ಸಚಿವ ಈಶ್ವರ ಬಿ ಖಂಡ್ರೆ  
ರಾಜ್ಯ

2027ರ ಜನವರಿಯೊಳಗೆ ಜಿಪಂ, ತಾಪಂ ಚುನಾವಣೆ ಖಚಿತ: ಸಚಿವ ಈಶ್ವರ್‌ ಖಂಡ್ರೆ

ಬಹುತೇಕ ಜನವರಿ ಮೊದಲ ಅಥವಾ 2ನೇ ವಾರದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯುತ್ತವೆ. ಈ ಚುನಾವಣೆಗಳ ತರುವಾಯ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಬೆಂಗಳೂರು: ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು 2027ರ ಜನವರಿಯೊಳಗೆ ನಡೆದೇ ನಡೆಯುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಶನಿವಾರ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಈಶ್ವರ್ ಖಂಡ್ರೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕರಡು ಮೀಸಲು ಅಧಿಸೂಚನೆ ಹೊರಡಿಸಿದೆ. ಬರುವ ಜನವರಿ ಮೊದಲ ಅಥವಾ ಎರಡನೇ ವಾರಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯುತ್ತವೆ ಎಂದರು.

ಅ.19ರ ವರೆಗೆ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸುಮಾರು 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಬಂದಿದ್ದು, ಅಧಿಕಾರಿಗಳು ನಿಯಮಾನುಸಾರ ಪರಿಶೀಲನೆ ಮಾಡುತ್ತಿದ್ದು, ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ತರುವಾಯ ರಾಜ್ಯ ಚುನಾವಣೆ ಆಯೋಗ, ಕೇಂದ್ರ ಚುನಾವಣೆ ಆಯೋಗದಿಂದ ಮತದಾರರ ಪಟ್ಟಿ ಪಡೆದು ಅಥವಾ ತನ್ನಲ್ಲಿರುವ ಮತದಾರರ ಪಟ್ಟಿಯನ್ನೇ ಪರಿಷ್ಕರಿಸಿ ಚುನಾವಣೆ ನಡೆಸುವ ಕುರಿತಂತೆ ಕ್ರಮ ವಹಿಸಲಿದೆ.

ಬಹುತೇಕ ಜನವರಿ ಮೊದಲ ಅಥವಾ 2ನೇ ವಾರದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯುತ್ತವೆ. ಈ ಚುನಾವಣೆಗಳ ತರುವಾಯ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಈ ಬಾರಿಯ ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM) ಬದಲಾಗಿ ಬ್ಯಾಲೆಟ್ ಪೇಪರ್ (ಮತಪೆಟ್ಟಿಗೆ) ವ್ಯವಸ್ಥೆಯನ್ನು ಬಳಸಲು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಬಾರಿ ಮೊದಲು ಜಿಪಂ ಮತ್ತು ತಾಪಂ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಆ ನಂತರವೇ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಹಾಗೂ ಸಚಿವ ಸಂಪುಟ ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ರೈತರನ್ನು ಉಳಿಸಲು ಸಕ್ಕರೆ MSP ದರವನ್ನು ಕೇಂದ್ರ 50 ರೂ.ಗೆ ಏರಿಸಬೇಕು: ಸಿಎಂ ಡಿಕೆ ಶಿವಕುಮಾರ್

ಫೇಕ್ AI ವಿಡಿಯೋಗೂ ಸಬ್‌ಸ್ಕ್ರಿಪ್ಷನ್! ಗ್ಲಾಮರ್ ನೋಡಲು 400 ರೂ. ಕೊಡುತ್ತಾರೆ: ನಟಿ ರಿತಿಕಾ ಸಿಂಗ್ ಶಾಕ್!

Raptadu School Attack: ‘ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ದಾಳಿ ನಡೆದು ಹೋಗಿತ್ತು’; ಭಯಾನಕ ಘಟನೆ ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿಕ್ಷಕಿ! Video

ವಿಚ್ಛೇದನ ಬೆನ್ನಲ್ಲೇ 2ನೇ ಮದುವೆಯಾದ ಒಮರ್ ಅಬ್ದುಲ್ಲಾ; ಪತ್ರಕರ್ತೆ ನಿಧಿ ಕೈಹಿಡಿದ ಕಾಶ್ಮೀರ CM!