ಹೊಟೇಲ್ ನ ಪ್ರವೇಶದ್ವಾರ  
ರಾಜ್ಯ

ಬೆಂಗಳೂರು: ಐಷಾರಾಮಿ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ವಿದ್ಯುತ್ ಪ್ರವಹಿಸಿದ ಶಂಕೆ; ಇಬ್ಬರು ವಿದೇಶಿಯರು ಸಾವು; Video

ಹಲಸೂರಿನ ಕಾನ್ರಾಡ್ ಹೊಟೇಲ್ ನ ಮೂರನೇ ಮಹಡಿಯಲ್ಲಿರುವ ಈಜುಕೊಳದ ಡೆಕ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಾಥೆ ತಿಳಿಸಿದ್ದಾರೆ. ಮೃತಪಟ್ಟವರನ್ನು ಜರ್ಮನಿ ಮತ್ತು ಸ್ಲೊವಾಕಿಯಾ ದೇಶಗಳ ಪ್ರಜೆಗಳು ಎಂದು ಗುರುತಿಸಲಾಗಿದೆ.

ಬೆಂಗಳೂರು: ನಗರದ ಹಲಸೂರಿನಲ್ಲಿರುವ ಪಂಚತಾರಾ ಹೊಟೇಲ್ ನ ಈಜುಕೊಳದಲ್ಲಿ ನಿನ್ನೆ ಶುಕ್ರವಾರ ಸಂಜೆ ಈಜುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿದ ಶಂಕೆಯಿಂದ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ. ಅವರನ್ನು ರಕ್ಷಿಸಲು ಯತ್ನಿಸಿದ ಅಮೆರಿಕದ ಪ್ರವಾಸಿ ಸೇರಿದಂತೆ ಮತ್ತಿಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಜರ್ಮನಿ ಪ್ರಜೆಯಾಗಿರುವ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ (57ವ) ಹಾಗೂ ಸ್ಲೊವಾಕಿಯಾ ಪ್ರಜೆಯಾಗಿರುವ ಜುರಾಜ್ ಹೋರ್ವಾತ್ (45ವ) ಎಂದು ಗುರುತಿಸಲಾಗಿದೆ. ಅಲೆಕ್ಸಾಂಡರ್ ಅವರು ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯಾಗಿದ್ದರೆ, ಜುರಾಜ್ ಅವರು ಐಬಿಎಂ ಕಂಪನಿಯಲ್ಲಿ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಹಲಸೂರಿನ ಕಾನ್ರಾಡ್ ಹೊಟೇಲ್ ನ ಮೂರನೇ ಮಹಡಿಯಲ್ಲಿರುವ ಈಜುಕೊಳದ ಡೆಕ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಾಥೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಇಬ್ಬರು ಈಜುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಅಸ್ವಸ್ಥರಾಗಿದ್ದಾರೆ. ಇದನ್ನು ಗಮನಿಸಿದ ಮತ್ತಿಬ್ಬರು ಅವರನ್ನು ರಕ್ಷಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಅವರಿಗೂ ವಿದ್ಯುತ್ ಪ್ರವಹಿಸಿ ಗಾಯಗಳಾಗಿವೆ.

ಗಾಯಗೊಂಡವರನ್ನು ಅಮೆರಿಕದ ಪ್ರಜೆ ಹಾಗೂ ಹೊಟೇಲ್ ನಲ್ಲಿ ಪ್ರವಾಸಿಯಾಗಿ ತಂಗಿದ್ದ ಮ್ಯಾಥ್ಯೂ ಡಿಸಾಂಟಿಸ್ (41ವ) ಮತ್ತು ಹೊಟೇಲ್ ಈಜುಕೊಳದ ಸಿಬ್ಬಂದಿ ಹಾಗೂ ಜೀವರಕ್ಷಕನಾಗಿ ಕೆಲಸ ಮಾಡುತ್ತಿದ್ದ ರಾಹುಲ್ ತಿವಾರಿ (28ವ) ಎಂದು ಗುರುತಿಸಲಾಗಿದೆ.

ಇಬ್ಬರನ್ನೂ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯುತ್ ದೋಷದ ಸಾಧ್ಯತೆ ಹಾಗೂ ಈಜುಕೊಳದಲ್ಲಿನ ಸುರಕ್ಷತಾ ವ್ಯವಸ್ಥೆಗಳು ಸೇರಿದಂತೆ ವಿದ್ಯುತ್ ಪ್ರವಹಿಸಲು ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈಜುಕೊಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಜುರಾಜ್ ತಮ್ಮ ಕುಟುಂಬದೊಂದಿಗೆ ಹೊಟೇಲ್ ಗೆ ಆಗಮಿಸಿ ತಂಗಿದ್ದರು. ಅಲೆಕ್ಸಾಂಡರ್ ಅವರು ಅಕ್ಟೋಬರ್ 20ರಂದು ಹೊಟೇಲ್ ಗೆ ಚೆಕ್ ಇನ್ ಆಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಮತಗಳ್ಳತನ’ ಕುರಿತು ಚರ್ಚಿಸಲು ವಿಶೇಷ ಅಧಿವೇಶನಕ್ಕೆ ಬಿಜೆಪಿ ಸಿದ್ಧ, ಆದರೆ ವಿರೋಧ ಪಕ್ಷಗಳಿಗೆ ಆಸಕ್ತಿಯಿಲ್ಲ: ಅಮಿತ್ ಶಾ

ISRO ಮುಡಿಗೆ ಮತ್ತೊಂದು ಗರಿ: GSLV-F18 ರಾಕೆಟ್ ಮೂಲಕ NVS-03 ಉಪಗ್ರಹ ಯಶಸ್ವಿ ಉಡಾವಣೆ..!

Hormuzನಲ್ಲಿ ತೈಲ ಟ್ಯಾಂಕರ್‌ ಮೇಲೆ limpet ಮೈನ್ ದಾಳಿ: ನಾವಿಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ, 27 ಮಂದಿ ಭಾರತೀಯರು ಪ್ರಾಣಾಪಾಯದಿಂದ ಪಾರು..!

ನಂದಿನಿ ಗ್ರಾಹಕರ ಜೇಬಿಗೆ ಕತ್ತರಿ; ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವನ್ನೂ ಪರಿಷ್ಕರಿಸಿದ ಕೆಎಂಎಫ್, ಪ್ರತಿ ಲೀಟರ್‌ಗೆ 14 ರೂ. ಹೆಚ್ಚಳ..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಹವಾಮಾನ ಇಲಾಖೆ 'Yellow alert' ನಡುವೆಯೂ ಟೇಕಾಫ್, ನಿರ್ಲಕ್ಷ್ಯಕ್ಕೆ ಆರು ಜೀವಗಳು ಬಲಿ..!