ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

'ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ ಸ್ವಾಮಿ, ತಾವು ಕೂಡ ರಾಜೀನಾಮೆ ಕೊಟ್ಟು ಮನೆಗೆ ಹೋಗಿ': ಖಾದರ್ ವಿರುದ್ಧ ಆರ್. ಅಶೋಕ ಕಿಡಿ

'ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಆಗುವುದಿಲ್ಲ' ಎಂಬ ಉದ್ಧಟತನದ ಮಾತಾಡಿ ಆಶಾ ಕಾರ್ಯಕರ್ತೆಯರಿಗೆ ಅವಮಾನ ಮಾಡಿದ್ದ ಸಚಿವ ನರೇಂದ್ರಸ್ವಾಮಿ ಅವರ ಸಾಲಿಗೆ ಈಗ ಮತ್ತೊಬ್ಬ ಸಚಿವರು ಸೇರಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ ಅಶೋಕ
Ramyashree GN
Updated On : 26 Nov 2026, 4:54 pm

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಆರೋಗ್ಯ ಸಚಿವ ಯುಟಿ ಖಾದರ್ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಗುರುವಾರ ಕಿಡಿಕಾರಿದ್ದಾರೆ.

ಆಶಾ ಕಾರ್ಯಕರ್ತರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ. ಆಶಾಗಳು ಇಲ್ಲ ಅಂದ್ರೆ ಡಾಕ್ಟರ್, ನರ್ಸ್‌ಗಳು ಇಲ್ವಾ?. 10 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಹೀಗಿರುವಾಗ ಆರೋಗ್ಯ ಇಲಾಖೆ ಸಮಸ್ಯೆಗೆ ಸಿಲುಕಿದೆಯಾ? ಇಲ್ಲ ತಾನೇ? ಹಳ್ಳಿಗಳಲ್ಲಿ ಏನಾದ್ರು ಸಮಸ್ಯೆ ಆಗಿದೆಯಾ? ಇಲ್ಲ ಎಂದು ಯುಟಿ ಖಾದರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅಶೋಕ, ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಖಾದರ್ ಅವರೇ; ರಾಜೀನಾಮೆ ಕೊಟ್ಟುಬಿಡಿ. ಆಶಾ ಕಾರ್ಯಕರ್ತೆಯರ ಶ್ರಮ, ತ್ಯಾಗ ಮತ್ತು ಹೋರಾಟವನ್ನು ಹಗುರವಾಗಿ ಕಾಣುವ ಕಾಂಗ್ರೆಸ್ ನಾಯಕರ ಈ ಉದ್ಧಟತನದ ಮಾತುಗಳು ನಾಚಿಕೆಗೇಡು ಎಂದಿದ್ದಾರೆ.

Advertisement

Advertisement

'ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಆಗುವುದಿಲ್ಲ' ಎಂಬ ಉದ್ಧಟತನದ ಮಾತಾಡಿ ಆಶಾ ಕಾರ್ಯಕರ್ತೆಯರಿಗೆ ಅವಮಾನ ಮಾಡಿದ್ದ ಸಚಿವ ನರೇಂದ್ರಸ್ವಾಮಿ ಅವರ ಸಾಲಿಗೆ ಈಗ ಮತ್ತೊಬ್ಬ ಸಚಿವರು ಸೇರಿಕೊಂಡಿದ್ದಾರೆ. ಹತ್ತು-ಹದಿನೈದು ದಿನ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಏನೂ ನಷ್ಟವಾಗಿಲ್ಲ, ಅವರು ಇಲ್ಲದಿದ್ದರೂ ಆರೋಗ್ಯ ಸೇವೆ ನಡೆಯುತ್ತದೆ ಎನ್ನುವ ಮೂಲಕ ಆರೋಗ್ಯ ಸಚಿವ ಯುಟಿ ಖಾದರ್ ಅವರು ಹಳ್ಳಿಹಳ್ಳಿಗೂ, ಮನೆಮನೆಗೂ ಓಡಾಡಿ ಗರ್ಭಿಣಿಯರು, ಶಿಶುಗಳು, ವೃದ್ಧರು ಮತ್ತು ರೋಗಿಗಳ ಜೀವ ಉಳಿಸುವ ಲಕ್ಷಾಂತರ ಆಶಾ ಕಾರ್ಯಕರ್ತೆಯರ ಸ್ವಾಭಿಮಾನಕ್ಕೆ ಮತ್ತೊಮ್ಮೆ ಘಾಸಿ ಉಂಟು ಮಾಡಿದ್ದಾರೆ ಎಂದು ದೂರಿದ್ದಾರೆ.

Also Read

ಆಶಾ ಕಾರ್ಯಕರ್ತರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ: ಪ್ರತಿಭಟನೆ ವಿರುದ್ಧ ಸಚಿವ ಯುಟಿ ಖಾದರ್ ಗರಂ!

ಕೋವಿಡ್ ಸಮಯದಲ್ಲಿ ಮನೆಯಲ್ಲಿ ಬೆಚ್ಚಗೆ ಅಡಗಿ ಕೂತಿದ್ದ ಕಾಂಗ್ರೆಸ್ ನಾಯಕರಿಗೆ ಪ್ರಾಣದ ಹಂಗು ತೊರೆದು ದುಡಿದ ಈ ತಾಯಂದಿರು, ಸಹೋದರಿಯರ ಶ್ರಮದ ಬೆಲೆ ಹೇಗೆ ತಾನೇ ಗೊತ್ತಾಗಬೇಕು?. ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುವವರನ್ನು ಕಡೆಗಣಿಸಿ, 'ನೀವು ಇಲ್ಲದಿದ್ದರೂ ನಡೆಯುತ್ತದೆ' ಎಂಬ ಅಹಂಕಾರದ ಭಾಷೆ ಬಳಸುವುದು ನಿಮ್ಮ ಕಾಂಗ್ರೆಸ್ ಸರ್ಕಾರದ ಅಧಿಕಾರದ ಮದ ಯಾವ ಪರಾಕಾಷ್ಠೆಗೆ ತಲುಪಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.

ಆರೋಗ್ಯ ಸಚಿವ ಖಾದರ್ ಅವರೇ, ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ ಸ್ವಾಮಿ. ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ವೈದ್ಯರು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ಆಶಾ ಕಾರ್ಯಕರ್ತೆಯರ ಶ್ರಮವೇ ಬೇಡ ಎನ್ನುವುದಾದರೆ, ಹಾಗಾದರೆ ತಾವೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಕಣ್ಣೀರು ಮತ್ತು ಹೋರಾಟಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸರ್ಕಾರ ತಕ್ಷಣ ತಮ್ಮ ಉದ್ಧಟತನದ ಮಾತನ್ನು ಹಿಂಪಡೆದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಶೋಕ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement