ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ AI Image
ರಾಜ್ಯ

ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: ಒಂದೂವರೆ ವರ್ಷದಲ್ಲಿ 15,000 ನಕಲಿ ವಯಲ್ ವಿತರಣೆ ಮಾಡಿ ₹10 ಕೋಟಿ ಲಾಭ

ಕರ್ನಾಟಕದ ನಕಲಿ ಆ್ಯಂಟಿಬಯೋಟಿಕ್ ಮತ್ತು ಐಸಿಯು ಔಷಧ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳು ಕಳೆದ ಒಂದೂವರೆ ವರ್ಷದಲ್ಲಿ, ಸುಮಾರು 15,000ಕ್ಕೂ ಹೆಚ್ಚು ನಕಲಿ ಆ್ಯಂಟಿಬಯೋಟಿಕ್ ಚುಚ್ಚುಮದ್ದಿನ ಬಾಟಲಿಗಳನ್ನು ಆಸ್ಪತ್ರೆ ಮತ್ತು ಫಾರ್ಮಸಿಗಳಿಗೆ ವಿತರಿಸಿರುವುದು ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕರ್ನಾಟಕದ ನಕಲಿ ಆ್ಯಂಟಿಬಯೋಟಿಕ್ ಮತ್ತು ಐಸಿಯು ಔಷಧ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಮಾಹಿತಿ ಹೊರಬಿದಿದ್ದು, SIT ತನಿಖೆಯ ಪ್ರಕಾರ, ಆರೋಪಿಗಳು ಕಳೆದ ಒಂದೂವರೆ ವರ್ಷದಲ್ಲಿ, ಸುಮಾರು 15,000 ಕ್ಕೂ ಹೆಚ್ಚು ನಕಲಿ ಆ್ಯಂಟಿಬಯೋಟಿಕ್ ಚುಚ್ಚುಮದ್ದಿನ ಬಾಟಲಿಗಳನ್ನು ಆಸ್ಪತ್ರೆ ಮತ್ತು ಫಾರ್ಮಸಿಗಳಿಗೆ ವಿತರಿಸಿರುವುದು ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

15,000 ನಕಲಿ ವಯಲ್‌ಗಳ ವಿತರಣೆ

ಬೆಂಗಳೂರು ಹೊರವಲಯದ ಬಿಡದಿಯ ಫಾರ್ಮ್‌ಹೌಸ್ ಒಂದರಲ್ಲಿ ಅಕ್ರಮವಾಗಿ ತಯಾರಾಗುತ್ತಿದ್ದ ಈ ನಕಲಿ ಜೀವರಕ್ಷಕ ಔಷಧಿಗಳ ಪ್ರಕರಣದ ತನಿಖೆಯ ವೇಳೆ, ಹೈದರಾಬಾದ್, ಚೆನ್ನೈ ಮತ್ತು ಉತ್ತರಾಖಂಡ್‌ ರಾಜ್ಯಗಳಿಂದ ಅತ್ಯಂತ ಕಡಿಮೆ ಬೆಲೆಯ ಅಥವಾ ಅವಧಿ ಮುಗಿದ ಕೆಳಮಟ್ಟದ ರಾಸಾಯನಿಕ/ಔಷಧಗಳನ್ನು ತಂದು, ಅವುಗಳನ್ನು ಹೊಸ ಸೀಸೆಗಳಿಗೆ ತುಂಬಿಸಿ, ಫಿಜರ್ ನಂತಹ ಜಾಗತಿಕ ಕಂಪನಿಗಳ ನಕಲಿ ಲೇಬಲ್ ಹಚ್ಚಿ ಮಾರುತ್ತಿದ್ದರು. ಹೀಗೆ,  ಆರೋಪಿಗಳು ಸುಮಾರು 15,000 ಕ್ಕೂ ಹೆಚ್ಚು ನಕಲಿ ಆ್ಯಂಟಿಬಯೋಟಿಕ್ ಇಂಜೆಕ್ಷನ್ ವಯಲ್‌ಗಳನ್ನು ಈಗಾಗಲೇ ವಿತರಿಸಿದ್ದಾರೆ. ಇವು ತೀವ್ರ ಬ್ಯಾಕ್ಟೀರಿಯಾ ಸೋಂಕು ಹಾಗೂ ಐಸಿಯುನಲ್ಲಿರುವ ರೋಗಿಗಳಿಗೆ ಬಳಸುವ ಅತ್ಯಂತ ದುಬಾರಿ ಔಷಧಗಳಾಗಿದ್ದವು. ಅದರಂತೆ, ವಿಶೇಷ ತನಿಖಾ ತಂಡದ ತನಿಖೆಯ ಪ್ರಕಾರ, ಆರೋಪಿಗಳು  ತಲಾ ₹5,500 ರಿಂದ ₹6,500 ವರೆಗಿನ ಬೆಲೆಗೆ ಮಾರಿ, ಕಳೆದ ಕೆಲವು ತಿಂಗಳುಗಳಲ್ಲೇ ಸುಮಾರು ₹10 ಕೋಟಿಗೂ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

90 ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ

ಈ ನಕಲಿ ಔಷಧಗಳನ್ನು ಡಿಎಂ ಫಾರ್ಮಾ ಮತ್ತು ಕೃಪಾ ಫಾರ್ಮಾ ಮೂಲಕ ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಇರುವ 90 ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಭಾರಿ ರಿಯಾಯಿತಿ ದರದಲ್ಲಿ ಪೂರೈಸಲಾಗಿತ್ತು.  ಈ ದಂಧೆಯ ಮುಖ್ಯ ಸೂತ್ರಧಾರ ಆರ್. ಪ್ರಶಾಂತ್ ಬಾಬು ವಿದೇಶಕ್ಕೆ (ಅಜೆರ್ಬೈಜಾನ್) ಪರಾರಿಯಾಗಿದ್ದನು. ಆದರೆ ಆತ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದಂತೆ ಎಸ್‌ಐಟಿ (SIT) ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 7 ಜನರನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ