂಗಳೂರಿನಲ್ಲಿ ಭಯಾನಕ ಕೃತ್ಯ: ರಸ್ತೆಯಲ್ಲೇ ವ್ಯಕ್ತಿಯ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಚಿಕಿತ್ಸೆ ಫಲಿಸದೆ ಸಾವು!

ಈ ವಿಚಾರವನ್ನು ಅರುಂಧತಿ ಬಳಿಕ ಐಶ್ವರ್ಯ ಕುಟುಂಬದವರಿಗೆ ತಿಳಿಸಿದ್ದಳು. ಇದರಿಂದ ಆಕೆಯ ಕುಟುಂಬದ ಸದಸ್ಯರು ಐಶ್ವರ್ಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆ ನಂತರ, ತನ್ನೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ಸಂತೋಷ್ ತನ್ನನ್ನು ನಂಬುತ್ತಿಲ್ಲ ಎಂಬ ಕಾರಣಕ್ಕೆ ಐಶ್ವರ್ಯ ಬೇಸರಗೊಂಡಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೂರಿನ ವಿವರಗಳನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

Also Read

ಬೆಂಗಳೂರು: ನದಿಗೆ ಹಾರಿ ಮಹಿಳೆ ಆತ್ಮಹತ್ಯೆ; ಶವ ಹೊರತೆಗೆಯಲು ಬಂದ ವ್ಯಕ್ತಿಯೂ ಪೊಲೀಸರ ನಿರ್ಲಕ್ಷ್ಯದಿಂದ ಸಾವು!

ನವೆಂಬರ್ 19ರಂದು ಐಶ್ವರ್ಯ ಮತ್ತು ಸಂತೋಷ್ ಲಾಡ್ಜ್‌ಗೆ ತೆರಳಿದ್ದರು. ಸಂಜೆ ಇಬ್ಬರೂ ಮದ್ಯ ಸೇವಿಸಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾದದ ನಡುವೆ ಐಶ್ವರ್ಯ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಸಂತೋಷ್, ಏನು ಬೇಕಾದರೂ ಮಾಡಿಕೋ ಎಂದು ಹೇಳಿ ಕೈಯಿಂದ ಆಕೆಯನ್ನು ತಳ್ಳಿದ್ದಾನೆ ಎನ್ನಲಾಗಿದೆ.

ಇದರಿಂದ ಸಮತೋಲನ ಕಳೆದುಕೊಂಡ ಐಶ್ವರ್ಯ ಲಾಡ್ಜ್‌ನ ಕಿಟಕಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement