ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿ ನಾಪತ್ತೆ 
ರಾಜ್ಯ

ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿ ನಾಪತ್ತೆ; ಪತ್ತೆಗಾಗಿ ಭಾರತೀಯ ರಾಯಭಾರ ಕಚೇರಿಗೆ ಕುಟುಂಬದ ಮನವಿ

ಅಕ್ಟೋಬರ್ 21ರಂದು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಮಂಗಳೂರು ಪೊಲೀಸ್ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಡೈಸಿ ಈ ಕುರಿತು ವಿವರಿಸಿದ್ದಾರೆ.

ಮಂಗಳೂರು: ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ 41 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಕುಟುಂಬದವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಾಪತ್ತೆ ದೂರು ಸಲ್ಲಿಸಿದ್ದಾರೆ.

ಆ ಸಬಂಧ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಕುಟುಂಬಸ್ಥರು ಪತ್ರ ಬರೆದು ನೆರವು ಕೋರಿದ್ದಾರೆ.

ಮಂಗಳೂರಿನ ಸಮೀಪದ ಕಣ್ಣೂರು ಬಳಿಯ ಕೊಡಕ್ಕಲ್‌ ನಿವಾಸಿ ಶದ್ರಕ್ ಎಮ್ಯಾನುಯಲ್ ನಾಪತ್ತೆಯಾದವರು. ಅವರ ಪತ್ನಿ ಡೈಸಿ ಎಮ್ಯಾನುಯಲ್ ನೀಡಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 16ರ ಬಳಿಕ ಶದ್ರಕ್ ಅವರ ಸಂಪರ್ಕ ಸಾಧ್ಯವಾಗಿಲ್ಲ.

ಅಕ್ಟೋಬರ್ 21ರಂದು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಮಂಗಳೂರು ಪೊಲೀಸ್ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಡೈಸಿ ಈ ಕುರಿತು ವಿವರಿಸಿದ್ದಾರೆ.

ಶದ್ರಕ್ ಅವರು ಉದ್ಯೋಗದ ನಿಮಿತ್ತ ಈ ವರ್ಷದ ಮೇ 16ರಂದು ಇಸ್ರೇಲ್‌ಗೆ ತೆರಳಿದ್ದರು. ಮಂಗಳೂರಿನ ಫರ್ನಾಂಡಿಸ್ ಗ್ರೂಪ್ ಎಂಬ ನೇಮಕಾತಿ ಸಂಸ್ಥೆಯ ಮೂಲಕ ಇಸ್ರೇಲ್‌ನ ನಜರೆತ್‌ನ ನೋಫ್ ಹಾ ಗಲಿಲ್‌ನಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್ ಕಂಪನಿಯಲ್ಲಿ ಅವರಿಗೆ ಕೆಲಸ ದೊರೆತಿತ್ತು.

ಅ. 16ರಂದು ಕೊನೆಯ ಸಂಪರ್ಕ

ಶದ್ರಕ್ ಅವರು ಅಕ್ಟೋಬರ್ 16ರಂದು ರಾತ್ರಿ 8.05ರ ಸುಮಾರಿಗೆ ವಾಟ್ಸ್‌ಆ್ಯಪ್ ವಿಡಿಯೊ ಕರೆ ಮೂಲಕ ಕುಟುಂಬದವರೊಂದಿಗೆ ಕೊನೆಯದಾಗಿ ಮಾತನಾಡಿದ್ದರು. ಅದೇ ದಿನ ರಾತ್ರಿ 8.49ಕ್ಕೆ ಅವರು ಕಳುಹಿಸಿದ್ದ ಕೊನೆಯ ಸಂದೇಶವನ್ನು ಕುಟುಂಬದವರು ನೋಡಿದ್ದರು ಎಂದು ಡೈಸಿ ತಿಳಿಸಿದ್ದಾರೆ.

ಅದಾದ ಬಳಿಕ ವಾಟ್ಸ್‌ಆ್ಯಪ್ ಕರೆಗಳು ಹಾಗೂ ಇಸ್ರೇಲ್‌ನಲ್ಲಿರುವ ಪರಿಚಿತರ ಮೂಲಕ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಪತಿಯ ಸುರಕ್ಷತೆ ಮತ್ತು ಅವರು ಎಲ್ಲಿದ್ದಾರೆ ಎಂಬ ಬಗ್ಗೆ ತೀವ್ರ ಆತಂಕ ಉಂಟಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಪತ್ತೆಗೆ ನೆರವು ಕೋರಿದ ಪತ್ನಿ

ಶದ್ರಕ್ ಅವರನ್ನು ಪತ್ತೆಹಚ್ಚಲು ಇಸ್ರೇಲ್ ಪೊಲೀಸರ ಹಾಗೂ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಡೈಸಿ ಭಾರತೀಯ ರಾಯಭಾರ ಕಚೇರಿಯನ್ನು ಕೋರಿದ್ದಾರೆ. ಅಲ್ಲದೆ, ಶದ್ರಕ್ ಕೆಲಸ ಮಾಡುತ್ತಿದ್ದ ಕಂಪನಿ, ನೇಮಕಾತಿ ಸಂಸ್ಥೆ ಅಥವಾ ಉದ್ಯೋಗದ ಪ್ರಾಯೋಜಕರನ್ನು ಸಂಪರ್ಕಿಸಿ ಅವರು ಕೊನೆಯದಾಗಿ ಕೆಲಸಕ್ಕೆ ಹಾಜರಾಗಿದ್ದ ಸಮಯ, ಕೊನೆಯದಾಗಿ ಕಾಣಿಸಿಕೊಂಡ ಸ್ಥಳ ಹಾಗೂ ಉದ್ಯೋಗದ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಅವರು ಯಾವುದಾದರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಯೇ, ಪೊಲೀಸರ ವಶದಲ್ಲಿದ್ದಾರೆಯೇ ಅಥವಾ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಂದಿದ್ದಾರೆಯೇ ಎಂಬುದನ್ನೂ ಪರಿಶೀಲಿಸುವಂತೆ ಡೈಸಿ ಅಧಿಕಾರಿಗಳನ್ನು ಕೋರಿದ್ದಾರೆ. ಪತಿಯ ಪತ್ತೆಗಾಗಿ ಕುಟುಂಬದವರು ಇದೀಗ ಭಾರತೀಯ ರಾಯಭಾರ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಮೋದಿ ಕಾ ಬಾಪ್ ಭಿ ಜಾಯೇಗಾ": ಖರ್ಗೆ ಹೇಳಿಕೆ ಖಂಡಿಸಿ ದೇಶಾದ್ಯಂತ ಬಿಜೆಪಿ ಪ್ರತಿಭಟನೆ; ಕ್ಷಮೆಯಾಚಿಸಬೇಕು ಎಂದು ಆಗ್ರಹ!

ತಮ್ಮದೇ ಸರ್ಕಾರದ ವಿರುದ್ಧ ಉಗ್ರಪ್ಪ ವಾಗ್ದಾಳಿ: ಪ್ರಧಾನಿ ಮೋದಿ ಮುಂದೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಆಗ್ರಹ

ಬಹುತೇಕ ಮುಸ್ಲಿಮರು ಮಾಜಿ ದಲಿತರು, ಯಾವ ಕಾರಣಕ್ಕೆ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ: ಸಚಿವ ರಿಜ್ವಾನ್ ಅರ್ಷದ್

ಮದುವೆಯಾದ ಮೇಲೂ ‘ಮತ್ತೆ ಮತ್ತೆ ಮದುವೆಯಾಗೋಣವೇ?’ ಎಂದು ಕೇಳುವಷ್ಟು ಪ್ರೀತಿ ಇದೆ: ಟ್ರೋಲ್ ಬಗ್ಗೆ ರಶ್ಮಿಕಾ ಸುದೀರ್ಘ ಪೋಸ್ಟ್!

100 ಅಡಿ ಆಳದ ಕಂದಕಕ್ಕೆ ಬಿದ್ದು ಮರಿ ಆನೆ ಸಾವು; ರಕ್ಷಿಸಲು ತಾಯಾನೆ ಪರದಾಟ, ಮನಮಿಡಿಯುವ Video ವೈರಲ್‌