ಬೆಂಗಳೂರು: ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಬಹು ನಿರೀಕ್ಷಿತ ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಲಾಗುತ್ತಿದ್ದು, ಇನ್ಮುಂದೆ ಬೆಂಗಳೂರು-ಮುಂಬೈ ಪ್ರಯಾಣಿಕರು ಆರಾಮಾಗಿ ಮಲ್ಕೊಂಡು ಪ್ರಯಾಣ ಮಾಡಬಹುದು
ಭಾರತೀಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್(ಎಸ್ಎಮ್’ವಿಟಿ) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್(ಸಿಎಸ್ಎಮ್’ಟಿ) ನಡುವೆ ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್ ರೈಲಿಗೆ ಚಾಲನೆ ನೀಡಲು ಸಜ್ಜಾಗಿದ್ದು, ಈ ಎರಡು ಪ್ರಮುಖ ಮಹಾನಗರಗಳ ನಡುವಿನ ಸುದೀರ್ಘ ದೂರದ ರೈಲು ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲಿದೆ.
ನವೆಂಬರ್ 1, 2026ರ ಭಾನುವಾರದಂದು 'ರೈಲು ಸಂಖ್ಯೆ 06503 ಎಸ್ಎಮ್’ವಿಟಿ ಬೆಂಗಳೂರು – ಸಿಎಸ್ಎಮ್’ಟಿ ಮುಂಬೈ ಉದ್ಘಾಟನಾ ಏಕಮುಖ ವಿಶೇಷ ರೈಲು ಸಂಚರಿಸಲಿದೆ. ಈ ರೈಲು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೇಕ್ ಅನ್ನು ಒಳಗೊಂಡಿದ್ದು, ನವೆಂಬರ್ 1 ರಂದು 12:15 ಗಂಟೆಗೆ ಎಸ್ಎಮ್’ವಿಟಿ ಬೆಂಗಳೂರಿನಿಂದ ಹೊರಟು, ನವೆಂಬರ್ 2, 2026 ರಂದು 06:15 ಗಂಟೆಗೆ ಸಿಎಸ್ಎಮ್’ಟಿ ಮುಂಬೈ ತಲುಪಲಿದೆ.
ಮಾರ್ಗಮಧ್ಯದಲ್ಲಿ ಈ ಉದ್ಘಾಟನಾ ವಿಶೇಷ ರೈಲು ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಕೃಷ್ಣ, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ, ಲೋನಾವಾಲ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಎಸ್ಎಮ್’ವಿಟಿ ಬೆಂಗಳೂರು - ಸಿಎಸ್ಎಮ್ ಟಿ ಮುಂಬೈ ನಡುವೆ ನಿಯಮಿತ ಸೇವೆಗಳು
ಉದ್ಘಾಟನಾ ವಿಶೇಷ ರೈಲು ಸಂಚಾರದ ನಂತರ, ರೈಲು ಸಂಖ್ಯೆ 27652/27651 ಎಸ್ಎಮ್’ವಿಟಿ ಬೆಂಗಳೂರು – ಸಿಎಸ್ಎಮ್’ಟಿ ಮುಂಬೈ – ಎಸ್ಎಮ್’ವಿಟಿ ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್'ನ ನಿಯಮಿತ ಸೇವೆಗಳು ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸಲಿವೆ.
ರೈಲು ಸಂಖ್ಯೆ 27652 ಎಸ್ಎಮ್’ವಿಟಿ ಬೆಂಗಳೂರು – ಸಿಎಸ್ಎಮ್’ಟಿ ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್, ನವೆಂಬರ್ 3, 2026 ರಿಂದ ಸೋಮವಾರವನ್ನು ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ಈ ರೈಲು ಎಸ್ಎಮ್’ವಿಟಿ ಬೆಂಗಳೂರಿನಿಂದ 19:45 ಗಂಟೆಗೆ ಹೊರಟು, ಮರುದಿನ 11:55 ಗಂಟೆಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ತಲುಪುವ ಮೊದಲು ಅನಂತಪುರ (22:28/22:30), ಗುಂತಕಲ್ (23:20/23:25), ರಾಯಚೂರು (01:03/01:05), ಯಾದಗಿರಿ (01:43/01:45), ಕಲಬುರಗಿ (03:08/03:10), ಸೋಲಾಪುರ (04:20/04:25), ಪುಣೆ (08:00/08:05) ಮತ್ತು ಕಲ್ಯಾಣ್ (10:42/10:44) ನಿಲ್ದಾಣಗಳಲ್ಲಿ ನಿಲ್ಲಲಿದೆ.
ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 27651 ಸಿಎಸ್ಎಮ್’ಟಿ ಮುಂಬೈ – ಎಸ್ಎಮ್’ವಿಟಿ ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್, ನವೆಂಬರ್ 2, 2026 ರಿಂದ ಮಂಗಳವಾರವನ್ನು ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ಈ ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್’ನಿಂದ 20:10 ಗಂಟೆಗೆ ಹೊರಟು, ಮರುದಿನ 12:00 ಗಂಟೆಗೆ ಎಸ್ಎಮ್’ವಿಟಿ ಬೆಂಗಳೂರು ತಲುಪುವ ಮೊದಲು ಕಲ್ಯಾಣ್ (20:48/20:50), ಪುಣೆ (23:40/23:45), ಸೋಲಾಪುರ (03:00/03:05), ಕಲಬುರಗಿ (04:13/04:15), ಯಾದಗಿರಿ (05:08/05:10), ರಾಯಚೂರು (06:03/06:05), ಗುಂತಕಲ್ (07:30/07:35), ಮತ್ತು ಅನಂತಪುರ (08:38/08:40) ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೇಕ್ ಹೊಂದಿರಲಿದ್ದು, ಇದರಲ್ಲಿ 08 ಮೋಟಾರ್ ಕಾರ್ ಬೋಗಿಗಳು (MC), 04 ಟ್ರೇಲರ್ ಕಾರ್ ಬೋಗಿಗಳು (TC), 02 ನಾನ್-ಡ್ರೈವಿಂಗ್ ಟ್ರೇಲರ್ ಕಾರ್ ಬೋಗಿಗಳು (NDTC) ಮತ್ತು 02 ಡ್ರೈವಿಂಗ್ ಟ್ರೇಲರ್ ಕಾರ್ ಬೋಗಿಗಳು (DTC) ಇರಲಿವೆ.
ಈ ವಂದೇ ಭಾರತ್ ಸ್ಲೀಪರ್ ಸೇವೆಯು ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಲಭವಾದ ರಾತ್ರಿ ಪ್ರಯಾಣದ ಸೌಲಭ್ಯವನ್ನು ಒದಗಿಸುವ ಜೊತಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ರೈಲು ಸಂಪರ್ಕವನ್ನು ಬಲಪಡಿಸುತ್ತದೆ.