ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮೊಂಡುತನ ಬಿಟ್ಟು ಆಶಾ ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು: ಸಚಿವ ಹೆಚ್.ಸಿ ಬಾಲಕೃಷ್ಣ!

ಆಶಾ ಕಾರ್ಯಕರ್ತೆಯರ ಬೇಡಿಕೆಯೂ ನ್ಯಾಯಯುತವಾಗಿಯೇ ಇದೆ. ಆದರೆ, ಅದನ್ನು ಈಡೇರಿಸಲು ಸಮಯಬೇಕು. ಹೀಗಾಗಿ ಅವರು ಮೊಂಡುತನ ಬಿಟ್ಟು ಕಾಲಾವಕಾಶ ನೀಡಬೇಕು ಎಂದು ಸಚಿವ ಹೆಚ್ ಸಿ ಬಾಲಕೃಷ್ಣ ಹೇಳಿದ್ದಾರೆ.

ಸಚಿವ ಹೆಚ್ ಸಿ ಬಾಲಕೃಷ್ಣ
Vishwanath S
Updated On : 27 Nov 2026, 4:06 pm

ರಾಮನಗರ: ಆಶಾ ಕಾರ್ಯಕರ್ತೆಯರ ಬೇಡಿಕೆಯೂ ನ್ಯಾಯಯುತವಾಗಿಯೇ ಇದೆ. ಆದರೆ, ಅದನ್ನು ಈಡೇರಿಸಲು ಸಮಯಬೇಕು. ಹೀಗಾಗಿ ಅವರು ಮೊಂಡುತನ ಬಿಟ್ಟು ಕಾಲಾವಕಾಶ ನೀಡಬೇಕು ಎಂದು ಸಚಿವ ಹೆಚ್ ಸಿ ಬಾಲಕೃಷ್ಣ ಹೇಳಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ಸಿಎಂ ಡಿಕೆ ಶಿವಕುಮಾರ್ ಅವರು, ಈಗಾಗಲೇ ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ನಿಮ್ಮ ಹೋರಾಟಕ್ಕೆ ಬೆಲೆ ಇದೆ. ಆದರೆ ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ. ಒಬ್ಬರಿಗೆ ಲಿಖಿತ ಭರವಸೆ ನೀಡಿದರೆ, ಉಳಿದವರೂ ಅದೇ ರೀತಿ ಬೇಡಿಕೆ ಇಡುತ್ತಾರೆ. ಲಿಖಿತ ಭರವಸೆ ಕೊಟ್ಟು ಸರ್ಕಾರ ನಡೆಸಲು ಸಾಧ್ಯವೇ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ ಪ್ರಶ್ನಿಸಿದರು.

Also Read

'ಈಗಿನ ಸಂವಿಧಾನ, ಸಂವಿಧಾನದ ಪೀಠಿಕೆ ಅಂಬೇಡ್ಕರ್ ಬರೆದಿದ್ದಲ್ಲ': ಪ್ರತಾಪ್ ಸಿಂಹ ಸ್ಫೋಟಕ ಹೇಳಿಕೆ

ಕೇಂದ್ರದಲ್ಲೂ ಅನೇಕ ಸಮಸ್ಯೆಗಳಿವೆ. ಅಲ್ಲಿ ಬರೆದುಕೊಡುತ್ತಾರಾ? ಗುಜರಾತ್‌ನಲ್ಲಿ 2,400 ರೂ. ನೀಡುತ್ತಿದ್ದಾರೆ. ರಾಜ್ಯಕ್ಕೂ ಅದನ್ನೇ ಅನುಸರಿಸಬೇಕು. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಶೇ. 60ರಷ್ಟು ತೆರಿಗೆ ಹಣ ಪಡೆಯುತ್ತಿದೆ. ಆ ಹಣವನ್ನು ವಾಪಸ್ ನೀಡಬೇಕಲ್ಲವೇ? ಕೇಂದ್ರದವರೂ ತಮ್ಮ ಪಾಲಿನ ಹಣವನ್ನು ಕೊಡಬೇಕು ಎಂದು ಒತ್ತಾಯಿಸಿದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement