ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರಿನಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ: ತಮಿಳುನಾಡಿನ ಮೂವರು ಕಳ್ಳಸಾಗಣೆದಾರರನ್ನು ಹೆಡೆಮುರಿ ಕಟ್ಟಿದ ಆನೇಕಲ್ ಪೊಲೀಸರು, 7 ಆನೆ ದಂತ ವಶ

ತಮಿಳುನಾಡಿನಿಂದ ಬೆಂಗಳೂರಿಗೆ ಕಾರಿನಲ್ಲಿ ಆನೆ ದಂತಗಳನ್ನು ಕಳ್ಳಸಾಗಣೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ತಮಿಳುನಾಡಿನ ಮೂವರು ಕಳ್ಳಸಾಗಣೆದಾರರನ್ನು ಹೆಡೆಮುರಿ ಕಟ್ಟಿದ ಪೊಲೀಸರು — Online Desk
Hruthin H P
Updated On : 29 Nov 2026, 2:36 pm

ಆನೇಕಲ್: ತಮಿಳುನಾಡಿನಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದು ಆನೆ ದಂತಗಳನ್ನು ಮಾರಾಟ ಮಾಡಲು ಹೊಂಚು ಹಾಕಿದ್ದ ಮೂವರು ದಂತಚೋರರು ಆನೇಕಲ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುತ್ಯಾಲಮಡುವಿನ ಬಳಿ 15 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳಿಂದ ಬರೋಬ್ಬರಿ 7 ಆನೆ ದಂತಗಳು, ಬೇಟೆಗೆ ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಹಾಗೂ ಕಾರನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮುತ್ಯಾಲಮಡುವು ಸಮೀಪ ಪೊಲೀಸರ ಕಾರ್ಯಾಚರಣೆ

ಆನೇಕಲ್ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ಯಾಲಮಡುವು ಸಮೀಪದ ಅರಣ್ಯ ಮಾರ್ಗದಲ್ಲಿ ವನ್ಯಜೀವಿ ಬೇಟೆ ಮತ್ತು ಆನೆ ದಂತ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಆನೇಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಅವರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ಅರಣ್ಯ ಮಾರ್ಗದಲ್ಲಿ ಕಾವಲು ಕಾಯ್ದು, ಅನುಮಾನಾಸ್ಪದವಾಗಿ ಬರುತ್ತಿದ್ದ ಕಾರೊಂದನ್ನು ತಡೆದು ತಪಾಸಣೆ ನಡೆಸಿತು.

Advertisement

Advertisement

7 ಆನೆ ದಂತ ಮತ್ತು ಆಯುಧಗಳ ಜಪ್ತಿ

ಕಾರನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಒಳಗೆ ಬಚ್ಚಿಟ್ಟಿದ್ದ 7 ಆನೆ ದಂತಗಳು ಪತ್ತೆಯಾಗಿವೆ. ತಮಿಳುನಾಡು ಮೂಲದ ಸತೀಶ್ವರನ್, ಶರತ್ ಕುಮಾರ್ ಮತ್ತು ಶಂಕರ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ದಂತಗಳ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ವನ್ಯಜೀವಿ ಬೇಟೆಗೆ ಬಳಸಿರಬಹುದಾದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

Also Read

ಅಡ್ವಾನ್ಸ್ ವಾಪಸ್ ಕೊಟ್ಟಿದ್ದಕ್ಕೆ ವಲಸೆ ಕಾರ್ಮಿಕರಿಗೆ ಬಂದೂಕು ತೋರಿಸಿ, ದೊಣ್ಣೆಯಿಂದ ಮನಸೋ ಇಚ್ಛೆ ಥಳಿಸಿದ ಎಸ್ಟೇಟ್ ಮಾಲೀಕ! Video ವೈರಲ್

ಮುಂದುವರೆದು, ತಮಿಳುನಾಡು ಮತ್ತು ಕರ್ನಾಟಕ ಗಡಿಭಾಗದ ಅರಣ್ಯ ಮಾರ್ಗವನ್ನು ಬಳಸಿಕೊಂಡು ಆರೋಪಿಗಳು ಈ ದಂತಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರು. ಬಂಧಿತರು ಕೇವಲ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೋ ಅಥವಾ ನೇರವಾಗಿ ಆನೆಗಳನ್ನು ಬೇಟೆಯಾಡಿದವರೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಈ ದಂತಗಳನ್ನು ಖರೀದಿಸಲು ಸಿದ್ಧರಾಗಿದ್ದ ಸ್ಥಳೀಯ ಸಂಪರ್ಕಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement