ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು ಗ್ಯಾಸ್ ಸಿಲಿಂಡರ್ ಸ್ಫೋಟ ದುರಂತ: 2 ದಿನಗಳ ಬಳಿಕ ದಂಪತಿ ಮೃತದೇಹ ಪತ್ತೆ..!

ಆರಂಭದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಭಾವಿಸಿದ್ದರು. ಆದರೆ, ಬೆಂಕಿಯಿಂದ ಹಾನಿಗೊಳಗಾದ ಅವಶೇಷಗಳನ್ನು ತೆರವುಗೊಳಿಸುವ ವೇಳೆ ಸೋಮವಾರ ಕಟ್ಟಡದ ಮೊದಲ ಮಹಡಿಯಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿವೆ.

ಬೆಂಗಳೂರು: ಗಂಗಮ್ಮನಗುಡಿ ಸಮೀಪದ ಕಮ್ಮಗೊಂಡನಹಳ್ಳಿಯಲ್ಲಿ ಅಕ್ರಮ ಗ್ಯಾಸ್ ಮರುಪೂರಣ ಅಂಗಡಿಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ದಂಪತಿಗಳು ಮೃತಪಟ್ಟಿದ್ದು, ದುರ್ಘಟನೆ ನಡೆದು 2 ದಿನಗಳ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಕಟ್ಟಡದ ಮೊದಲ ಮಹಡಿಯಲ್ಲಿ ದಂಪತಿಗಳ ಮೃತದೇಹ ಸೋಮವಾರ ಪತ್ತೆಯಾಗಿದ್ದು, ದಟ್ಟ ಹೊಗೆಯಿಂದ ಉಸಿರುಗಟ್ಟಿ ಇಬ್ಬರೂ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಮೃತರನ್ನು 27 ವರ್ಷದ ಆಕಾಶ್ ಬಸವರಾಜ್ ಮತ್ತು 24 ವರ್ಷದ ನಾಗರತ್ನ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಗ್ಯಾಸ್ ಮರುಪೂರಣ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 20ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳು ಸರಣಿ ಸ್ಫೋಟಗೊಂಡಿದ್ದವು.

ಆರಂಭದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಭಾವಿಸಿದ್ದರು. ಆದರೆ, ಬೆಂಕಿಯಿಂದ ಹಾನಿಗೊಳಗಾದ ಅವಶೇಷಗಳನ್ನು ತೆರವುಗೊಳಿಸುವ ವೇಳೆ ಸೋಮವಾರ ಕಟ್ಟಡದ ಮೊದಲ ಮಹಡಿಯಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿವೆ.

ಬೆಂಕಿ ಕಾಣಿಸಿಕೊಂಡಾಗ ಅದರಿಂದ ತಪ್ಪಿಸಿಕೊಳ್ಳಲು ದಂಪತಿ ಮೊದಲ ಮಹಡಿಗೆ ಓಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಮ್ಮಗೊಂಡನಹಳ್ಳಿಯ ಅಬ್ಬಿಗೆರೆ ಮುಖ್ಯರಸ್ತೆಯಲ್ಲಿರುವ ತೈಲ ಮತ್ತು ಲೂಬ್ರಿಕಂಟ್ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್‌ಗಳು ಸರಣಿ ಸ್ಫೋಟಗೊಂಡಿದ್ದವು. ಸ್ಫೋಟದ ತೀವ್ರತೆಗೆ ಕಟ್ಟಡಕ್ಕೆ ಹಾನಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅವಶೇಷಗಳು ಚದುರಿದ್ದವು. ಅಕ್ರಮವಾಗಿ ಸಿಲಿಂಡರ್‌ಗಳಿಗೆ ಗ್ಯಾಸ್ ಮರುಪೂರಣ ಮಾಡುವ ವೇಳೆ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ವರದಿಗಳು ತಿಳಿಸಿವೆ.

ಅಂಗಡಿಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳು, ಸಣ್ಣ ವಾಣಿಜ್ಯ ಸಿಲಿಂಡರ್‌ಗಳು ಹಾಗೂ ಪೆಟ್ರೋಲ್ ಮತ್ತು ಸೀಮೆಎಣ್ಣೆಯಂತಹ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದ್ದು, ಈ ವಸ್ತುಗಳಿಂದ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು ಎಂದು ವರದಿಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಗಂಗಮ್ಮನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Veto ಇಲ್ಲದ ಖಾಯಂ ಸದಸ್ಯತ್ವ ‘2ನೇ ದರ್ಜೆ’ಗೆ ಸಮಾನ, ಅರೆಬರೆ ಸದಸ್ಯತ್ವ ನಮಗೆ ಬೇಡ: ವಿಶ್ವಸಂಸ್ಥೆಗೆ ಭಾರತ ಖಡಕ್ ಸಂದೇಶ

'ಸತ್ಯಂ ಶಿವಂ ಸುಂದರಂ': ಸುಪ್ರೀಂನಲ್ಲಿ SIR ವಿಚಾರಣೆಗೂ ಮುನ್ನ ಫೋಟೊ ಹಂಚಿಕೊಂಡ ರಾಹುಲ್ ಗಾಂಧಿ!

ಫಲ ನೀಡದ ಬೆಳಗಾವಿ ಸಭೆ: ಕಬ್ಬು ಬೆಳೆಗಾರರಿಗೆ ಮತ್ತೆ ನಿರಾಸೆ: ಸಮಸ್ಯೆ ಆಲಿಸಲು ಅ. 29 ರಂದು ಮತ್ತೊಮ್ಮೆ ಸಿಎಂ ಸಭೆ..!

Russia ದ್ವಿಮುಖ ನೀತಿ: ಕದನ ವಿರಾಮ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ Kyiv ಮೇಲೆ ಕ್ಷಿಪಣಿಗಳ ಮಳೆಗರೆದ ಪುಟಿನ್ ಸೇನೆ, Zelenskyy ತೀವ್ರ ಆಕ್ರೋಶ..!

ಹೋಟೆಲ್ ರೂಮ್ ಹೊರಗೆ ಕುಸಿದು ಬಿದ್ದು ನವವಿವಾಹಿತೆ ಸಾವು: CCTVಯಲ್ಲಿ ಭೀಕರ ದೃಶ್ಯ ಸೆರೆ! ಕೊಲೆ ಎಂದ ಕುಟುಂಬಸ್ಥರು