ಯಲಹಂಕ ಪ್ಯಾಲೇಸ್ ನಿರಾಕರಿಸಿದ ಜಗನ್; ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ನಡೆದ YS ಶರ್ಮಿಳಾ ಪುತ್ರಿ ಮದುವೆ!
ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರಿ ಶರ್ಮಿಳಾ ಅವರು ತಮ್ಮ ಮಗಳ ಮದುವೆಯನ್ನು ಜಂಟಿ ಒಡೆತನದಲ್ಲಿರುವ ‘ಯಲಹಂಕ ಪ್ಯಾಲೇಸ್’ನಲ್ಲಿ ನಡೆಸಲು ತೀರ್ಮಾನಿಸಿದ್ದರು.
ಬೆಂಗಳೂರು: ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ(APCC) ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರ ಪುತ್ರಿ ಅಂಜಲಿ ರೆಡ್ಡಿ ಮತ್ತು ಡಾ. ಸೋಮಲ ರಘುರಾಮ್ ರೆಡ್ಡಿ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.
ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರಿ ಶರ್ಮಿಳಾ ಅವರು ತಮ್ಮ ಮಗಳ ಮದುವೆಯನ್ನು ಜಂಟಿ ಒಡೆತನದಲ್ಲಿರುವ ‘ಯಲಹಂಕ ಪ್ಯಾಲೇಸ್’ನಲ್ಲಿ ನಡೆಸಲು ತೀರ್ಮಾನಿಸಿದ್ದರು.
ಆದರೆ ಇದಕ್ಕ ಅವರ ಸಹೋದರ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ವಿರೋಧ ವ್ಯಕ್ತಪಿಸಿದ್ದರು. ಹೀಗಾಗಿ ಶರ್ಮಿಳಾ ಅವರ ಪುತ್ರಿಯ ಮದುವೆಯನ್ನು ಬುಧವಾರ, ನವೆಂಬರ್ 25, 2026 ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿಸಲಾಗಿದೆ.
ಬೆಂಗಳೂರಿನ ಯಲಹಂಕ ಪ್ಯಾಲೇಸ್‌ನಲ್ಲಿ ತಮ್ಮ ಸೋದರ ಸೊಸೆ ಅಂಜಲಿ ರೆಡ್ಡಿ ಅವರ ಮದುವೆ ಸಮಾರಂಭವನ್ನು ನಡೆಸಲು ಅನುಮತಿ ನೀಡಲು, ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಜಗನ್ ಮೋಹನ್ ರೆಡ್ಡಿ ಇತ್ತೀಚೆಗೆ ನಿರಾಕರಿಸಿದ್ದರು.