ಹಾಸನ: ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹಾಸನ ನಗರದ ದೇವಿಗೆರೆ ಆವರಣದಲ್ಲಿ ಪೆಂಡಾಲ್ ಗೌರಿ–ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರಿಗೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಮತ್ತೊಂದೆಡೆ ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಜಿಲ್ಲಾಧಿಕಾರಿಗಳ ನಡೆ ವಿರುದ್ಧ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿ ಅವರ ಬೇಜವಾವ್ದಾರಿ ಹೇಳಿಕೆಯಿಂದ ಜನರಿಗೆ, ಭಕ್ತರಿಗೆ ನೋವಾಗಿದೆ. ಬೇರೆ ಗಣಪತಿಗಳ ವಿಸರ್ಜನೆಗೆ ಇಲ್ಲದ ಅಡ್ಡಿ ಪೆಂಡಾಲ್ ಗಣಪತಿ ವಿಸರ್ಜನೆಗೆ ಯಾಕೆ ಎಂಬುದು ನಮ್ಮ ಪ್ರಶ್ನೆ.
ಎಸ್ಪಿಗೆ ಕೊಟ್ಟ ನೊಟೀಸ್ನಲ್ಲಿ ಪೆಂಡಾಲ್ ಗಣಪತಿ ಆಯೋಜಕರ ವಿರುದ್ದ ಕ್ರಮಕ್ಕೆ ಸೂಚಿಸಿದ್ದಾರೆ. ಆದರೆ ಅವರ ಆದೇಶವನ್ನ ನಾವು ಬಹಿಷ್ಕಾರ ಮಾಡ್ತೇವೆ. ನಿನ್ನೆ ದೇವಿಗೆರೆ ಸಂರಕ್ಷಣೆ ಅಂತಾ ಸಮಿತಿ ರಚನೆ ಮಾಡಿದಾರೆ. ಶಾಸಕನಾದ ನನ್ನ ಗಮನಕ್ಕೆ ತರದೆ ಹೀಗೆ ಮಾಡಿದ್ದಾರೆ. ಈ ಸಂಬಂಧ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.
ನಿಯಮಗಳನ್ನು ಪಾಲಿಸುತ್ತಿಲ್ಲ ಕಾನೂನು ಸುವ್ಯವಸ್ಥೆ ಕಾಂಪ್ರಮೈಸ್ ಆಗುತ್ತೆ. ಏನಾದರೂ ಘಟನೆ ಆದರೆ ಮಾತ್ರ ಕಾನೂನು ಸುವ್ಯವಸ್ಥೆ ಬರುತ್ತೆ. ತಹಶೀಲ್ದಾರ್ ವರದಿ ಸೂಕ್ಷ್ಮವಾಗಿದೆ, ಪರಿಶೀಲಿಸಿ ಆದೇಶ ಕೊಡಬೇಕಿತ್ತು. ಅದು ಆಡಳಿತಾತ್ಮಕ ವಿಚಾರ, ಅವರು ಒಬ್ಬರು ಅಧಿಕಾರಿಯಾಗಿದ್ದಾರೆ.
ಅವರದ್ದೇ ಆದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಯಾವ ಅಧಿಕಾರಿಯ ಬಗ್ಗೆಯೂ ನನಗೆ ವೈಯುಕ್ತಿಕ ದ್ವೇಷ ಇಲ್ಲ. ನಾನು ಆದೇಶ ಹೊರಡಿಸಿದ್ದನ್ನು ತಹಶೀಲ್ದಾರ್, ಮತ್ತೊಬ್ಬರು ಪಾಲಿಸಬೇಕು ಎಂದು ಎಸ್‌ಪಿ ಶುಭನ್ವಿತಾ ವಿರುದ್ಧ ಹಾಸನ ಡಿಸಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಡಿಸಿ ಅವರ ನಿಲುವು ಖಂಡನೀಯ, ಅವರ ಉದ್ದಟತನ ನಮಗೆ ನೋವು ತಂದಿದೆ. ಅವರು ಎಸ್ಪಿ ಅವರಿಗೆ ಕೊಟ್ಟಿರುವ ನೋಟಿಸ್ ಸರಿ ಇಲ್ಲ. ಈ ವಿಚಾರದಲ್ಲಿ ಸಚಿವರು, ಸಂಸದರು ಮಧ್ಯಪ್ರವೇಶ ಮಾಡಬೇಕು. ಅಧಿಕಾರಿಗಳ ನಡುವೆ ಗೊಂದಲ ಆದರೆ ಹಾಸನಾಂಬೆ ಉತ್ಸವ ಹೇಗೆ ಮಾಡ್ತಿರಿ? ಡಿಸಿ ಅವರು ಸಚಿವರ ಮಾತನ್ನೇ ಕೇಳದ ಮಟ್ಟಕ್ಕೆ ಬಂದಿದ್ದಾರೆ.
ಕೆರೆ ಸ್ಚಚ್ಛತೆ ಬಗ್ಗೆ ನಮಗೂ ಕಾಳಜಿ ಇದೆ. ಅವರ ಏಕಪಕ್ಷೀಯ ನಿಲುವು ಸರಿಯಲ್ಲ. ಪೆಂಡಾಲ್ ಗಣಪತಿ ವಿಸರ್ಜನೆ ಮೆರವಣಿಗೆಗೆ ಅಕ್ಟೋಬರ್ 3ರಂದು ಚಾಲನೆ ನೀಡಲಾಗಿತ್ತು. ಆಗ ಯಾವುದೇ ಆದೇಶ ಇರಲಿಲ್ಲ. ಕಳೆದ ವರ್ಷವೂ ಇವರೇ ಡಿಸಿ ಆಗಿದ್ರಲ್ಲ, ಆಗ ಯಾಕೆ ಕೆರೆ ಸ್ಚಚ್ಛತೆ ಬಗ್ಗೆ ಕ್ರಮ ವಹಿಸಲಿಲ್ಲ ಎಂದು ಶಾಸಕರು ಪ್ರಶ್ನಿಸಿದ್ದಾರೆ.