ಹೆಚ್ ಡಿ ಕುಮಾರಸ್ವಾಮಿ  
ರಾಜ್ಯ

ಸ್ಟಿಂಗ್ ಕಾರ್ಯಾಚರಣೆ ತನಿಖೆಯಲ್ಲಿ ಬಿಗ್ ಟ್ವಿಸ್ಟ್: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮನೆಯಲ್ಲಿ ಸಿಸಿಬಿ ಅಧಿಕಾರಿಗಳಿಂದ ಮಹಜರು!

ರಿತೇಶ್ ಪಾಂಡೆ ವಿಚಾರಣೆ ವೇಳೆ ಆತ ನೀಡಿದ ಹೇಳಿಕೆ ಆಧರಿಸಿ ಕುಮಾರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿ ಮಹಜರು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದೆ. ಕುಮಾರಸ್ವಾಮಿ ಅವರ ದೆಹಲಿ ಗೃಹ ಕಚೇರಿಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಂಟೆಂಟ್ ಕ್ರಿಯೇಟರ್‌ ಆಗಿ ಪಾಂಡೆ ಕೆಲಸ ಮಾಡುತ್ತಿದ್ದ.

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ದೆಹಲಿಯಲ್ಲಿನ ಅಧಿಕೃತ ಗೃಹ ಕಚೇರಿಯಲ್ಲಿ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಮಹಜರ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲು ಪಾತ್ರ ವಹಿಸಿದ್ದ ಆರೋಪದ ಮೇರೆಗೆ ದೆಹಲಿಯ ರಿತೇಶ್ ಪಾಂಡೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಹೇಳಿಕೆ ಆಧರಿಸಿ ಕುಮಾರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿ ಮಹಜರ್ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್​ ವಿರುದ್ಧ ಕುಮಾರಸ್ವಾಮಿ ಗುಡುಗಿದ್ರು. ತನಿಖೆಗೆ ಆಗ್ರಹಿಸಿದ್ದು, ಜೆಡಿಎಸ್​ ಕಾರ್ಯಕರ್ತರನ್ನ ಬಂಧಿಸಿದ್ದಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ರು. ಇತ್ತೀಚೆಗೆ ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ ಲೋಡ್ ಮಾಡಿದ ಆರೋಪದ ಮೇರೆಗೆ ದೆಹಲಿಯ ರಿತೇಶ್ ಪಾಂಡೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ರಿತೇಶ್ ಪಾಂಡೆ ವಿಚಾರಣೆ ವೇಳೆ ಆತ ನೀಡಿದ ಹೇಳಿಕೆ ಆಧರಿಸಿ ಕುಮಾರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿ ಮಹಜರು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದೆ. ಕುಮಾರಸ್ವಾಮಿ ಅವರ ದೆಹಲಿ ಗೃಹ ಕಚೇರಿಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಂಟೆಂಟ್ ಕ್ರಿಯೇಟರ್‌ ಆಗಿ ಪಾಂಡೆ ಕೆಲಸ ಮಾಡುತ್ತಿದ್ದು, ಆತನಿಗೆ ಮಾಸಿಕ 50 ಸಾವಿರ ರೂ. ವೇತನ ನಿಗದಿಯಾಗಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

ಕೆಲ ದಿನಗಳ ಹಿಂದೆ ಎರಡು ಮೊಬೈಲ್‌ಗಳನ್ನು ಖರೀದಿಸಿ ತರುವಂತೆ ಆತನಿಗೆ ಪ್ರಜ್ವಲ್ ಪ್ರಸಾದ್ ಎಂಬಾತ 30 ಸಾವಿರ ರು. ನೀಡಿ ಸೂಚಿಸಿದ್ದ. ಅಂತೆಯೇ ದೆಹಲಿಯ ಕರೋಲ್‌ಬಾಗ್‌ನಲ್ಲಿ ತಲಾ 15 ಸಾವಿರ ರು.ಗೆ ಎರಡು ಮೊಬೈಲ್‌ಗಳನ್ನು ಕೊಂಡು ಪಾಂಡೆ ತಂದಿದ್ದ.

ಈ ಮೊಬೈಲ್‌ಗಳನ್ನೇ ಬಳಸಿ ಸ್ಟಿಂಗ್ ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಕೂಡ ಆ ವಿಡಿಯೋಗಳನ್ನು ಆತ ಹಂಚಿಕೊಂಡಿದ್ದ. ಹೀಗಾಗಿ ದೆಹಲಿಯ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಗೃಹ ಕಚೇರಿಯಲ್ಲಿ ಆರೋಪಿಯನ್ನು ಕರೆದೊಯ್ದು ಮಹಜರ್‌ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಿರುದ್ಧ INDIA ಒಕ್ಕೂಟ ಹೊಸ ಅಸ್ತ್ರ; ‘ಸಾರ್ವಜನಿಕ ದೋಷಾರೋಪಣೆ’ಗೆ ಸಜ್ಜು; ಇಂದು ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ನೀರಿಗೇ ರೂ.30-35 ಕೊಡ್ತೀರಿ, ಹಾಲಿನ ಬೆಲೆ ಹೆಚ್ಚಾದರೆ ವಿರೋಧವೇಕೆ?: ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

'ನೋಡಲು ಅಸಹ್ಯವಾಗಿದ್ದೀಯ, ಮೊದಲು ದೇಹದ ಆಕಾರ ಸರಿಪಡಿಸಿಕೋ': ಆರೋಗ್ಯದ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಟ್ರಂಪ್ ಅವಮಾನ..!

ರಾಜಮನೆತನದ ವಿರುದ್ಧ ಹೇಳಿಕೆ: ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಭುಗಿಲೆದ್ದ ತೀವ್ರ ಪ್ರತಿಭಟನೆ..!

ದೇಶದಲ್ಲಿ ಅರಾಜಕತೆ ಸೃಷ್ಟಿಸಲು I.N.D.I.A ಒಕ್ಕೂಟ ಯತ್ನ: ಶೋಭಾ ಕರಂದ್ಲಾಜೆ ಆರೋಪ