ಜಿಮ್ ಟ್ರೈನರ್ ನಂದನ್  
ರಾಜ್ಯ

ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಸಾವು! ನಾಲ್ವರ ವಿರುದ್ಧ ಕೊಲೆ ಕೇಸ್ ದಾಖಲು

ಶನಿವಾರದಂದು ಮನೆಯಿಂದ ಹೊರಡುವಾಗ, ತಡವಾದರೆ ಬೆಳಿಗ್ಗೆ ವಾಪಸಾಗುವುದಾಗಿ ನಂದನ್ ತಮ್ಮ ಕುಟುಂಬಕ್ಕೆ ತಿಳಿಸಿದ್ದರು ಎನ್ನಲಾಗಿದೆ.

ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ನಡೆದ ಹಲ್ಲೆ ಘಟನೆಯ ನಂತರ 25 ವರ್ಷದ ಜಿಮ್ ತರಬೇತುದಾರರೊಬ್ಬರು ಮೃತಪಟ್ಟಿದ್ದಾರೆ. ನಂದನ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಇವರು ತರಬೇತುದಾರರಾಗಿ ಕೆಲಸ ಮಾಡುತ್ತಿದ್ದ ಜಿಮ್‌ನ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ನಂತರ ಈ ಘಟನೆ ನಡೆದಿದೆ. ದೂರಿನ ಪ್ರಕಾರ, ಶನಿವಾರದಂದು ಮನೆಯಿಂದ ಹೊರಡುವಾಗ, ತಡವಾದರೆ ಬೆಳಿಗ್ಗೆ ವಾಪಸಾಗುವುದಾಗಿ ನಂದನ್ ತಮ್ಮ ಕುಟುಂಬಕ್ಕೆ ತಿಳಿಸಿದ್ದರು ಎನ್ನಲಾಗಿದೆ.

ಜಿಮ್ ವಾರ್ಷಿಕೋತ್ಸವ ಕಾರ್ಯಕ್ರಮದ ನಂತರ ನಂದನ್ ಮತ್ತು ಜಿಮ್‌ನ ಇತರ ಸಿಬ್ಬಂದಿ ಪರಿಚಯಸ್ಥರೊಬ್ಬರ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಅಲ್ಲಿ ನಡೆದ ಜಗಳದ ವೇಳೆ ನಂದನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ನಂತರ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ತಿಳಿದ ನಂತರ ಆಸ್ಪತ್ರೆಗೆ ತಲುಪಿದ ನಂದನ್ ಅವರ ತಾಯಿ ಮಂಜುಳಾ, ತನ್ನ ಮಗನ ದೇಹದ ಮೇಲಿನ ಗಾಯದ ಗುರುತುಗಳನ್ನು ಗಮನಿಸಿದ್ದಾರೆ. ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಜಗಳದ ವೇಳೆ ನಂದನ್ ಮೇಲೆ ಹಲ್ಲೆ ನಡೆಸಿದ್ದರಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅವರು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ, ಪೊಲೀಸರು ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಮೃತಹಳ್ಳಿ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಪೊಲೀಸರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರತಿಭಟನೆ ಮುಂದುವರಿಕೆ, ಹಲವರು ವಶಕ್ಕೆ!

'ಏಕ್ ಕಚೋರಿ- ದೋ ಸಮೋಸಾ, ಇನ್ ಮರ್ದೋಂಕಾ ಕ್ಯಾ ಭರೋಸಾ': ನನ್ನ ಹೆಣ್ಣುಮಕ್ಕಳು ಇಂತಹ ಘೋಷಣೆ ಬರೆಯುವ ಪರಿಸ್ಥಿತಿ ಏಕೆ ಬಂದಿದೆ?

ಕೆಲಸದ ಆಮಿಷವೊಡ್ಡಿ ಮಹಿಳೆ ಕರೆಸಿಕೊಂಡು ಮತ್ತಿನ ಔಷಧ ನೀಡಿ ಗ್ಯಾಂಗ್ ರೇಪ್, Video ರೆಕಾರ್ಡ್: ಇಬ್ಬರ ಬಂಧನ

ಬಳ್ಳಾರಿಯಲ್ಲಿ ತೀವ್ರಗೊಂಡ SIR ಸಂಘರ್ಷ: ಬೂತ್ ಮಟ್ಟದ ಬಿಜೆಪಿ ಏಜೆಂಟ್ ವಿರುದ್ಧ Search warrant!

ಏಷ್ಯನ್ ಗೇಮ್ಸ್‌ 2026: ಭಾರತ ಚಿನ್ನದ ಪದಕ ಗೆದ್ದ ಬಳಿಕ ಜಪಾನ್‌ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ ಭಾರತೀಯ ಅಭಿಮಾನಿಗಳು! Video