ಪ್ರಮೋದಾದೇವಿ ಒಡೆಯರ್ (ಸಂಗ್ರಹ ಚಿತ್ರ) 
ರಾಜ್ಯ

ಜಟ್ಟಿ ಕಾಳಗ ರದ್ದಾದರೆ ನಾಡಿಗೆ ಕೆಡುಕಾಗಲ್ಲ, ಜ್ಯೋತಿಷ್ಯವನ್ನಲ್ಲ ದೇವರನ್ನು ನಂಬುತ್ತೇವೆ: ಪ್ರಮೋದಾದೇವಿ ಒಡೆಯರ್

ಜಟ್ಟಿ ಕಾಳಗ ರದ್ದಾಗಿದ್ದಕ್ಕೆ ನಾಡಿಗೆ ಯಾವುದೇ ಕೆಡುಕಾಗುವುದಿಲ್ಲ, ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು ಜ್ಯೋತಿಷ್ಯವನ್ನಲ್ಲ, ದೇವರನ್ನು ನಂಬುತ್ತೇವೆ. ದೇವರ ಮೇಲೆ ಸಂಪೂರ್ಣ ವಿಶ್ವಾಸವಿದೆ.

ಮೈಸೂರು: ಜಟ್ಟಿ ಕಾಳಗ ರದ್ದಾದರೆ ನಾಡಿಗೆ ಕೆಡುಕಾಗಲ್ಲ. ಹಾಗಾಗಿ ಆತಂಕ ಬೇಡ. ನಾನು ಜ್ಯೋತಿಷ್ಯವನ್ನಲ್ಲ, ದೇವರನ್ನು ನಂಬುತ್ತೇನೆಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.

ಜಟ್ಟಿ ಕಾಳಗ ರದ್ದಾಗಿದ್ದಕ್ಕೆ ನಾಡಿಗೆ ಯಾವುದೇ ಕೆಡುಕಾಗುವುದಿಲ್ಲ, ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು ಜ್ಯೋತಿಷ್ಯವನ್ನಲ್ಲ, ದೇವರನ್ನು ನಂಬುತ್ತೇವೆ. ದೇವರ ಮೇಲೆ ಸಂಪೂರ್ಣ ವಿಶ್ವಾಸವಿದೆ ಹೇಳಿದ್ದಾರೆ. ಇದೇ ವೇಳೆ ಈ ಘಟನೆಗೆ ಅನಗತ್ಯ ಅರ್ಥಗಳನ್ನು ಕಲ್ಪಿಸಬೇಡಿ ಎಂದೂ ಮನವಿ ಮಾಡಿದ್ದಾರೆ.

ಅಲ್ಲದೆ, ಜಟ್ಟಿ ಕಾಳಗ ರದ್ದಾಗಿರುವ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡುವುದಾಗಿ ತಿಳಿಸಿದ್ದಾರೆ.

ನಮ್ಮ ಮನೆಯ ವಿಧಿವಿಧಾನಗಳು ನಿಗದಿತ ಮುಹೂರ್ತದಲ್ಲೇ ನಡೆಯಬೇಕು. ಮುಹೂರ್ತ ಮೀರಿದ ಬಳಿಕ ಯಾವುದೇ ಕಾರ್ಯವನ್ನು ಮಾಡುವುದಿಲ್ಲ. ಹೀಗಾಗಿಯೇ ಜಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಿದ್ದೇವೆ. ಈ ವಿಚಾರದಲ್ಲಿ ನಾನು ಯಾವುದೇ ಜ್ಯೋತಿಷಿಗಳ ಸಲಹೆ ಪಡೆದಿಲ್ಲ. ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿದ್ದೇನೆ. ಹೀಗಾಗಿ, ನನಗೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ದಸರಾ ಅಂಬಾರಿ ಹೊತ್ತ ಆನೆ ಪ್ರಶಾಂತ್‌ ಬಗ್ಗೆಯೂ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಈ ಬಾರಿ ಆನೆಯ ಬಗ್ಗೆ ತಮಗೆ ಹೆಚ್ಚಿನ ಆತಂಕವಿತ್ತು ಎಂದು ಹೇಳಿದರು.

ಪ್ರಶಾಂತ್ ಯಾವ ರೀತಿ ಅಂಬಾರಿ ಕಟ್ಟಿಸಿಕೊಳ್ಳುತ್ತಾನೆ, ಹೇಗೆ ನಡೆಯುತ್ತಾನೆ ಎಂಬ ಬಗ್ಗೆ ನನಗೆ ಆತಂಕವಿತ್ತು. ಹಿಂದೆಂದೂ ಈ ರೀತಿಯ ಆತಂಕ ನನಗಾಗಿರಲಿಲ್ಲ. ಆದರೆ, ಈ ಬಾರಿ ನನ್ನ ಎಲ್ಲ ಆತಂಕಗಳನ್ನು ಮೀರಿ ಪ್ರಶಾಂತ್ ಉತ್ತಮವಾಗಿ ಅಂಬಾರಿ ಹೊತ್ತಿದ್ದಾನೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಚಾಮುಂಡಿ ತಾಯಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ ಎಂಬ ಭಾವನೆ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮತ್ತೆ ಚೀನಾ ಕ್ಯಾತೆ, ಗಲ್ವಾನ್ ರೀತಿಯ ಸಂಘರ್ಷ; ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮತ್ತೆ ಮುಖಾಮುಖಿ?

'ಪರ್ಫೆಕ್ಟ್ ಪರ್ಯಾಯ': ನಮನ್‌ ಧೀರ್‌ ಆಲ್ರೌಂಡ್ ಆಟಕ್ಕೆ ಅಶ್ವಿನ್‌ ಫಿದಾ, ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಗೆ ಮೆಚ್ಚುಗೆ!

ಅಂತ್ಯಕ್ರಿಯೆ ವೇಳೆ ಚರ್ಚ್‌ಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ: 7 ಮಂದಿ ಸಾವು, 34 ಜನರಿಗೆ ಗಾಯ; Video

ಮೈಸೂರಿನಲ್ಲಿ ದುರಂತ: ನೀರಿನ ಪಂಪ್‌ ಸ್ವಚ್ಛಗೊಳಿಸುವಾಗ ವಿದ್ಯುತ್‌ ಶಾಕ್‌, ರಾಜಸ್ಥಾನ ಮೂಲದ ಯುವಕ ಸಾವು,Video