ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

'ಎಲ್ಲಾ ರಾಜ್ಯ ಸರ್ಕಾರವೇ ಮಾಡಬೇಕೆಂದ್ರೆ ಹೇಗೆ, ಆಶಾ ಕಾರ್ಯಕರ್ತೆಯರು ಹೋಗಿ ಮೋದಿಯವ್ರನ್ನ ಕೇಳಲಿ': ಪ್ರಿಯಾಂಕ್ ಖರ್ಗೆ; Video

ಅಭಿವೃದ್ಧಿಗೆ ಮಾದರಿ ಎಂದು ಹೇಳುವ ಗುಜರಾತ್, ಉತ್ತರ ಪ್ರದೇಶಗಳಲ್ಲಿ ಎರಡೂವರೆ ಸಾವಿರ ವೇತನ ನೀಡಲಾಗುತ್ತಿದೆ, ಮೋದಿಯವರಿಗೆ ಏಕೆ ಕೇಳುತ್ತಿಲ್ಲ, ಆಶಾ ಕಾರ್ಯಕರ್ತೆಯರಿಗೆ ನೀಡುವ ವೇತನದಲ್ಲಿ ಕೇಂದ್ರದ ಪಾಲೆಷ್ಟು, ರಾಜ್ಯ ಸರ್ಕಾರದ ಪಾಲೆಷ್ಟು ಎಂದು ಕೇಳಿಕೊಳ್ಳಬೇಕಲ್ಲವೇ ಎಂದರು.

ಪ್ರಿಯಾಂಕ್ ಖರ್ಗೆ
Sumana Upadhyaya
Updated On : 27 Nov 2026, 2:20 pm

ಬೆಂಗಳೂರು: ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ, ಅವರ ಜೊತೆ ಮಾತುಕತೆ ನಡೆಸಿ ವಿನಂತಿ ಮಾಡಿಕೊಂಡಿದ್ದೇವೆ, ಒಂದೆರಡು ರಾಜ್ಯಗಳನ್ನು ಬಿಟ್ಟರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿಯೇ ಆಶಾ ಕಾರ್ಯಕರ್ತೆಯರಿಗೆ ಇಷ್ಟೊಂದು ಗೌರವಧನ ನೀಡಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿವೃದ್ಧಿಗೆ ಮಾದರಿ ಎಂದು ಹೇಳುವ ಗುಜರಾತ್, ಉತ್ತರ ಪ್ರದೇಶಗಳಲ್ಲಿ ಎರಡೂವರೆ ಸಾವಿರ ವೇತನ ನೀಡಲಾಗುತ್ತಿದೆ, ಮೋದಿಯವರಿಗೆ ಏಕೆ ಕೇಳುತ್ತಿಲ್ಲ, ಆಶಾ ಕಾರ್ಯಕರ್ತೆಯರಿಗೆ ನೀಡುವ ವೇತನದಲ್ಲಿ ಕೇಂದ್ರದ ಪಾಲೆಷ್ಟು, ರಾಜ್ಯ ಸರ್ಕಾರದ ಪಾಲೆಷ್ಟು ಎಂದು ಕೇಳಿಕೊಳ್ಳಬೇಕಲ್ಲವೇ ಎಂದರು.

ರಾಜ್ಯದ ಬಿಜೆಪಿ ನಾಯಕರು ಹೋಗಿ ಮೋದಿಯವರಿಗೆ ಹೇಳಿ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಬಹುದಲ್ಲವೇ, ರಾಷ್ಟ್ರೀಯ ಆರೋಗ್ಯ ಮಿಷನ್ ನಿಂದ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಿ, ನ್ಯಾಷನಲ್ ಹೆಲ್ತ್ ಮಿಷನ್ ಎಂದು ಹೆಸರಿಟ್ಟುಕೊಂಡು ರಾಜ್ಯ ಸರ್ಕಾರವೇ ಎಲ್ಲ ಕೆಲಸವನ್ನೂ ಮಾಡಬೇಕೆಂದರೆ ಹೇಗೆ ಎಂದು ಪ್ರಶ್ನಿಸಿದರು.

Advertisement

Advertisement

ಆಶಾ ಕಾರ್ಯಕರ್ತೆಯರ ಸೇವೆ ನಾವು ಕಡೆಗಣಿಸುತ್ತಿಲ್ಲ, ಆದರೆ ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಿ ನೋಡಲಿ, ನಾವು ಅವರಿಗೆ ಬೇರೆ ಪ್ರಯೋಜನಗಳನ್ನು ನೀಡುತ್ತಿದ್ದೇವೆ, ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳಲ್ಲಿ ಬಜೆಟ್ ಮರುಹೊಂದಿಸುವುದು ಕಷ್ಟವಾಗುತ್ತದೆ ಎಂದರು.

Also Read

'ಮೋದಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿಯಿಲ್ಲ,ಇದು ದುರುದ್ದೇಶದಿಂದ ತರುತ್ತಿರುವ ಮಸೂದೆ': ಪ್ರಿಯಾಂಕ್ ಖರ್ಗೆ; Video

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement