ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಸಂವಿಧಾನ ದಿನಾಚರಣೆಯಂದು ಮಂತ್ರಮಾಂಗಲ್ಯದ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ: ಸರಳತೆಗೆ ಮೆಚ್ಚುಗೆಯ ಮಹಾಪೂರ

ಜಾನಪದ ಲೋಕದಲ್ಲಿ ವಿವಾಹದ ಬಳಿಕ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಶಾಸಕರಾಗಿದ್ದಾರೆ.

ಪತ್ನಿ ಡಾ. ಶ್ರೀನಿಧಿ ಜೊತೆ ಶಾಸಕ ದರ್ಶನ್ ಧ್ರುವನಾರಾಯಣ — online desk
Srinivas Rao BV
Updated On : 26 Nov 2026, 2:17 pm

ರಾಮನಗರ: ಆಡಂಭರದ ಮದುವೆ, ಆರತಕ್ಷತೆಗಳು ನಡೆಯುವುದೇ ಹೆಚ್ಚಾಗಿರುವ ಕಲಾಘಟ್ಟದಲ್ಲಿ ರಾಜ್ಯದ ಶಾಸಕರೊಬ್ಬರು ಸರಳ, ಮಾದರಿಯ ವಿವಾಹವಾಗಿದ್ದಾರೆ.

ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಮಂತ್ರಮಾಂಗಲ್ಯದ ಮೂಲಕ ರಾಮನಗರದ ಜಾನಪದ ಲೋಕದಲ್ಲಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಮತ್ತು ಮಂಡ್ಯ ಮೂಲದ ವೈದ್ಯೆ ಡಾ. ಶ್ರೀನಿಧಿ ಅವರು ಸರಳವಾಗಿ ವಿವಾಹವಾದರು.

ಬೆಂಗಳೂರು–ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಜಾನಪದ ಲೋಕದಲ್ಲಿ ಆಯೋಜಿಸಲಾಗಿದ್ದ ಸರಳ ವಿವಾಹ ಕಾರ್ಯಕ್ರದಲ್ಲಿ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ವಿವಾಹ ಸಮಾರಂಭದಲ್ಲಿ ಸಿಎಂ ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.

Advertisement

Advertisement

Also Read

ಧರ್ಮೇಂದ್ರ ಮೊಮ್ಮಗನ ಜೊತೆ ಸಚಿನ್ ಪುತ್ರಿ ಸಾರಾ ವಿವಾಹ: ವೈರಲ್ ಸುದ್ದಿಯ ಹಿಂದಿನ ಸತ್ಯಾಂಶವೇನು?

ಜಾನಪದ ಲೋಕದಲ್ಲಿ ವಿವಾಹದ ಬಳಿಕ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಮತ್ತು ಕೆ.ಆರ್. ಪೇಟೆ ಮೂಲದ ಡಾ. ಶ್ರೀನಿಧಿ ಅವರ ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮ ಕಳೆದ ನವೆಂಬರ್ 2ರಂದು ಮಂಡ್ಯದಲ್ಲಿ ನಡೆದಿತ್ತು.

ಶಾಸಕರಾಗಿದ್ದರೂ ಸರಳ ವಿವಾಹವಾಗಿರುವ ಧ್ರುವನಾರಾಯಣ ಅವರ ನಡೆಗೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement